ETV Bharat / state

ಕಾಂಗ್ರೆಸ್​ ಪ್ರಣಾಳಿಕೆ ಬಿಡುಗಡೆ: ಭಜರಂಗದಳ - PFIದಂತಹ ಸಂಘಟನೆಗಳ ನಿಷೇದದ ಆಶ್ವಾಸನೆ.. ಜನರಿಗೆ ಮತ್ತಷ್ಟು ಉಚಿತಗಳ ಭರವಸೆ - ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಿಂದ ಏಳು ಗ್ಯಾರಂಟಿ

ವಿಧಾನಸಭೆ ಚುನಾವಣಾ ಕಣದಲ್ಲಿ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು ಸದ್ದು ಮಾಡುತ್ತಿವೆ. ಈಗಾಗಲೇ ಅಧಿಕೃತವಾಗಿ ಜೆಡಿಎಸ್​ ಮತ್ತು ಬಿಜೆಪಿ ತಮ್ಮ ತಮ್ಮ ಭರವಸೆಗಳ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಕಾಂಗ್ರೆಸ್​ ಇಂದು ಪ್ರಣಾಳಿಕೆ ಬಿಡುಗಡೆಗೊಳಿಸಿತು.

Congress released the manifesto  Congress manifesto released under Kharge  AICC President Mallikarjun Kharge  Kharge launched the Congress manifesto  ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್​ ಪ್ರಣಾಳಿಕೆ ಬಿಡುಗಡೆ  ​ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್​ ಪ್ರಣಾಳಿಕೆ  ಚುನಾವಣಾ ಕಣದಲ್ಲಿ ಪಕ್ಷಗಳ ಪ್ರಣಾಳಿಕೆಗಳು ಸದ್ದು  ಕಾಂಗ್ರೆಸ್​ ಪಕ್ಷ ಇಂದು ಪ್ರಣಾಳಿಕೆ ಬಿಡುಗಡೆ  ಜೆಡಿಎಸ್​ ಮತ್ತು ಬಿಜೆಪಿ ತಮ್ಮ ತಮ್ಮ ಭರವಸೆಗಳ ಪಟ್ಟಿ  ಮತದಾನ ದಿನಕ್ಕೆ 8 ದಿನ ಬಾಕಿ  ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಿಂದ ಏಳು ಗ್ಯಾರಂಟಿ  ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ
ಅಳೆದು ತೂಗಿ ಮಲ್ಲಿಕಾರ್ಜುನ್​ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್​ ಪ್ರಣಾಳಿಕೆ ಬಿಡುಗಡೆ
author img

By

Published : May 2, 2023, 9:59 AM IST

Updated : May 2, 2023, 2:57 PM IST

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನ ಮಹತ್ವಾಕಾಂಕ್ಷಿ ಪ್ರಣಾಳಿಕೆ ಬಿಡುಗಡೆ ಇಂದು ನೆರವೇರಿತು. ನಗರದ ಖಾಸಗಿ ಹೋಟೆಲ್​ನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಣಾಳಿಕೆ ಬಿಡುಗಡೆ ಮಾಡಿದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಡಾ.ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮಾಜಿ ಸಚಿವೆ ರಾಣಿ ಸತೀಶ್, ಎಐಸಿಸಿ ವಕ್ತಾರ ಗೌರವ್ ವಲ್ಲಭ್ ಮತ್ತಿತರರು ಉಪಸ್ಥಿತರಿದ್ದರು.

  • LIVE : ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮ, ಬೆಂಗಳೂರು https://t.co/PfpTRynh0i

    — Karnataka Congress (@INCKarnataka) May 2, 2023 " class="align-text-top noRightClick twitterSection" data=" ">

ಕಾಂಗ್ರೆಸ್ ಜನರಿಗೆ ನೀಡಿದ ಪ್ರಮುಖ ಭರವಸೆಗಳು:

