ETV Bharat / state

ಮದ್ಯದ ಅಂಗಡಿಗಳನ್ನು ತೆರೆಯಲು ಪರವಾನಗಿ ನೀಡುವುದನ್ನು ವಿರೋಧಿಸಿ ಎಐಎಂಎಸ್‌ಎಸ್‌ ಪ್ರತಿಭಟನೆ - ಈಟಿವಿ ಭಾರತ್​ ಕನ್ನಡ ನ್ಯೂಸ್

ಬೆಂಗಳೂರಿನಲ್ಲಿ ಅಬಕಾರಿ ಇಲಾಖೆ ಪ್ರಸ್ತಾವನೆಯನ್ನು ಖಂಡಿಸಿ ಎಐಎಂಎಸ್‌ಎಸ್‌ ಪ್ರತಿಭಟನೆ ನಡೆಸಿದೆ.

ಎಐಎಂಎಸ್‌ಎಸ್‌ ಪ್ರತಿಭಟನೆ
ಎಐಎಂಎಸ್‌ಎಸ್‌ ಪ್ರತಿಭಟನೆ
author img

By ETV Bharat Karnataka Team

Published : Sep 27, 2023, 6:09 PM IST

Updated : Sep 27, 2023, 6:26 PM IST

ಎಐಎಂಎಸ್‌ಎಸ್‌ ಪ್ರತಿಭಟನೆ

ಬೆಂಗಳೂರು : ರಾಜ್ಯದಲ್ಲಿ ಹೊಸದಾಗಿ 1000ಕ್ಕೂ ಹೆಚ್ಚು ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡಲು ಅಬಕಾರಿ ಇಲಾಖೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್)ಯು ಖಂಡಿಸಿದ್ದು, ಬೆಂಗಳೂರು ಜಿಲ್ಲಾ ಸಮಿತಿಯಿಂದ ಬುಧವಾರ ನಗರದ ಫ್ರೀಡಂಪಾರ್ಕನಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಐಎಂಎಸ್‌ಎಸ್‌ ಜಿಲ್ಲಾ ಕಾರ್ಯದರ್ಶಿ ಎ ಶಾಂತ ಅವರು, ಈಗಾಗಲೇ ಮದ್ಯಪಾನದಂತಹ ದುಶ್ಚಟದಿಂದಾಗಿ ಲಕ್ಷಾಂತರ ಕುಟುಂಬಗಳು ಬೀದಿಗೆ ಬಿದ್ದಿವೆ. ಇಂತಹ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಗಳು ಹಾಗೂ ನಗರಗಳಲ್ಲಿನ ಸೂಪರ್ ಮಾರುಕಟ್ಟೆಗಳಲ್ಲಿ ಹೊಸ ಮತ್ತು ಬಳಕೆ ಇಲ್ಲದ ಪರವಾನಗಳಿಗೆ ಮರುಜೀವ ನೀಡುಬೇಕು ಎಂದು ಅಬಕಾರಿ ಇಲಾಖೆ ಪ್ರಸ್ತಾವನೆ ನೀಡಿದೆ. ಅಲ್ಲದೆ, ಇಲಾಖೆಯು ಸುಮಾರು 600ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮದ್ಯದ ಅಂಗಡಿಗಳು ಇಲ್ಲದಿರುವುದನ್ನು ಗುರುತಿಸಿ, ಮದ್ಯದ ಅಂಗಡಿಗಳಿಗೆ ಅನುಮತಿ ನೀಡಲು ಸಜ್ಜಾಗಿದೆ ಎಂದರು.

