ಬೆಂಗಳೂರು: ಒಂದು ಬೆರಳು ಬೇರೆಯವರನ್ನು ತೋರಿಸಿದ್ರೆ, ನಾಲ್ಕು ಬೆರಳು ಸ್ವತಃ ನಮ್ಮನ್ನೇ ತೋರಿಸುತ್ತವೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ಮಾಡಲು ಕೆಲಸ ಇಲ್ಲ. ಬಜೆಟ್ ಕಲಾಪದಲ್ಲಿ ಭಾಗಿಯಾಗಿ ಚರ್ಚೆ ನಡೆಸಲಿಲ್ಲ. ಸಿಡಿ ಬಗ್ಗೆ ವಿಧಾನಸಭೆಯಲ್ಲಿ ಧರಣಿ ಮಾಡಲೆಂದೇ ಇವರನ್ನು ಜನ ಆರಿಸಿ ಕಳುಹಿಸಿದ್ದಾರಾ? ಇವರು ಮಾಡುವ ಕುತಂತ್ರ, ತೇಜೋವಧೆಗೆ ಸಿಕ್ಕ ಸಿಕ್ಕವರು ಬಲಿಯಾಗಲು ಸಾಧ್ಯವಿಲ್ಲ. ಇಂತಹ ಚಿಲ್ಲರೆ ರಾಜಕಾರಣ ಸರಿಯಲ್ಲ ಎಂದರು.
ಓದಿ: ಸದನದಲ್ಲಿ ಮುಂದುವರೆದ ‘ಸಿಡಿ’ ವಾರ್.. ‘ಬ್ಲ್ಯೂ ಬಾಯ್ಸ್’ ಎಂದು ಧಿಕ್ಕಾರ ಕೂಗಿದ ವಿಪಕ್ಷ ಸದಸ್ಯರು
ಮೇಟಿ ಸಿಡಿ ಪ್ರಕರಣ ನಡೆದಿತ್ತು, ಆಗ ಹೆಣ್ಣುಮಗಳು ದೂರು ನೀಡಿದ್ರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇವರ ವಾಚ್ ಪ್ರಕರಣ ಏನಾಯ್ತು. ಇದೆಲ್ಲವನ್ನೂ ಮಾತನಾಡ್ತಾ ಹೋದ್ರೆ ಹುಚ್ಚರ ಮಾತಾಗಲಿದೆ. ಸಾರ್ವಜನಿಕರ ಸಮಯ, ತೆರಿಗೆ ಹಣ ವ್ಯರ್ಥವಾಗಲಿದೆ. ಸದನದಲ್ಲಿ ಕೂತು ಅಶ್ಲೀಲವಾಗಿ ಮಾತನಾಡುವುದು ಸರಿಯಲ್ಲ ಎಂದರು.