  • ಅನ್ನ ಭಾಗ್ಯ ಯೋಜನೆ: ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ ಉಚಿತ
  • ಗೃಹಲಕ್ಷ್ಮೀ ಯೋಜನೆ: ಮನೆ ಯಜಮಾನಿಗೆ 2 ಸಾವಿರ ರೂಪಾಯಿ
  • ಯುವನಿಧಿ: ನಿರುದ್ಯೋಗ ಯುವಕರಿಗೆ ಆರ್ಥಿಕ ನೆರವು
  • ಪದವೀಧರರಿಗೆ 3 ಸಾವಿರ ರೂಪಾಯಿ ಹಾಗು ಡಿಪ್ಲೊಮಾ ಪದವೀಧರರಿಗೆ 1,500 ರೂ.
  • ಗೃಹಜ್ಯೋತಿ ಅಡಿ 200 ಯೂನಿಟ್ ವಿದ್ಯುತ್ ಉಚಿತ
  • ಅಂಗನವಾಡಿ ಕಾರ್ಯಕರ್ತರ ವೇತನ 15,000ಕ್ಕೆ ಹೆಚ್ಚಳ
  • ಭಜರಂಗದಳ, ಪಿಎಫ್‌ಐಗಳಂತಹ ಸಂಘಟನೆಗಳ ಮೇಲೆ ಕಾನೂನು ಕ್ರಮ ಇಲ್ಲವೇ ನಿಷೇಧ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, "ಒಂದು ಉತ್ತಮ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ. ಇದು ಜನರಿಗೆ ಸಾಕಷ್ಟು ನೆಮ್ಮದಿ ನೀಡುವಂತಹ ಪ್ರಣಾಳಿಕೆ. ನಾವು ಯಾವತ್ತೂ ಏನನ್ನು ಹೇಳುತ್ತೇವೆಯೋ ಅದನ್ನೇ ಮಾಡುತ್ತೇವೆ. ಈ ಹಿಂದೆಯೂ ಕಾಂಗ್ರೆಸ್ ಸರ್ಕಾರ ಇದ್ದಾಗ ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ನಾವು ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಯನ್ನು ಈಡೇರಿಸಿದ್ದೆವು. ನುಡಿದಂತೆ ನಡೆಯುವ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್" ಎಂದರು.

"ಬಿಜೆಪಿ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಅಂಶವನ್ನು ಅವಕಾಶ ಸಿಕ್ಕ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತಂದಿಲ್ಲ. ಪ್ರಸ್ತುತ ವಿಧಾನಸಭೆ ಚುನಾವಣೆಗೆ ಹೊಸದಾಗಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಬಿಜೆಪಿಯ ಪ್ರಣಾಳಿಕೆ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ನಮ್ಮ ಪ್ರಣಾಳಿಕೆಯ ಐದಾರು ಅಂಶಗಳ ಕುರಿತು ಮಾತನಾಡುತ್ತೇನೆ" ಎಂದರು.

"ನಮ್ಮ ಮೊದಲ ಗ್ಯಾರಂಟಿ ಗೃಹ ಜ್ಯೋತಿ. ಈ ಮೂಲಕ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆ. ಯುವ ನಿಧಿ ಯೋಜನೆಯಡಿ ನಿರುದ್ಯೋಗಿಗಳಿಗೆ ಜೀವನ ಭದ್ರತೆ ಒದಗಿಸುವ ನಿಧಿ ನೀಡುತ್ತೇವೆ. ಇದನ್ನು ನೀಡಲು ಕಾರಣ ಈಗಿನ ಸರ್ಕಾರಗಳು ಯುವಕರಿಗೆ ಉದ್ಯೋಗ ನೀಡದೇ ಇರುವುದು. ದೇಶದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದೆ. ನಾವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಮದುವೆಯಾಗದ ಯುವಕರಿಗೆ ರೂ. 3000 ಹಾಗೂ 1500 ಡಿಪ್ಲೋಮಾ ಪೂರ್ಣಗೊಳಿಸಿದವರಿಗೆ ನೀಡುತ್ತೇವೆ ಎಂಬುದನ್ನು ಬದ್ಧತೆಯಿಂದ ಹೇಳುತ್ತೇವೆ" ಎಂದರು.