ಸಮಾಜದಲ್ಲಿ ಹೆಣ್ಣುಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ, ಕುಟುಂಬ ಕಲಹಗಳಿಗೆ ಸಮಾಜಘಾತಕ ಕೃತ್ಯಗಳಿಗೆ ಮದ್ಯಪಾನ ಎಡೆ ಮಾಡಿಕೊಡುವುದನ್ನು ಸರ್ಕಾರದ ಅಂಕಿಅಂಶಗಳ ಬಹಿರಂಗಪಡಿಸಿವೆ. ಮೊದಲೇ ಜನರು ಕಳ್ಳಬಟ್ಟಿ ಕುಡಿದು ಸಾಯುತ್ತಿದ್ದಾರೆ. ಸಮಾಜದ 'ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ವರಮಾನವನ್ನು ಸಂಗ್ರಹಿಸಲು' ಎಂಬ ಕ್ಷುಲ್ಲಕ ಕಾರಣ ನೀಡಿ ಸಮಾಜವನ್ನು ಸಾಂಸ್ಕೃತಿಕ ಅಧಪತನಕ್ಕೆ ತಳ್ಳಲು ಸರ್ಕಾರವು ಈ ಮಾರ್ಗ ಹಿಡಿದಿರುವುದು ನಾಚಿಕೆಗೇಡಿನ ಸಂಗತಿ. ಸರ್ಕಾರದ ಈ ಪ್ರಸ್ತಾವನೆಯನ್ನು ಮಹಿಳಾ ಸಮುದಾಯವು ಒಕ್ಕೊರಳಿನಿಂದ ಖಂಡಿಸಬೇಕಿದೆ ಎಂದು ಶಾಂತ ನುಡಿದರು.

ಟಿಪ್ಪುವನ್ನು ಎತ್ತಿಹಿಡಿಯುವ ಸರ್ಕಾರವು 'ಸರ್ಕಾರದ ಆದಾಯಕ್ಕಿಂತ ಜನತೆಯ ಶಾಂತಿಯುತ ಜೀವನ ಮುಖ್ಯ' ಎಂಬ ಅವರ ಆದರ್ಶವನ್ನು ಗಾಳಿಗೆ ತೂರಿದೆ. ಸರ್ಕಾರದ ಇಂತಹ ಜನ ವಿರೋಧಿ, ಮಹಿಳಾ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಸಂಘಟಿತ ಹೋರಾಟ ಕಟ್ಟಬೇಕು ಎಂದು ಪ್ರತಿಭಟನೆಕಾರರಿಗೆ ಕರೆ ನೀಡಿದರು.

ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿದ ಎಐಡಿವೈಒ (ಅಖಿಲ ಭಾರತ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್)ನ ಬೆಂಗಳೂರು ಅಧ್ಯಕ್ಷ ವಿನಯ್‌ ಸಾರಥಿ, ಗ್ಯಾರಂಟಿಗಳ ಹೆಸರಿನಲ್ಲಿ ಜನಗಳ ಜೀವನ ಮಟ್ಟ ಸುಧಾರಿಸುತ್ತೇವೆಂದು ಹೇಳುತ್ತಿರುವ ಸರ್ಕಾರವು, ಹಿಂಬಾಗಿಲಿನ ಮೂಲಕ ಜನಸಾಮಾನ್ಯರನ್ನು ಸುಲಿಗೆ ಮಾಡಲು ಹೊರಟಿದೆ. ಕುಡಿತದ ಚಟಕ್ಕೆ ಬಲಿಯಾಗಿ ಬಾಳಿ ಬದುಕ ಬೇಕಾದ ಯುವಕರು ಸಾವನ್ನಪ್ಪುತ್ತಿದ್ದು, ಅಪಘಾತಗಳು ಹೆಚ್ಚುತ್ತಿವೆ. ಯುವಜನರಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವುದನ್ನು ಬಿಟ್ಟು, ಅವರ ನೈತಿಕ ಬೆನ್ನೆಲುಬನ್ನು ಮುರಿಯಲು ಕಾರಣವಾಗುವ ಮದ್ಯಪಾನವನ್ನು ಪ್ರೋತ್ಸಾಹಿಸುತ್ತಿದೆ ಎಂದು ಆರೋಪಿಸಿದರು.

