ETV Bharat / state

'ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ': ಏನಿದು ಕೃಷಿ ಅಭಿಯಾನ-2022-23?

ರೈತರಿಗೆ ಸಮಗ್ರ ಕೃಷಿ ಬಗ್ಗೆ ಅರಿವು ಮೂಡಿಸುವುದು ಮತ್ತು ಆಹಾರ ಧಾನ್ಯಗಳ ಬೆಳೆಗೆ ಹೆಚ್ಚು ಒತ್ತು ನೀಡಲು ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಎಂಬ ಕಾರ್ಯಕ್ರಮವನ್ನು ಸರ್ಕಾರ ಹಾಕಿಕೊಂಡಿದ್ದು, ಪಂಚಾಯಿತಿ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆಗೊಳ್ಳುತ್ತಿದೆ.

Agricultural campaign at the doorstep of farmers
'ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ
author img

By

Published : Sep 4, 2022, 10:50 AM IST

ಬೆಂಗಳೂರು: ಕೃಷಿಯನ್ನು ಹೆಚ್ಚು ಲಾಭದಾಯಕವಾಗಿ ಮಾಡಲು ಮತ್ತು ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಭದ್ರತೆ ಒದಗಿಸಲು ಲಭ್ಯವಿರುವ ಸಾಗುವಳಿ ಜಮೀನಿನಲ್ಲಿ ಗರಿಷ್ಠ ಕೃಷಿ ಉತ್ಪಾದನೆ ಪಡೆಯುವುದು ಅತ್ಯಾವಶ್ಯಕವಾಗಿದೆ. ಇದಕ್ಕಾಗಿ, ಕೃಷಿ ಮತ್ತು ತೋಟಗಾರಿಕೆಯೊಂದಿಗೆ ಪೂರಕ ಉಪ ಕಸುಬುಗಳಾದ ಪಶುಸಂಗೋಪನೆ, ರೇಷ್ಮೆ ಕೃಷಿ, ಮೀನುಗಾರಿಕೆ ಮುಂತಾದ ಚಟುವಟಿಕೆಗಳನ್ನು ರೈತರು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ.

ಕೃಷಿ ವಲಯದ ಪ್ರಸ್ತುತ ಪರಿಸ್ಥಿತಿಯನ್ನು ಮನಗಂಡು, ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವಶ್ಯವಿರುವ ತಂತ್ರಜ್ಞಾನವನ್ನು ತಲುಪಿಸಲು ಏಕಗವಾಕ್ಷಿ ವಿಸ್ತರಣಾ ಪದ್ಧತಿಯಲ್ಲಿ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸುವುದಕ್ಕಾಗಿ ವಿವಿಧ ಅಭಿವೃದ್ಧಿ ಇಲಾಖೆಗಳ ಸಮನ್ವಯದೊಂದಿಗೆ ಸಮೂಹ ಜಾಗೃತಿ ಕಾರ್ಯಕ್ರಮವಾದ 'ಕೃಷಿ ಅಭಿಯಾನ'ವನ್ನು ಸರ್ಕಾರ ರೂಪಿಸಿದೆ.

