ETV Bharat / state

ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರ ಯೋಜನೆ.. ರೈತರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳ ಮಾಹಿತಿ

2021-22ನೇ ಕೃಷಿ ಯಾಂತ್ರೀಕರಣ ಉಪ ಅಭಿಯಾನ ಯೋಜನೆಯಡಿಯಲ್ಲಿ ಗ್ರಾಮೀಣ ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರ ಆರಂಭಿಸಲಾಗಿದೆ. ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

Agricultural machinery
ಕೃಷಿ ಯಂತ್ರೋಪಕರಣ
author img

By

Published : Aug 23, 2022, 5:05 PM IST

ಬೆಂಗಳೂರು: ರೈತರ ಆರ್ಥಿಕ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಲವು ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿವೆಯಾದರೂ, ಮಾಹಿತಿಯ ಕೊರತೆಯಿಂದಾಗಿ ರೈತರಿಗೆ ಯೋಜನೆಗಳ ಸೌಲಭ್ಯಗಳು ಸಿಗುತ್ತಿಲ್ಲ. ಕೃಷಿಯಲ್ಲಿ ಆಧುನಿಕತೆ ತರಲು ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ, ಬೀಜ, ಗೊಬ್ಬರ, ಖರೀದಿಗೆ ಪ್ರೋತ್ಸಾಹಧನ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಕೃಷಿ ಇಲಾಖೆಯಿಂದ ರೈತರಿಗೆ ದೊರೆಯುವ ಸೌಲಭ್ಯಗಳ ಮಾಹಿತಿ ಇಲ್ಲಿದೆ.

ಇದೀಗ ಕೃಷಿಯಲ್ಲಿಯೂ ಆಧುನಿಕ ತಂತ್ರಜ್ಞಾನ ಬಳಕೆಯಾಗುತ್ತಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಯಂತ್ರೋಪಕರಣಗಳ ಬಳಕೆ ಕಡಿಮೆಯಾಗುತ್ತಿದ್ದರಿಂದ ಸರ್ಕಾರವು ರೈತರಿಗೆ ನೆರವು ನೀಡಲು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. 2021-22ನೇ ಕೃಷಿ ಯಾಂತ್ರೀಕರಣ ಉಪ ಅಭಿಯಾನ ಯೋಜನೆಯಡಿಯಲ್ಲಿ ಗ್ರಾಮೀಣ ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರ ಆರಂಭಿಸಲಾಗಿದೆ. ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

Agricultural machinery
ಕೃಷಿ ಯಂತ್ರೋಪಕರಣ

ಅರ್ಹ ರೈತರಿಂದ ಅರ್ಜಿ ಆಹ್ವಾನ: ಯಂತ್ರಧಾರೆ ಕೇಂದ್ರಗಳನ್ನು ಹೋಬಳಿ ಪ್ರದೇಶದಲ್ಲಿ ಸ್ಥಾಪಿಸಲಾಗಿತ್ತು. ಇದರಿಂದಾಗಿ ಹೋಬಳಿ ವ್ಯಾಪ್ತಿಯಲ್ಲಿರುವ ಕೆಲವು ಗ್ರಾಮಗಳಿಗೆ ಮಾತ್ರ ಈ ಕೇಂದ್ರದ ಸೌಲಭ್ಯ ಸಿಗುತ್ತಿತ್ತು. ದೂರದ ಗ್ರಾಮಗಳಿಗೆ ಕೃಷಿ ಯಂತ್ರಧಾರೆ ಕೇಂದ್ರಗಳ ಸೌಲಭ್ಯ ಸಿಗುತ್ತಿರಲಿಲ್ಲ. ಹಾಗಾಗಿ ಈಗ ಗ್ರಾಮಗಳಲ್ಲಿಯೂ ಕೃಷಿ ಯಂತ್ರೋಪಕರಣಗಳ ಕೇಂದ್ರ ಸ್ಥಾಪಿಸಲು ಸರ್ಕಾರ ಮುಂದಾಗಿದೆ. 2021-22ನೇ ಸಾಲಿನಲ್ಲಿ ಕೃಷಿ ಯಾಂತ್ರೀಕರಣ ಉಪ ಅಭಿಯಾನ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿಯೂ Farm Mechanization Bank ಸ್ಥಾಪಿಸಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