ಜನರ ಅರ್ಥಿಕತೆಯ ಸಬಲೀಕರಣಕ್ಕೆ ಕೆಲವು ಗ್ಯಾರಂಟಿಗಳನ್ನು ಘೋಷಿಸಿರುವ ಸರಕಾರವು, ಸಮಾಜದ ಸ್ವಾಸ್ಥ್ಯದ ಗ್ಯಾರಂಟಿಯನ್ನು ಖಾತ್ರಿಪಡಿಸುವ ತನ್ನ ಕನಿಷ್ಠ ಜವಬ್ದಾರಿಯನ್ನು ಮರೆಯಬಾರದು. ಸರ್ಕಾರಕ್ಕೆ ನಿಜವಾಗಿಯೂ ಆದಾಯದ ಕೊರತೆ ಇದ್ದರೆ ರಾಜ್ಯದ ದೊಡ್ಡ ದೊಡ್ಡ ಕಾರ್ಪೋರೇಟ್ ವಲಯದವರ ಸಂಪತ್ತಿನ ಮೇಲೆ ತೆರಿಗೆಗಳನ್ನು ಹಾಕಲಿ, ಆ ಧೈರ್ಯ ಸರ್ಕಾರಕ್ಕೆ ಇದೆಯೇ? ಅದು ಬಿಟ್ಟು ಮತ್ತೆ ಹೆಚ್ಚಿನ ಮದ್ಯದ ಅಂಗಡಿಗಳಿಗೆ ಅನುಮತಿ ನೀಡಿ ಜನಸಾಮಾನ್ಯರನ್ನು ಸುಲಿಗೆ ಮಾಡಿ, ಅದರಲ್ಲೂ ಮುಖ್ಯವಾಗಿ ಯುವಜನರನ್ನು ನೈತಿಕ ಅಧಪತನಕ್ಕೆ ತಳ್ಳುತ್ತಿರುವ ಸರ್ಕಾರದ ಈ ನಿರ್ಧಾರವನ್ನು ನಾಡಿನ ಪ್ರಜ್ಞಾವಂತ ಜನತೆ ತೀವ್ರವಾಗಿ ಖಂಡಿಸಬೇಕು ಎಂದು ವಿನಯ್‌ ಸಾರಥಿ ವಾಗ್ದಾಳಿ ನಡೆಸದರು.

ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದ ಎಐಎಂಎಸ್‌ಎಸ್​ ನ ಜಿಲ್ಲಾ ಉಪಾಧ್ಯಕ್ಷೆ ಹೆಚ್.ಎಲ್ ನಿರ್ಮಲ ಮಾತನಾಡಿ, ಇಂದು ಬೆಲೆ ಏರಿಕೆ, ಬಡತನ, ನಿರುದ್ಯೋಗದಿಂದ ಜನಸಾಮಾನ್ಯರ ಜೀವನ ತತ್ತರಿಸಿದೆ. ಹೀಗಿರುವಾಗ ಹಸಿದ ಹೊಟ್ಟೆಗೆ ಮದ್ಯಪಾನವನ್ನು ಉಣಿಸಲು ಮುಂದಾಗಿರುವ ಸರ್ಕಾರದ ಈ ನಿಲುವು ಖಂಡನೀಯ. ಸರ್ಕಾರದ ಈ ನಡೆಯನ್ನು ಕೂಡಲೇ ಕೈಬಿಡಬೇಕೆಂದು ಆಗ್ರಹಿಸಲು ನಾಡಿನ ಮಹಿಳಾ ಸಮುದಾಯ, ಪ್ರಜ್ಞಾವಂತ ಜನತೆ ಮುಂಬರಬೇಕು ಎಂದು ನೆರೆದ ಜನಸಾಮಾನ್ಯರಿಗೆ ಕರೆ ಕೊಟ್ಟರು. ಪ್ರತಿಭಟನೆಯಲ್ಲಿ ವಿವಿಧ ಬಡಾವಣೆಯ ಮಹಿಳೆಯರು, ವಿದ್ಯಾರ್ಥಿಗಳು, ಯುವಜನರು, ಜನಸಾಮಾನ್ಯರು ಭಾಗವಹಿಸಿದ್ದರು.

ಇದನ್ನೂ ಓದಿ : ಕಾವೇರಿ ನೀರು ವಿಚಾರವಾಗಿ ಕಮಲ-ದಳ ಜಂಟಿ ಹೋರಾಟ; ಸರ್ಕಾರಕ್ಕೆ ಬಿಎಸ್​ವೈ, ಹೆಚ್​ಡಿಕೆ ಎಚ್ಚರಿಕೆ ಸಂದೇಶ

Last Updated : Sep 27, 2023, 6:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.