ETV Bharat / state

ಮತ್ತೊಮ್ಮೆ ಲಾಕ್​​ಡೌನ್ ಮಾಡಿದ್ರೆ ಆರ್ಥಿಕ ಪರಿಸ್ಥಿತಿ ಇನ್ನೂ ಹದಗೆಡಲಿದೆ: ಸಿ.ಆರ್.ಜನಾರ್ಧನ್

ಕೊರೊನಾ ಕೇಸ್​​ಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಲಾಕ್​ಡೌನ್ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ. ಆದರೆ ಮತ್ತೊಮ್ಮೆ ಲಾಕ್​ಡೌನ್ ಆದರೆ ಕೈಗಾರಿಕೆಗಳು, ರೈತರು ಸೇರಿದಂತೆ ಎಲ್ಲಾ ಉದ್ಯಮಗಳು ಕಷ್ಟ ಅನುಭವಿಸುತ್ತವೆ ಎಂದು ಎಫ್​​ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ಧನ್ ಹೇಳಿದ್ದಾರೆ.

ಎಫ್​​ಕೆಸಿಸಿಐ
ಎಫ್​​ಕೆಸಿಸಿಐ
author img

By

Published : Jun 25, 2020, 4:54 PM IST

Updated : Jun 25, 2020, 5:46 PM IST

ಬೆಂಗಳೂರು: ರಾಜ್ಯದಲ್ಲಿ ಮತ್ತೊಮ್ಮೆ ಲಾಕ್​​ಡೌನ್ ಆದರೆ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಲಿದೆ ಎಂದು ಎಫ್​​ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ಧನ್ ಹೇಳಿದ್ದಾರೆ.

ಎಫ್​​ಕೆಸಿಸಿಐ ಕಚೇರಿಯಲ್ಲಿ ಮಾತನಾಡಿದ ಅವರು, ಪ್ರಸ್ತುತವಾಗಿ ಕೊರೊನಾ ಕೇಸ್​​ಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಲಾಕ್​ಡೌನ್ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ. ಆದರೆ ಮತ್ತೊಮ್ಮೆ ಲಾಕ್​ಡೌನ್ ಆದರೆ ಕೈಗಾರಿಕೆಗಳು, ರೈತರು ಸೇರಿದಂತೆ ಎಲ್ಲಾ ಉದ್ಯಮಗಳು ಕಷ್ಟ ಅನುಭವಿಸುತ್ತವೆ ಎಂದಿದ್ದಾರೆ.

ಎಫ್​​ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ಧನ್

ಈಗಾಗಲೇ 3 ತಿಂಗಳ ಲಾಕ್​​ಡೌನ್ ಅವಧಿಯಲ್ಲಿ ಒಂದು ಕೋಟಿಗಿಂತ ಅಧಿಕ ಕಾರ್ಮಿಕರು ಸಂಬಳವಿಲ್ಲದೆ ಪರದಾಡಿದರು. ಜೊತೆಗೆ ಉದ್ದಿಮೆದಾರರು ಆದಯವಿಲ್ಲದೆ ಬ್ಯಾಂಕ್ ಬಡ್ಡಿ ಕಟ್ಟಲಾಗದೆ ತಲೆ ಕೆಡಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರದ 3 ಲಕ್ಷ ಕೋಟಿ ರೂ. ಸಹಾಯದಿಂದ ಸ್ವಲ್ಪ ಚೇತರಿಕೆ ಕಾಣಲು ದಾರಿ ಆಯಿತು. ಇದರ ನಡುವೆ ಸರ್ಕಾರ ಪಶ್ಚಿಮ ಬಂಗಾಳ ರೀತಿ ಲಾಕ್​ಡೌನ್ ಮಾಡಿದರೆ ಶೋಚನೀಯ ಸ್ಥಿತಿ ನಿರ್ಮಾಣವಾಗಲಿದೆ ಎಂದರು.

ಕೊರೊನಾ ತಡೆಗಟ್ಟಲು ಲಾಕ್​ಡೌನ್ ಪರಿಹಾರವಲ್ಲ. ಮೊದಲು ಲಾಕ್​ಡೌನ್ ಮಾಡಿದ ಉದ್ದೇಶ ವೈದ್ಯಕೀಯ ಸೇವೆಗಳನ್ನ ಸ್ಥಿರಗೊಳಿಸುವುದು. ಜೊತೆಗೆ ಈಗ ಜನರಲ್ಲಿ ಜಾಗೃತಿ ಮೂಡಿರುವ ಕಾರಣ ಲಾಕ್​ಡೌನ್​ ಮಾಡುವ ಅಗತ್ಯವಿಲ್ಲ. ಒಂದು ವೇಳೆ ಲಾಕ್​ಡೌನ್ ಮಾಡಿದರೆ ಆರ್ಥಿಕತೆ ನೆಲಕಚ್ಚುತ್ತದೆ ಎಂದಿದ್ದಾರೆ.

Last Updated : Jun 25, 2020, 5:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.