"ಇದರ ಜೊತೆಗೆ ಅನ್ನಭಾಗ್ಯ ಯೋಜನೆ ಅಡಿ 10 ಕೆಜಿ ಅಕ್ಕಿ ನೀಡುವ ಭರವಸೆಯನ್ನು ನಾವು ಈಡೇರಿಸುತ್ತೇವೆ. ಗೃಹಲಕ್ಷ್ಮಿ ಯೋಜನೆ ಅಡಿ ಮಹಿಳೆಯರಿಗೆ ಸಹಾಯ ಮಾಡಲು ಮುಂದಾಗಿದ್ದೇವೆ. ಬೆಲೆ ಏರಿಕೆ ಸಮಸ್ಯೆ ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ವಿಫಲವಾಗಿವೆ. ಬಡವರು ಹಾಗೂ ಕೆಳಮಧ್ಯಮ ವರ್ಗದವರು ತತ್ತರಿಸಿ ಹೋಗಿದ್ದಾರೆ. ಇದರಿಂದಾಗಿ ಗೃಹ ಲಕ್ಷ್ಮಿ ಯೋಜನೆ ಮೂಲಕ ಪ್ರತಿ ತಿಂಗಳ ಮಹಿಳೆಯರಿಗೆ ಎರಡು ಸಾವಿರ ರೂಪಾಯಿ ನೀಡುತ್ತೇವೆ. ಮಹಿಳಾ ಆಧಾರಿತ ಕುಟುಂಬಕ್ಕೆ ಇದರ ಅನುಕೂಲ ಸಿಗಲಿದೆ" ಎಂದು ಖರ್ಗೆ ತಿಳಿಸಿದರು.

"ಎಲ್ಲ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣ ಕಲ್ಪಿಸುವ ಶಕ್ತಿ ನಮ್ಮ 5ನೇ ಗ್ಯಾರಂಟಿ ಆಗಿದೆ. ಉದ್ಯೋಗಕ್ಕೆ ತೆರಳುವ ಹಾಗೂ ಇತರೆ ಕಾರ್ಯಕ್ಕೆ ತೆರಳುವ ಮಹಿಳೆಯರಿಗೆ ಬಸ್ ದರ ಭರಿಸುವ ಶಕ್ತಿ ಇರುವುದಿಲ್ಲ. ಹಳ್ಳಿಯಿಂದ ಪಟ್ಟಣಕ್ಕೆ ವಿವಿಧ ಕಾರ್ಯಗಳಿಗೆ ಹಾಗೂ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಮಹಿಳೆಯರು ಅನಿವಾರ್ಯ ಸಂಚಾರ ಮಾಡುತ್ತಾರೆ. ಇವರಿಗೆ ಅನುಕೂಲ ಕೊಡಬೇಕಾಗಿದೆ. ಈ ಐದು ಗ್ಯಾರಂಟಿಯನ್ನು ಖಂಡಿತವಾಗಿ ನಾವು ನೀಡುತ್ತೇವೆ" ಎಂದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲೇ ಈ ಎಲ್ಲ ಗ್ಯಾರಂಟಿಗಳನ್ನು ಅನುಮೋದನೆ ಪಡೆದು ಜಾರಿಗೆ ತರಬೇಕೆಂದು ಕಾಂಗ್ರೆಸ್ ರಾಜ್ಯ ನಾಯಕರಿಗೆ ಒತ್ತಾಯಿಸುತ್ತಿದ್ದೇನೆ. ಅಲ್ಲದೇ ಈ ಗ್ಯಾರಂಟಿಗಳು ಜಾರಿಗೆ ಬರುವಂತೆ ನಾನೇ ಸ್ವತಃ ಪ್ರಯತ್ನ ಮಾಡುತ್ತೇನೆ ಎಂಬ ಭರವಸೆ ನೀಡಿದರು.

"ಇನ್ನೂ ಸಾಕಷ್ಟು ಭರವಸೆಗಳನ್ನು ನಾವು ಪ್ರಣಾಳಿಕೆಯಲ್ಲಿ ನೀಡಿದ್ದೇವೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸರಿಯಾದ ನ್ಯಾಯ ಒದಗಿಸುವ ಕೆಲಸವನ್ನು ಈ ಸರ್ಕಾರ ಮಾಡಿಲ್ಲ. ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದ್ದಾಗ ಇದಕ್ಕಾಗಿ ವಿಶೇಷ ಕಾಯ್ದೆ ತಂದಿತ್ತು. ಇಂತಹ ಯೋಜನೆಗಳನ್ನು ಸಹ ಬಿಜೆಪಿ ಸರ್ಕಾರ ಬಂದ ಮೇಲೆ ಮುಂದುವರಿಸಿಲ್ಲ" ಎಂದು ದೂರಿದರು.

