ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆಯಿಂದಾಗಿ ಶಾಲಾ-ಕಾಲೇಜ್ ಆರಂಭವಾಗದ ಹಿನ್ನೆಲೆ ವಿದ್ಯಾರ್ಥಿಗಳಿಗೆ ಮನೆಯಲ್ಲೇ ಅಭ್ಯಾಸ ಮಾಡಲು ಅನುಕೂಲ ಕಲ್ಪಿಸಲು ಸರ್ಕಾರ ಮುಂದಾಗಿದೆ. ಹೀಗಾಗಿ 1 ರಿಂದ 12 ನೇ ತರಗತಿಯವರೆಗಿನ ಎಲ್ಲಾ ಪುಸ್ತಕಗಳನ್ನು ಪಿಡಿಎಫ್ (pdf) ರೂಪದಲ್ಲಿ ಸರ್ಕಾರ ಸಿದ್ಧಪಡಿಸಿದೆ.
ವಿದ್ಯಾರ್ಥಿಗಳು ಮಾಡಬೇಕಾಗಿರುವುದಿಷ್ಟು: ನಿಮಗೆ ಬೇಕಾದ ಪಠ್ಯದ ವಿಷಯ, ಯಾವ ತರಗತಿ ಮತ್ತು ಯಾವ ಮಾಧ್ಯಮ ಎಂದು ಬರೆದು ಡೌನ್‌ಲೋಡ್ ಮಾಡಿಕೊಳ್ಳಬಹುದು. ನಿಮ್ಮ ಮನೆಯಲ್ಲಿ ಒಬ್ಬ ವಿದ್ಯಾರ್ಥಿ ಅಥವಾ ಸಂಬಂಧಿ ಇದ್ದರೆ ಅವರಿಗೆ ಈ ಲಿಂಕ್ ಕಳುಹಿಸಿ. ಆ ಮಕ್ಕಳು ಸಹ ಅಧ್ಯಯನ ಮಾಡುತ್ತಾರೆ.
ಉತ್ತಮ ಪೋಷಕರಾಗಿ ನಿಮ್ಮ ಕರ್ತವ್ಯವನ್ನು ಮಾಡಿ. ನಿಮ್ಮ ಮಕ್ಕಳ ಭವಿಷ್ಯವು ನಿಮ್ಮ ಕೈಯಲ್ಲಿದೆ. ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ನ್ನು ಕ್ಲಿಕ್ ಮಾಡಿ : http://www.ktbs.kar.nic.in/New/index.html#!/textbook