ಬೆಂಗಳೂರು: ಕೊರೊನಾದಿಂದ ಗುಣಮುಖರಾಗಿ ಪ್ಲಾಸ್ಮಾ ದಾನ ಮಾಡಿದ ರಾಜ್ಯ ಪೊಲೀಸ್ ಮೀಸಲು ಪಡೆಯ (ಕೆಎಸ್ಆರ್ಪಿ) ಸಿಬ್ಬಂದಿಯನ್ನು ಎಡಿಜಿಪಿ ಅಲೋಕ್ ಕುಮಾರ್ ಸನ್ಮಾನಿಸಿದರು.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೊದಲ ಬಾರಿಗೆ ಪ್ಲಾಸ್ಮಾ ದಾನ ಮಾಡಿದ ಪೊಲೀಸ್ ಕಾನ್ಸ್‌ಟೇಬಲ್ ವೀರಭದ್ರಯ್ಯ, ಮಾರುತಿ ನಾಯ್ಕ್, ವಿಶ್ವನಾಥ್, ನರೇಶ್ ಕುಮಾರ್ ಅವರನ್ನು ಸನ್ಮಾನಿಸಿ ನಗದು ಬಹುಮಾನ ನೀಡಲಾಯಿತು.
ಪ್ಲಾಸ್ಮಾ ದಾನಕ್ಕೆ ಹೆಚ್ಚು ಬೇಡಿಕೆ ಇರುವ ಹಿನ್ನೆಲೆಯಲ್ಲಿ ಇದುವರೆಗೂ 50ಕ್ಕೂ ಹೆಚ್ಚು ಪೊಲೀಸರು ದಾನ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ. ಕೆಎಸ್ ಆರ್ ಪಿ ವಿಭಾಗದ ಮೈಸೂರು, ಶಿವಮೊಗ್ಗ, ಬೆಳಗಾವಿಯಲ್ಲಿ ಪೊಲೀಸರು ಪ್ಲಾಸ್ಮಾ ದಾನ ಮಾಡಲು ಹೆಸರು ನೋಂದಾಯಿಸಿದ್ದಾರೆ.
ಮಾನವನ ರಕ್ತದಲ್ಲಿ ಪ್ಲಾಸ್ಮಾ ಕಣಗಳನ್ನು ದಾನ ಮಾಡಿರುವುದರಿಂದ ದಾನ ಮಾಡಿದ ವ್ಯಕ್ತಿಗೆ ಏನು ತೊಂದರೆಯಾಗುವುದಿಲ್ಲ. ಒಂದು ಬಾರಿ 650 ಮಿ.ಲೀ. ಪ್ಲಾಸ್ಮಾ ದಾನ ಮಾಡಬಹುದಾಗಿದೆ.