"ರಾಜ್ಯ ಕಾಂಗ್ರೆಸ್ ಪಕ್ಷದ ಕಾರ್ಯವೈಖರಿಯನ್ನು ಜನ ಮೆಚ್ಚಿದ್ದಾರೆ. ನಮ್ಮವರ ಗ್ಯಾರಂಟಿಗಳು ರಾಜ್ಯದ ಮಾತ್ರವಲ್ಲ ದೇಶದ ವಿವಿಧ ಭಾಗಗಳ ಕಾಂಗ್ರೆಸ್ ಮುಖಂಡರಿಂದ ಮತ್ತು ರಾಜಕೀಯೇತರ ವ್ಯಕ್ತಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಗ್ಯಾರಂಟಿಗಳ ಜನಪ್ರಿಯತೆ ದೊಡ್ಡ ಮಟ್ಟದಲ್ಲಿದ್ದು ಇದನ್ನ ಇನ್ನಷ್ಟು ವ್ಯಾಪಕ ಪ್ರಮಾಣದಲ್ಲಿ ಜನರಿಗೆ ತಲುಪಿಸುವ ಕಾರ್ಯ ಆಗಬೇಕಿದೆ. ಅಗತ್ಯ ಜಾಹೀರಾತುಗಳನ್ನು ನಾವು ನೀಡಬೇಕಿದೆ. ಕಾಂಗ್ರೆಸ್ ಸರ್ಕಾರ ಬಂದೇ ಬರುತ್ತದೆ ಮತ್ತು ನಮ್ಮ 150 ಸ್ಥಾನಗಳ ಗುರಿಯನ್ನು ನಾವು ತಲುಪುತ್ತೇವೆ" ಎಂಬ ವಿಶ್ವಾಸ ಇದೆ ಎಂದರು.

ಪ್ರಣಾಳಿಕೆ ಬಿಡುಗಡೆಗೆ ಮುನ್ನ ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, "ಪಕ್ಷದ ಚೌಕಟ್ಟಿನಲ್ಲಿ ನಾವು ರಾಜ್ಯದ ಜನ ಸಮುದಾಯದ ಸಮಸ್ಯೆ ಅರ್ಥ ಮಾಡಿಕೊಳ್ಳುವುದಕ್ಕೆ ರಾಜ್ಯ ಪ್ರವಾಸ ಕೈಗೊಂಡು, ಎಲ್ಲ ಸಮುದಾಯವನ್ನು ಭೇಟಿ ಮಾಡಿ ಅವರ ಸಮಸ್ಯೆಯನ್ನು ಕೇಳಿದ ನಂತರ ಪ್ರಣಾಳಿಕೆಯನ್ನು ರಚಿಸಿದ್ದೇವೆ. ನನ್ನ ಜೊತೆ ಮಧು ಬಂಗಾರಪ್ಪ ಹಾಗೂ ಕೆ.ಇ.ರಾಧಾಕೃಷ್ಣ ಉತ್ತಮ ಸಹಕಾರ ನೀಡಿದ್ದಾರೆ. ಪೌರಕಾರ್ಮಿಕರು, ವಾಹನ ಚಾಲಕರು, ವಕೀಲರು, ವೈದ್ಯರು, ಸರ್ಕಾರಿ ನೌಕರರು, ಲೆಕ್ಕ ಪರಿಶೋಧಕರು, ಕಾರ್ಮಿಕ ಸಂಘಟನೆ ಮುಖ್ಯಸ್ಥರು, ಆತಿಥ್ಯ ಕ್ಷೇತ್ರದ ಪ್ರಮುಖರು, ರೈತರು, ಕಾರ್ಮಿಕರು, ಶಿಕ್ಷಣ ತಜ್ಞರು, ಬರಹಗಾರರು, ಅಲ್ಪಸಂಖ್ಯಾತ ಸಮುದಾಯಗಳು, ವಿವಿಧ ಆರ್ಥಿಕ ತಜ್ಞರ ಜೊತೆ ಚರ್ಚಿಸಿ ಪ್ರಣಾಳಿಕೆ ರಚಿಸಿದ್ದೇವೆ" ಎಂದರು.