Agricultural machinery
ಕೃಷಿ ಯಂತ್ರೋಪಕರಣ

ಸ್ಥಳೀಯವಾಗಿ ಕೃಷಿ ಯಂತ್ರೋಪಕರಣಗಳ ತಯಾರಿಕೆ ಸೌಲಭ್ಯದೊಂದಿಗೆ ಕೃಷಿ ಯಂತ್ರಗಳ ಬಳಕೆಯನ್ನು ಪ್ರೋತ್ಸಾಹಿಸಲು ಈ ಯೋಜನೆಯನ್ನು ಆರಂಭಿಸಲಾಗಿದೆ. ಯುವ ರೈತರನ್ನು ಕೃಷಿಯಲ್ಲೇ ಉಳಿಸಿಕೊಳ್ಳುವಲ್ಲಿ ಅವರಿಗೆ ಉದ್ಯೋಗ ಅವಕಾಶ ಸೃಷ್ಟಿಸುವ ಉದ್ದೇಶದಿಂದ ಗ್ರಾಮೀಣ ಕೃಷಿ ಯಂತ್ರೋಪಕರಣಗಳ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಕೃಷಿ ಯಂತ್ರೋಪಕರಣಗಳು, ಪಂಪ್ ಸೆಟ್​ಗಳು, ಕೊಳವೆ ಬಾವಿಗಳು, ರಿಪೇರಿ ಮಾಡುವ, ಸೂಕ್ಷ್ಮ ನೀರಾವರಿ ಘಟಕಗಳ ದುರಸ್ಥಿ ಮಾಡುವ ಸೌಲಭ್ಯವನ್ನು ಗ್ರಾಮಗಳಲ್ಲಿಯೇ ನೀಡಲಾಗುತ್ತದೆ. ಈ ಕೇಂದ್ರಗಳನ್ನು ಬ್ಯಾಂಕ್ ಲೋನ್ ಆಧಾರದ ಮೇಲೆ ಒಂದು ಬಾರಿ ಸಹಾಯಧನ ನೀಡುವ ಮೂಲಕ ಗ್ರಾಮೀಣ ಕೃಷಿ ಯಂತ್ರೋಪಕರಣ ಕೇಂದ್ರ ಸ್ಥಾಪಿಸಿ ಮತ್ತು ಮುನ್ನೆಡಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅದೇ ರೀತಿ ರಾಜ್ಯದ ಇತರ ಹೋಬಳಿ ವ್ಯಾಪ್ತಿಯಲ್ಲಿರುವ ಗ್ರಾಮದಲ್ಲಿಯೂ ಕೃಷಿ ಯಂತ್ರೋಪಕರಣ ಸೇವಾ ಕೇಂದ್ರ ಸ್ಥಾಪಿಸಲು ಅರ್ಜಿ ಆಹ್ವಾನಿಸಲಾಗಿದೆ. ರೈತರು ತಮ್ಮ ಹತ್ತಿರದ ರೈತ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಕೃಷಿ ಯಂತ್ರೋಪಕರಣ ಸೇವಾ ಕೇಂದ್ರ ಸ್ಥಾಪಿಸಲು ಅರ್ಹತೆ ಏನು?: ಕೃಷಿ ಯಂತ್ರೋಪಕರಣ ಸೇವಾ ಕೇಂದ್ರ ಸ್ಥಾಪಿಸುವುದಕ್ಕಾಗಿ ಅರ್ಜಿ ಸಲ್ಲಿಸಲು ಬಯಸುವವರು ಆಯಾ ಗ್ರಾಮದ ನೋಂದಾಯಿತ ರೈತ ಸಹಕಾರಿ ಸೊಸೈಟಿಗಳ ಸದಸ್ಯರಾಗಿರಬೇಕು. ರೈತ ಉತ್ಪಾದಕ ಸಂಸ್ಥೆಗಳು (ಎಫ್.ಪಿಓ) ಮತ್ತು ಗ್ರಾಮ ಪಂಚಾಯಿತಿಗಳು ಅರ್ಜಿ ಸಲ್ಲಿಸಬಹುದು. ಇದೇ ರೀತಿ ರಾಜ್ಯದ ಇತರ ಹೋಬಳಿ ವ್ಯಾಪ್ತಿಯಲ್ಲಿರುವ ಗ್ರಾಮದಲ್ಲಿಯೂ ಕೃಷಿ ಯಂತ್ರೋಪಕರಣ ಸೇವಾ ಕೇಂದ್ರ ಸ್ಥಾಪಿಸಲು ಅರ್ಜಿ ಆಹ್ವಾನಿಸಲಾಗಿದೆ. ರೈತರು ತಮ್ಮ ಹತ್ತಿರದ ರೈತ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಯಂತ್ರೋಪಕರಣ ಖರೀದಿಗೆ ಸಹಾಯಧನ: ಕಡಿಮೆ ಹೂಡಿಕೆಯಲ್ಲಿ ಕೃಷಿ ಯಂತ್ರೋಪಕರಣಗಳನ್ನು ಪಡೆಯಲು ಬಯಸಿದರೆ ಮಿನಿ ಪವರ್ ಟಿಲ್ಲರ್ ಅನ್ನು ಖರೀದಿಸಬಹುದು. ಇದಕ್ಕೆ ಸರ್ಕಾರದಿಂದ 70 ಸಾವಿರ ರೂ. ಸಹಾಯಧನವೂ ದೊರೆಯಲಿದೆ. ವ್ಯವಸಾಯಕ್ಕೆ ಹಲವು ಬಗೆಯ ಕೃಷಿ ಯಂತ್ರಗಳು ಬೇಕಿದ್ದು, ಅವು ತುಂಬಾ ದುಬಾರಿಯಾಗಿದೆ. ಹಣವಿರುವ ರೈತ ಈ ಯಂತ್ರಗಳನ್ನು ಖರೀದಿಸಿ ಕಡಿಮೆ ಸಮಯದಲ್ಲಿ ಸುಲಭವಾಗಿ ಕೃಷಿ ಮಾಡುತ್ತಾರೆ. ಆದರೆ ಬಡ ರೈತರು ಖರೀದಿಸಲಾಗದೆ ಬಾಡಿಗೆಗೆ ತೆಗೆದುಕೊಳ್ಳುತ್ತಾರೆ.

ಯಾವ ಕೃಷಿ ಯಂತ್ರೋಪಕರಣಕ್ಕೆ ಸಹಾಯಧನ ಎಷ್ಟು?: ಪವರ್ ಟಿಲ್ಲರ್ ಖರೀದಿಗೆ ಸಾಮಾನ್ಯ ವರ್ಗದವರಿಗೆ ಶೇ. 50 ರಷ್ಟು ಸಹಾಯಧನ ಸಿಗಲಿದೆ. ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ. 60ರಷ್ಟು ಸಹಾಯಧನ, ಗರಿಷ್ಠ 1 ಲಕ್ಷ ರೂ. ವರೆಗೆ ಸಹಾಯಧನ ದೊರೆಯಲಿದೆ. ಕೃಷಿ ಯಾಂತ್ರೀಕರಣ ಯೋಜನೆಯಡಿ ರೈತರಿಗೆ ಶೇ.90ರಷ್ಟು ಸಹಾಯಧನ ಸಿಗುತ್ತದೆ. ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಲಭ್ಯತೆ ಆಧಾರದ ಮೇಲೆ ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ನೀಡಲಾಗುತ್ತದೆ. ರೈತರ ಕೃಷಿ ಚಟುವಟಿಕೆಗೆ ಅನುಕೂಲವಾಗಲೆಂದು ಕೃಷಿ ಯಂತ್ರೋಪಕರಣಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಆಯಾ ಯಂತ್ರೋಪಕರಣಗಳಿಗೆ ಅನುಗುಣವಾಗಿ ಶೇ. 60, ಶೇ.50 ಮತ್ತು ಶೇ. 40 ರಷ್ಟು ಸಹಾಯಧನ ನೀಡಲಾಗುವುದು. ಇದಕ್ಕಾಗಿ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿ ಸಬ್ಸಿಡಿಯಲ್ಲಿ ಯಂತ್ರೋಪಕರಣಗಳನ್ನು ಪಡೆಯಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಯಾವ ದಾಖಲೆಗಳು ಬೇಕು: ಜಮೀನಿನ ಪಹಣಿ ಸೇರಿದಂತೆ ಜಮೀನಿನ ಜಮಾಬಂಧಿ, ಬ್ಯಾಂಕ್ ಖಾತೆ ವಿವರ, ಪಾಸ್ ಪೋರ್ಟ್ ಅಳತೆಯ ಫೋಟೋ ಸಲ್ಲಿಸಬೇಕು. ರೈತರ ಬ್ಯಾಂಕ್ ಪಾಸ್​ಬುಕ್​ನಲ್ಲಿ ರೈತರ ವಂತಿಕೆ ಸರಬರಾಜು ಸಂಸ್ಥೆಗೆ ಆರ್.ಟಿ.ಜಿ.ಎಸ್ ಜಮವಾಣೆಯಾದ ಜೆರಾಕ್ಸ್ ಪ್ರತಿ ಇರಬೇಕು. ಇನ್ನು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ರೈತ ಸಂಪರ್ಕ ಕೇಂದ್ರ ಕಚೇರಿಯಲ್ಲಿ ವಿಚಾರಿಸಿ ಸಲ್ಲಿಸಬಹುದು.

