ಬೆಂಗಳೂರು : ನಗರದಲ್ಲಿ ಮಂಗಳವಾರ ಬಿಎಂಟಿಸಿ ನೌಕರರು ಮತ್ತೊಮ್ಮೆ ಧರಣಿ ನಡೆಸಲಿದ್ದಾರೆ.
ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಬೃಹತ್ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಿದ್ದು, ಜಾಥಾವನ್ನು ಟೌನ್ ಹಾಲ್ ನಿಂದ ವಿಧಾನಸೌಧವರಿಗೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಕಾಲ್ನಿಡಿಗೆ ಜಾಥಾ ಹಿನ್ನಲೆ ಬಿಎಂಟಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಬಿಎಂಟಿಸಿ ನೌಕರರ ರಜೆ ರದ್ದು ಮಾಡಿದೆ, ಮಾತ್ರವಲ್ಲ ಕರ್ತವ್ಯಕ್ಕೆ ಗೈರಾಗುವ ನೌಕರರ ಮೇಲೆ ಕ್ರಮ ಕೈಗೊಳ್ಳುವುದಾಗಿ ಆದೇಶಿಸಿದೆ.
ಒಂದು ವೇಳೆ ಕಾರಣಾಂತರಗಳಿಂದ ಗೈರಾದರೆ ನೌಕರರ ವೇತನ ಕಡಿತ ಮಾಡಲಾಗುವುದೆಂದು ಖಡಕ್ ಆದೇಶ ಹೊರಡಿಸಿದೆ. ಜೊತೆಗೆ ಸ್ಥಳೀಯ ಪೊಲೀಸ್ ಅಧಿಕಾರಗಳ ಜೊತೆ ಸಂಪರ್ಕದಲ್ಲಿಟ್ಟುಕೊಂಟು ಬಸ್ ಓಡಿಸುವಂತೆ ಸೂಚಿಸಲಾಗಿದೆ.