"ವಿವಿಧ ಸಮುದಾಯದ ಜನರ ಅಭಿಪ್ರಾಯ ಸಂಗ್ರಹಿಸಿ ಇದರ ಜೊತೆಗೆ ಬೆಂಗಳೂರು ಮಹಾನಗರ ಸೇರಿದಂತೆ ಎಲ್ಲೆಡೆ ಆಗಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಎಲ್ಲರ ಸಲಹೆ ಸೂಚನೆ ಪಡೆದಿದ್ದೇವೆ. ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಛತ್ತೀಸ್ಗಢನಲ್ಲಿ ಕಾಂಗ್ರೆಸ್ ಪಕ್ಷ ಏನೆಲ್ಲ ಕಾರ್ಯಕ್ರಮ ಹಾಗೂ ಯೋಜನೆಗಳನ್ನು ಕೊಟ್ಟಿದೆ ಎಂಬುದನ್ನು ಸಹ ಹಿನ್ನೆಲೆಯಾಗಿ ಬಳಸಿಕೊಂಡಿದ್ದೇವೆ. ಪಕ್ಷದ ಅನುಭವವಿ ಮುಖಂಡರ ಸಲಹೆ ಸೂಚನೆಯನ್ನು ಸ್ವೀಕರಿಸಿದ್ದೇವೆ. ರಾಜ್ಯದ ಜಲ್ವಂತ ಸಮಸ್ಯೆಯನ್ನು ಅರ್ಥ ಮಾಡಿಕೊಂಡು, ಈ ಹಿಂದೆ ನಮ್ಮ ಸರ್ಕಾರ ನೀಡಿದ ಉತ್ತಮ ಕಾರ್ಯಕ್ರಮವನ್ನು ಅಳವಡಿಸಿಕೊಂಡು, ಸಾಮಾಜಿಕ ನ್ಯಾಯದ ಅಡಿಪಾಯದ ಅಡಿ ಸಮುದಾಯದ ಅಭಿವೃದ್ಧಿಯನ್ನು ಉದ್ದೇಶವಾಗಿಟ್ಟುಕೊಂಡು ಪ್ರಣಾಳಿಕೆ ರಚಿಸಿದ್ದೇವೆ" ಎಂದರು.

"ಇದಕ್ಕೆ ನಾವು ಸರ್ವ ಜನಾಂಗದ ಶಾಂತಿಯ ತೋಟ, ಇದುವೇ ಕಾಂಗ್ರೆಸ್ಸಿನ ಬದ್ಧತೆ ಎಂದು ತಿಳಿಸಿದ್ದೇವೆ. ಕಾಂಗ್ರೆಸ್ ಬರಲಿದೆ ಪ್ರಗತಿ ತರಲಿದೆ ಎಂಬ ಘೋಷವಾಕ್ಯವಾಗಿದೆ. ರಾಜ್ಯದ ಆರ್ಥಿಕ ಅಭಿವೃದ್ಧಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಯುವಕರು ಮಹಿಳೆಯರು ಸೇರಿದಂತೆ ಎಲ್ಲ ವರ್ಗದವರಿಗೂ ವಿಶೇಷ ಆದ್ಯತೆ ಕೊಟ್ಟು ನಾವು ಪ್ರಣಾಳಿಕೆ ರಚಿಸಿದ್ದೇವೆ. ಮುಂದಿನ 25 ವರ್ಷಗಳ ದೂರ ದೃಷ್ಟಿ ಇರಿಸಿಕೊಂಡು ಇದನ್ನ ರಚಿಸಿದ್ದೇವೆ" ಎಂದರು.

ಸಮಾರಂಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೇರಿದಂತೆ ಮತ್ತಿತರ ಮುಖಂಡರು ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ: ಏಳು ಗ್ಯಾರಂಟಿ ಘೋಷಣೆ ಬಳಿಕ ನಾಳೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ

Last Updated : May 2, 2023, 2:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.