ಬೆಂಗಳೂರು: ಫೇಸ್ಬುಕ್ ಪೋಸ್ಟ್ ಹಾಗೂ ರಾಜಕೀಯ ಜಿದ್ದಾ ಜಿದ್ದಿಯಿಂದಾಗಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜೆ ಹಳ್ಳಿ ಠಾಣೆಗೆ ಆಗಮಿಸಿ ಅಖಂಡ ಶ್ರೀನಿವಾಸಮೂರ್ತಿ ದೂರು ನೀಡಿದ್ದಾರೆ.

ಮಂಗಳವಾರ ನಡೆದ ದುರ್ಘಟನೆ ವೇಳೆ ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ, ಕಚೇರಿ, ಅಕ್ಕ ಪಕ್ಕದವರ ಆಸ್ತಿ-ಪಾಸ್ತಿ ಸಂಪೂರ್ಣವಾಗಿ ಧ್ವಂಸವಾಗಿತ್ತು. ಹೀಗಾಗಿ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಆರೋಪಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಶಾಸಕರ ಮನೆ ಹಾಗೂ ಕಚೇರಿಗೆ ಬೆಂಕಿ ಹಾಕಿ ಸುಮಾರು 1.5 ಕೋಟಿ ಮೌಲ್ಯದ ಆಸ್ತಿ- ಪಾಸ್ತಿ ನಷ್ಟವಾಗಿದೆ ಎಂದು ಶ್ರೀನಿವಾಸಮೂರ್ತಿ ಹೇಳಿದ್ದಾರೆ. ಹೀಗಾಗಿ ತನ್ನ ಆಪ್ತರ ಜೊತೆ ಠಾಣೆಗೆ ತೆರಳಿ ಶಾಸಕ ದೂರು ನೀಡಿದ್ದಾರೆ.
ದೂರು ನೀಡಲು ಬಂದ ವೇಳೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಡಿಜೆ ಹಳ್ಳಿ ಠಾಣೆಯನ್ನು ಪರಿಶೀಲನೆ ನಡೆಸಿದರು.