ಉದ್ದೇಶವೇನು?: ಕೃಷಿ ಹಾಗೂ ಬೇಸಾಯ ಸಂಬಂಧಿತ ಇಲಾಖೆಗಳ ಸಮನ್ವಯದೊಂದಿಗೆ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸುವುದು. ಉತ್ಪಾದಕತೆ ಹೆಚ್ಚಿಸುವ ತಾಂತ್ರಿಕತೆಗಳ ಮನವರಿಕೆ ಹಾಗೂ ವಿಜ್ಞಾನಿಗಳೊಂದಿಗೆ ರೈತರ ಸಂವಾದ ಏರ್ಪಡಿಸುವುದು. ಕೃಷಿ ಅಭಿಯಾನ ಈ ಪ್ರಮುಖ ಘಟಕಗಳನ್ನೊಳಗೊಂಡಿರುತ್ತದೆ. ಅದರದಲ್ಲಿ ಸಮಗ್ರ ಕೃಷಿ ಮಾಹಿತಿ ಘಟಕ ಹಾಗೂ ರೈತ ಸಂವಾದ ಪ್ರಮುಖವಾಗಿದೆ. ಕೃಷಿ ಅಭಿಯಾನ ಈಗಾಗಲೇ ಅನುಷ್ಠಾನಗೊಳಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಭಾಗವಹಿಸುವಿಕೆ: ಕೃಷಿ ಅಭಿಯಾನದ ಸಭೇಗಳಲ್ಲಿ ಕೃಷಿ ಮತ್ತು ಇತರೆ ಇಲಾಖಾ ಅಧಿಕಾರಿಗಳು-ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಪಶುಪಾಲನೆ, ಸಹಕಾರ, ಕಂದಾಯ ಇಲಾಖೆಗಳು ಕಡ್ಡಾಯವಾಗಿ ಭಾಗವಹಿಸಬೇಕು. ಕೃಷಿ ವಿಶ್ವ ವಿದ್ಯಾಲಯಗಳ ವಿಜ್ಞಾನಿಗಳು, ಪಶುವೈದ್ಯಕೀಯ ವಿಶ್ವವಿದ್ಯಾಲಯದ ವಿಜ್ಞಾನಿಗಳು, ರೈತರು, ಆತ್ಮ ಗುಂಪುಗಳು, ಸಾವಯವ ಕೃಷಿ ಸಂಘಗಳು, ಸ್ವಸಹಾಯ ಗುಂಪುಗಳು, ಸರ್ಕಾರೇತರ ಸಂಸ್ಥೆಗಳು ಭಾಗವಹಿಸಬೇಕು.

ರೈತರು ಎದುರಿಸುವ ಸಮಸ್ಯೆಗೆ ಪರಿಹಾರ ಸೂಚಿಸುವ ಸಲುವಾಗಿ ಗ್ರಾಮ ಲೆಕ್ಕಿಗರು, ಕಂದಾಯ ಇಲಾಖಾ ಸಿಬ್ಬಂದಿಯವರು ಕಡ್ಡಾಯವಾಗಿ ಭಾಗವಹಿಸಬೇಕು. ಸಾಲ ಸೌಲಭ್ಯ ನೀಡುವ ಸಂಸ್ಥೆಗಳು, ಬ್ಯಾಂಕ್ ಸಿಬ್ಬಂದಿ, ಸಂಸ್ಥೆಯ ಪ್ರತಿನಿಧಿಗಳು ಹಾಗೂ ವಿಮೆ ಸಂಸ್ಥೆಯ ಪ್ರತಿನಿಧಿಗಳು ಕಡ್ಡಾಯವಾಗಿ ಭಾಗವಹಿಸಬೇಕಾಗಿದೆ.

ಪ್ರಚಾರ ಕಾರ್ಯಕ್ರಮ: ಪ್ರತಿ ಹೋಬಳಿಯಲ್ಲಿ ಗ್ರಾಮ ಪಂಚಾಯತಿವಾರು ಕಾರ್ಯ ತಂಡವನ್ನು ರಚಿಸಿಕೊಂಡು, ಆಯಾ ಪಂಚಾಯಿತಿಗೆ ಸಿದ್ಧಪಡಿಸಿದ ವೇಳಾಪಟ್ಟಿಯಂತೆ ಎಲ್ಲಾ ಗ್ರಾಮ ಪಂಚಾಯತಿಗಳು ಒಳಗೊಂಡಂತೆ ಮೂರು ದಿನಗಳ ಕಾಲ ತೀವ್ರ ಪ್ರಚಾರ ಕಾರ್ಯದ ಜೊತೆಗೆ ವಿಜ್ಞಾನಿಗಳು ಹಾಗೂ ಅಧಿಕಾರಿಗಳನ್ನೊಳಗೊಂಡ ತಂಡಗಳು ಸ್ಥಳೀಯವಾಗಿ ರೈತರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸುವುದು. ಸದರಿ ಸಂವಾದ ಕಾರ್ಯಕ್ರಮದಲ್ಲಿ ರೈತರ ಸ್ಥಳೀಯ ಅವಶ್ಯಕತೆಗಳು ಮತ್ತು ಸಮಸ್ಯೆಗಳ ಬಗ್ಗೆ ಚರ್ಚೆಯನ್ನು ಕೈಗೊಳ್ಳುವುದು ಹಾಗೂ ಅವುಗಳ ನಿವಾರಣೆಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸುವುದು.

ಅನುದಾನ: ಪ್ರತಿ ಹೋಬಳಿಗೆ 26,990 ರೂ. ನಿಗದಿಪಡಿಸಿರುವ ಅನುದಾನವನ್ನು ಉಪಯೋಗಿಸಿಕೊಳ್ಳುತ್ತಾ ಜಿಲ್ಲಾ ಪಂಚಾಯಿತಿ, ಇತರ ಇಲಾಖೆಗಳ ಕಾರ್ಯಕ್ರಮಗಳ ಅನುದಾನ ಹೊಂದಿಸಿಕೊಂಡು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದು.

ಸಮಗ್ರ ಕೃಷಿ ಮಾಹಿತಿ ಘಟಕ: ಸಂಚಾರಿ ಕೃಷಿ ಮಾಹಿತಿ ಘಟಕವನ್ನು ಬಳಸಿಕೊಂಡು ಕೃಷಿ ಮತ್ತು ವಿವಿಧ ಇಲಾಖಾ ಅಧಿಕಾರಿಗಳು, ಪ್ರತಿ ಹೋಬಳಿಯ ಎಲ್ಲಾ ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಂತೆ ಮೂರು ದಿನಗಳ ಕಾಲ ತೀವ್ರ ಪ್ರಚಾರ ಕೈಗೊಳ್ಳುವುದರ ಜೊತೆಗೆ ಸ್ಥಳೀಯವಾಗಿ ರೈತರು ಮತ್ತು ವಿಜ್ಞಾನಿಗಳೊಂದಿಗೆ ಸಂವಾದ ಏರ್ಪಡಿಸುವುದು.

ಪ್ರಚಾರ ಕಾರ್ಯಕ್ರಮ ವಿಷಯಗಳು: ಪ್ರಚಾರ ಕಾರ್ಯಕ್ರಮದಲ್ಲಿ ಕೃಷಿ ತಾಂತ್ರಿಕ ಮಾಹಿತಿ, ಹೊಸ ತಂತ್ರಜ್ಞಾನ ಪರಿಚಯ ಮತ್ತು ಕೌಶಲ್ಯ ಪ್ರಾತ್ಯಕ್ಷಿಕೆ, ಬೀಜೋಪಚಾರ, ಸಸ್ಯ ಸಂರಕ್ಷಣಾ ಆಂದೋಲನ ಹಮ್ಮಿಕೊಳ್ಳುವುದು. ಮಣ್ಣು ಆರೋಗ್ಯ ಅಭಿಯಾನ, ಆತ್ಮ ಯೋಜನೆ, ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ, ಸಾವಯವ ಭಾಗ್ಯ ಯೋಜನೆ. ಬೆಳೆ ಸಮಿಕ್ಷೆ, ಬೆಳೆ ವಿಮೆ ಮತ್ತು ಕೃಷಿ ಸಾಲ ಸೌಲಭ್ಯ, ಕೃಷಿ ಪರಿಕರಗಳು, ಕೃಷಿ ಯಂತ್ರೋಪಕರಣಗಳು, ಬಾಡಿಗೆ ಆಧಾರಿತ ಸೇವಾ ಕೇಂದ್ರ (ಯಂತ್ರಧಾರ), ಕೃಷಿ ಉತ್ಪನ್ನ ಸಂಸ್ಕರಣಾ ಘಟಕಗಳು, ಹನಿ ನೀರಾವರಿ ಮತ್ತು ತುಂತುರು ನೀರಾವರಿ ಉಪಕರಣಗಳು ಬಗ್ಗೆ ಮಾಹಿತಿ ನೀಡಲಾಗುವುದು.

