ETV Bharat / state

ದುಪ್ಪಟ್ಟು ