ಬೆಂಗಳೂರು : ಕೋವಿಡ್ ಹಿನ್ನೆಲೆ ಆಸ್ತಿ ತೆರಿಗೆಯನ್ನು ಪಾವತಿಸದಿದ್ದಲ್ಲಿ ಜುಲೈ ತಿಂಗಳಿಂದ ವಿಳಂಬದ ಅವಧಿಗೆ ವಿಧಿಸಲಾಗುವ ದಂಡದ ಕಾಲಾವಧಿಯನ್ನು ಮುಂದೂಡಲಾಗಿದೆ. ಈ ಸಂಬಂಧ ಆದೇಶ ಹೊರಡಿಸಲಾಗಿದೆ.
ಕೋವಿಡ್-19 ನಿಯಂತ್ರಣ ಸಂಬಂಧ ವಿಧಿಸಲಾಗಿದ್ದ ಲಾಕ್ಡೌನ್ ಹಿನ್ನೆಲೆ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡುವ ದೃಷ್ಟಿಯಿಂದ ನಗರ ಸ್ಥಳೀಯ ಸಂಸ್ಥೆಗಳು 2021-22ನೇ ಸಾಲಿನ ಆರ್ಥಿಕ ವರ್ಷದ ಏಪ್ರಿಲ್ ತಿಂಗಳಲ್ಲಿ ಆಸ್ತಿ ತೆರಿಗೆ ಪಾವತಿಗೆ ನೀಡಲಾಗುತ್ತಿರುವ ಶೇ.50 ರಿಯಾಯತಿಯ ಕಾಲಾವಧಿಯನ್ನು (ಬಿಬಿಎಂಪಿ ಹೊರತುಪಡಿಸಿ) ಜುಲೈ 31ರವರೆಗೆ ವಿಸ್ತರಿಸಲಾಗಿತ್ತು.
ನಂತರ ನಗರ ಸ್ಥಳೀಯ ಸಂಸ್ಥೆಗಳು 2021-22ನೇ ಸಾಲಿನ ಆರ್ಥಿಕ ವರ್ಷದ ಆಸ್ತಿ ತೆರಿಗೆ ಪಾವತಿಗೆ ನೀಡಲಾಗುತ್ತಿರುವ ಶೇ.50 ರಿಯಾಯತಿಯ ಕಾಲಾವಧಿಯನ್ನು ಆಗಸ್ಟ್ 1ರಿಂದ ಆಗಸ್ಟ್ 31ರವರೆಗೆ ವಿಸ್ತರಿಸಿದೆ.
ಆಸ್ತಿ ತೆರಿಗೆಯನ್ನು ಪಾವತಿಸದಿದ್ದಲ್ಲಿ ಜುಲೈ ತಿಂಗಳಿನಿಂದ ವಿಳಂಬದ ಅವಧಿಗೆ ವಿಧಿಸಲಾಗುವ ಮಾಸಿಕ ಶೇ.2ರಷ್ಟು ದಂಡದ ಕಾಲಾವಧಿಯನ್ನು ಆಗಸ್ಟ್ 1ರಿಂದ ಅನ್ವಯಿಸುವ ಬದಲಾಗಿ ಸೆಪ್ಟೆಂಬರ್ 1ರಿಂದ ಅನ್ವಯಿಸುವಂತೆ ಅಗತ್ಯ ಕ್ರಮಕೈಗೊಳ್ಳಲು ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು/ಮಹಾನಗರ ಪಾಲಿಕೆಗಳಿಗೆ (ಬಿಬಿಎಂಪಿ ಹೊರತುಪಡಿಸಿ) ಸೂಚಿಸಲಾಗಿದೆ.
ಓದಿ: ಅನುದಾನ ಕಡಿತ ವಿಚಾರ: ನಾಳೆ ವಿಧಾನ ಪರಿಷತ್ ಸದಸ್ಯರ ಸಭೆ ಕರೆದ ಬಸವರಾಜ ಹೊರಟ್ಟಿ