ಅನುಷ್ಠಾನ ಸಮಿತಿ: ಜಿಲ್ಲಾ ಮಟ್ಟದಲ್ಲಿ ರಚಿಸಲಾಗಿರುವ ಅನುಷ್ಠಾನ ಸಮಿತಿಯನ್ವಯದಲ್ಲಿ ತಮ್ಮ ಜಿಲ್ಲೆಯಲ್ಲಿ ಕೃಷಿ ಅಭಿಯಾನವನ್ನು ಏರ್ಪಡಿಸುವ ಬಗ್ಗೆ ಚರ್ಚಿಸಿ ಕಾರ್ಯಕ್ರಮದ ಕ್ರಿಯಾ ಯೋಜನೆಯನ್ನು ಸಿದ್ದಪಡಿಸುವುದು. ತಾಲೂಕು ಮಟ್ಟದಲ್ಲಿ ರಚಿಸಲಾಗಿರುವ ತಾಲೂಕು ಮಟ್ಟದ ಅನುಷ್ಠಾನ ಕಾರ್ಯತಂಡ ಹಾಗೂ ಹೋಬಳಿ ಮಟ್ಟದ ಅನುಷ್ಠಾನ ಕಾರ್ಯತಂಡದಲ್ಲಿ ಚರ್ಚಿಸಿ ಕ್ರಮವಹಿಸುವುದು.

ನಿರ್ವಹಣೆ ವಿಧಾನ: ಕಾರ್ಯಕ್ರಮದ ದಿನ ಸಮಗ್ರ ಕೃಷಿ ಮಾಹಿತಿ ಘಟಕವು ಇಲಾಖಾ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಒಳಗೊಂಡಂತೆ ಪ್ರಚಾರ ಏರ್ಪಡಿಸುವುದು. ಸಹಭಾಗಿತ್ವದ ಚಟುವಟಿಕೆಗಳನ್ನು ಅಳವಡಿಸಿಕೊಂಡು, ರೈತರ ಮನಮುಟ್ಟುವ ರೀತಿಯಲ್ಲಿ ಮಾಹಿತಿಯನ್ನು ನೀಡುವುದು. ಮಾದರಿ ರೈತ ಪ್ರಯತ್ನಗಳ ಅನುಭವ ಹಂಚಿಕೆ, ವಿಷಯ ತಜ್ಞರಿಂದ ನಿರ್ದಿಷ್ಟ ವಿಷಯ ಕುರಿತು ಕಿರು ಉಪನ್ಯಾಸ. ಹೊಸ ತಂತ್ರಜ್ಞಾನ ಪರಿಚಯ ಮಾಡಲಾಗುವುದು.

ನಿರೀಕ್ಷಿತ ಫಲಿತಾಂಶ, ಪ್ರತಿಫಲ: ಕೃಷಿ ಇಲಾಖೆ ಮತ್ತು ಇತರೆ ಅಭಿವೃದ್ಧಿ ಇಲಾಖೆಗಳ ಯೋಜನೆಗಳು ರೈತರ ಮನೆ-ಮನಕ್ಕೆ ನೇರವಾಗಿ ತಲುಪಿಸುವುದು. ರೈತರ ಮತ್ತು ಕೃಷಿ ವಿಜ್ಞಾನಿಗಳ ನಡುವೆ ಚರ್ಚೆ, ನೇರ ಸಂವಾದ, ಸಮಸ್ಯಗಳಿಗೆ ಸ್ಪಂದನ, ರೈತರಿಗೆ ಸಕಾಲದಲ್ಲಿ ಕೃಷಿ ಪರಿಕರಗಳು, ಸಾಮಗ್ರಿ, ಸೌಲಭ್ಯಗಳನ್ನು ದೊರಕಿಸಿ ಕೊಡುವುದು. ಮಾದರಿ ಪ್ರಯತ್ನಗಳ ಪ್ರಚಾರ, ಮಾದರಿ ರೈತರ ಜ್ಞಾನದ ಪರಸ್ಪರ ಹಂಚಿಕೆಗೆ ಅವಕಾಶ ಕಲ್ಪಿಸುವುದು.