ಸಿಗುವ ಉಪಕರಣಗಳು ಯಾವುವು?: ಕೃಷಿ ಯಾಂತ್ರೀಕರಣ ಯೋಜನೆಯಡಿಯಲ್ಲಿ ಸಣ್ಣ ಟ್ರ್ಯಾಕ್ಟರ್, ಟಿಲ್ಲರ್, ಟ್ರ್ಯಾಕ್ಟರ್ ಟ್ರ್ಯಾಲಿ, ಕ್ರಾಪ್ ರೀಪರ್, ಪೋಸ್ಟ್​ ಹೋಲ್ ಡಿಗ್ಗರ್, ಪಾವರ್ ವೀಡರ್, ರೈಸ್ ಟ್ರಾನ್ಸ್ ಪ್ಲೆಟರ್, ಕೊಯ್ಲು ಒಕ್ಕಣೆಗಳು, ಅಂತರ ಬೇಸಾಯ ಉಪಕರಣಗಳು ಸೇರಿದಂತೆ ಇತರ ಉಪಕರಣಗಳು ಸಿಗುತ್ತವೆ.

ಮಿನಿ ಪವರ್ ಟಿಲ್ಲರ್: ಇದು ಚಿಕ್ಕ ಪವರ್ ಟಿಲ್ಲರ್ ಯಂತ್ರ. ಹೊಲಗಳಲ್ಲಿ ಕೊಚ್ಚೆ, ಒಣ ಗದ್ದೆಯನ್ನು ಉಳುಮೆ ಮಾಡುವುದು, ಗದ್ದೆಯನ್ನು ಸಮತಟ್ಟು ಮಾಡಬಹುದು. ಹೊಲವನ್ನು ಉಳುಮೆ ಮಾಡಬಹುದು, ಹೊಲವನ್ನು ಬಿತ್ತುವುದು, ಬೆಳೆಗೆ ಕೀಟನಾಶಕ ಸಿಂಪಡಿಸಬಹುದು, ಬೆಳೆಗಳ ಕಳೆ ತೆಗೆಯುವುದು, ಹೊಲದಲ್ಲಿ ನೀರು ಹಾಯಿಸುವುದು, ಬೆಳೆ ಕೊಯ್ಲು ಮಾಡುವುದು, ಸಾಗಣಿಕೆ, ಹೊಲಗಳಲ್ಲಿ ಕಟ್ಟೆಗಳನ್ನು ನಿರ್ಮಿಸುವುದು. ತರಕಾರಿ ಗದ್ದೆಗಳಲ್ಲಿ ಕಟ್ಟುಗಳ ಮಧ್ಯದಿಂದ ಕಳೆಗಳನ್ನು ನಾಶಪಡಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹೋಬಳಿಯಲ್ಲಿ ಲಭ್ಯವಿರುವ ಕೃಷಿ ಯಂತ್ರೋಪಕರಣಗಳ ಬಗ್ಗೆ ಮಾಹಿತಿ ಪಡೆಯಲು ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ, ಲಭ್ಯವಿರುವ ಕೃಷಿ ಯಂತ್ರೋಪಕರಣಗಳನ್ನು ಪಡೆಯಬಹುದು.

ಇದನ್ನೂ ಓದಿ : ಯುವಕನ ಐಡಿಯಾ: ಬಿತ್ತನೆ ಯಂತ್ರದ ಆವಿಷ್ಕಾರ.. ರೈತರಿಗೆ ವರದಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.