ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನ 7 ಗಂಟೆ ತಡವಾಗಿ ಟೇಕ್ ಆಫ್ ಆಗಿದೆ, ಏರ್ ಇಂಡಿಯಾ ಕಂಪನಿಯ ನಿರ್ಲಕ್ಷ್ಯಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೂನ್ 11 ರಂದು ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾದ ವಿಮಾನ ಸಂಖ್ಯೆ AI610 ರಾತ್ರಿ 7:20ಕ್ಕೆ ಟೇಕ್ ಆಪ್ ಆಗಬೇಕಿತ್ತು.
ಆದರೆ, 7 ಗಂಟೆ ತಡವಾಗಿ ಮರುದಿನ ಮುಂಜಾನೆ 4 ಗಂಟೆಗೆ ಟೇಕ್ ಆಪ್ ಆಗಿದೆ. ಹಾಗೆಯೇ ಮುಂಬೈಗೆ ಹೋಗಬೇಕಿದ್ದ ಮತ್ತೊಂದು ಏರ್ ಇಂಡಿಯಾದ AI642 ಸಹ ತಡವಾಗಿ ಟೇಕ್ ಆಪ್ ಆಗಿದೆ. ವಿಮಾನ ನಿಲ್ದಾಣದಲ್ಲಿ ಕಾದು ಕಾದು ಸುಸ್ತಾಗಿದ್ದ ಪ್ರಯಾಣಿಕರು ಏರ್ ಇಂಡಿಯಾ ಕಾರ್ಯವೈಖರಿಯ ಬಗ್ಗೆ ಏರ್ಪೋರ್ಟ್ ನಲ್ಲಿಯೇ ಆಕ್ರೋಶ ಹೊರಹಾಕಿ ಟ್ವಿಟರ್ ನಲ್ಲಿಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
-
A Volvo bus btw Bengaluru Mumbai takes 18 hrs. @airindia takes at least 15 hrs. Former definitely better @TataCompanies #AI610
— Kalpana Sharma (@kalpana1947) June 11, 2023 " class="align-text-top noRightClick twitterSection" data="
">A Volvo bus btw Bengaluru Mumbai takes 18 hrs. @airindia takes at least 15 hrs. Former definitely better @TataCompanies #AI610
— Kalpana Sharma (@kalpana1947) June 11, 2023A Volvo bus btw Bengaluru Mumbai takes 18 hrs. @airindia takes at least 15 hrs. Former definitely better @TataCompanies #AI610
— Kalpana Sharma (@kalpana1947) June 11, 2023
7 ಗಂಟೆ ತಡವಾಗಿ ಟೇಕ್ ಆಫ್ ಆಗಿದ್ದ ಬಗ್ಗೆ ಟ್ವಿಟರ್ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಚಾರ್ಟೆಡ್ ಅಕೌಂಟಡ್ ಅರ್ಜುನ್ ವಿ ಏರ್ ಇಂಡಿಯಾ ಆಡಳಿತ ಮಂಡಳಿಯ ಕಾರ್ಯಾಚರಣೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಂಕಣಕಾರರಾದ ಕಲ್ಪನಾ ಶರ್ಮಾ ಟ್ವೀಟ್ ಮಾಡಿ ವೋಲ್ವಾ ಬಸ್ ಬೆಂಗಳೂರಿನಿಂದ ಮುಂಬೈ ತಲುಪಲು 18ಗಂಟೆ ತೆಗೆದುಕೊಳ್ಳುತ್ತೆ, ಕನಿಷ್ಠಪಕ್ಷ ನೀವು ಮುಂಬೈಗೆ 15 ಗಂಟೆಗಳಾದರೂ ತೆಗೆದುಕೊಳ್ಳಿ ಎಂದು ಛಾಟಿ ಬೀಸಿದ್ದಾರೆ.
54 ಪ್ರಯಾಣಿಕರನ್ನು ನಿಲ್ದಾಣದಲ್ಲೇ ಬಿಟ್ಟು ಹೋಗಿದ್ದ ವಿಮಾನ: ಕೆಲ ದಿನಗಳ ಹಿಂದೆ ನಡೆದ ಘಟನೆಯಲ್ಲಿ ಏರ್ಲೈನ್ಸ್ ಸಿಬ್ಬಂದಿಯ ಯಡವಟ್ಟಿನಿಂದ ಸುಮಾರು 54 ಪ್ರಯಾಣಿಕರನ್ನು ಬಿಟ್ಟು ವಿಮಾನ ಟೆಕ್ ಆಫ್ ಆಗಿತ್ತು. ಏರ್ಲೈನ್ಸ್ ನಿರ್ಲಕ್ಷ್ಯದ ವಿರುದ್ಧ ಪ್ರಯಾಣಿಕರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿ ಆಕ್ರೋಶ ಹೊರ ಹಾಕಿದ್ದರು.
-
At @airindia counter in Bengaluru for flight 610 to Mumbai. Not giving any info, any alternative pic.twitter.com/wjveItnTiM
— Kalpana Sharma (@kalpana1947) June 11, 2023 " class="align-text-top noRightClick twitterSection" data="
">At @airindia counter in Bengaluru for flight 610 to Mumbai. Not giving any info, any alternative pic.twitter.com/wjveItnTiM
— Kalpana Sharma (@kalpana1947) June 11, 2023At @airindia counter in Bengaluru for flight 610 to Mumbai. Not giving any info, any alternative pic.twitter.com/wjveItnTiM
— Kalpana Sharma (@kalpana1947) June 11, 2023
G8 116 ಸಂಖ್ಯೆಯ ವಿಮಾನ ಕೆಂಪೇಗೌಡ ಏರ್ಪೋಟ್ನಿಂದ ದೆಹಲಿಗೆ ಹೊರಡಬೇಕಿತ್ತು. ಟರ್ಮಿನಲ್ನಿಂದ ವಿಮಾನದವರೆಗೆ ಮೊದಲನೇ ಟ್ರಿಪ್ನಲ್ಲಿ ಬಸ್ ಮೂಲಕ 50 ಜನ ಪ್ರಯಾಣಿಕರು ತೆರಳಿದ್ದರು. ಎರಡನೇ ಟ್ರಿಪ್ನಲ್ಲಿ 54 ಪ್ರಯಾಣಿಕರು ತೆರಳಿ ವಿಮಾನ ಏರಬೇಕಿತ್ತು. ಆದರೆ ಎರಡನೇ ಟ್ರಿಪ್ ಬಸ್ ಬರುವ ಮುನ್ನವೇ ವಿಮಾನ ಟೇಕ್ ಆಫ್ ಆಗಿತ್ತು ಎಂದು ಪ್ರಯಾಣಿಕರು ದೂರಿದ್ದರು.
ಪ್ರಯಾಣಿಕರನ್ನು ಗಮನಿಸದೇ ಏರ್ಲೈನ್ಸ್ ಸಿಬ್ಬಂದಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದರು. ಪ್ರಯಾಣಿಕರು ಆಕ್ರೋಶ ಹೊರಹಾಕುತ್ತಿದ್ದಂತೆ ಕ್ಷಮೆ ಕೇಳಿದ ಗೋಫಸ್ಟ್ ಸಂಸ್ಥೆ ಟ್ವಿಟರ್ನಲ್ಲಿ ಕ್ಷಮೆ ಕೇಳಿತ್ತು. ಪ್ರಯಾಣಿಕರ ಮಾಹಿತಿ ಪಡೆದು ಕ್ಷಮೆ ಕೋರಿ, ಶೀಘ್ರ ಪರಿಹಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತ್ತು.
ಇದನ್ನೂ ಓದಿ: ಏರ್ಪೋರ್ಟ್ನಲ್ಲೇ 54 ಪ್ರಯಾಣಿಕರು ಬಾಕಿ, ವಿಮಾನ ಟೇಕ್ ಆಫ್: ಏರ್ಲೈನ್ಸ್ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಆಕ್ರೋಶ