ತಾಂತ್ರಿಕತೆಗಳ ಅಳವಡಿಕೆಯನ್ನು ಪ್ರೋತ್ಸಾಹಿಸುತ್ತಾ, ಆಹಾರ ಬೆಳೆಗಳ ಉತ್ಪಾದಕತೆಯಲ್ಲಿ ಗಮನಾರ್ಹ ಬದಲಾವಣೆ ತರುವುದು, ಸಾಮಾನ್ಯ ಕೃಷಿ ಅಭಿವೃದ್ಧಿಗೆ ಬೇಕಾದ ಎಲ್ಲಾ ಕ್ರಮಗಳ ನಿರ್ವಹಣೆಗೆ ನಿರಂತರ ಸಿದ್ಧತೆ ಮಾಡುವುದು. ಹೋಬಳಿ ಮಟ್ಟದಲ್ಲಿ ಆಯೋಜಿಸಲಾಗುವ ಕೃಷಿ ಅಭಿಯಾನ ಕಾರ್ಯಕ್ರಮದಡಿ ಪ್ರಚಾರ ಕಾರ್ಯಕ್ಕೆ ಈ ಕೆಳಕಂಡಂತೆ ಅನುದಾನವನ್ನು ನಿಗದಿಪಡಿಸಲಾಗಿದೆ.

ಸಂಚಾರಿ ಮಾಹಿತಿ ಘಟಕದ ಇಂಧನ ವೆಚ್ಚ ಧ್ವನಿ ವರ್ಧಕ ಪ್ರಚಾರ ವಿಡಿಯೋ ಮತ್ತು ಛಾಯಾಚಿತ್ರ ಇತ್ಯಾದಿ, ಅನುದಾನ 26,990 ಲಕ್ಷ ರೂ., ನಿಗದಿಪಡಿಸಿರುವ ಅನುದಾನದ ಮಿತಿಯೊಳಗೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವುದು. ಜಿಲ್ಲಾ ಪಂಚಾಯಿತಿ, ಇತರೆ ಇಲಾಖೆಗಳ ಕಾರ್ಯಕ್ರಮಗಳ ಅನುದಾನ, ಸ್ಥಳೀಯ ಸಂಸ್ಥೆಗಳ ಪ್ರಯೋಜಕತ್ವ ಮೂಲಕ ಒಟ್ಟಾರೆಯಾಗಿ ಕಾರ್ಯಕ್ರಮಕ್ಕೆ ಹೆಚ್ಚುವರಿ ಅನುದಾನ ಹೊಂದಿಸಿಕೊಂಡು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದು.

2022-23 ನೇ ಸಾಲಿನ ಜಿಲ್ಲಾವಾರು ಅನುದಾನ ಹಂಚಿಕೆ ವಿವರವನ್ನು ನೀಡಲಾಗಿದೆ. ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ರೈತರ ಮತ್ತು ರೈತ ಮಹಿಳೆಯರ ವಿವರ, ಪರಿಶಿಷ್ಟ ಜಾತಿ, ಪಂಗಡದ ರೈತರನ್ನು ಕಡ್ಡಾಯವಾಗಿ ನೊಂದಣಿ ಮಾಡಬೇಕು.

ಇದನ್ನೂ ಓದಿ : ಜಿಲ್ಲಾ ನ್ಯಾಯಾಧೀಶರುಗಳ ವರ್ಗಾವಣೆ: ಬೆಂಗಳೂರಿಗೆ ನ್ಯಾ.ರಾಮಚಂದ್ರ ಹುದ್ದಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.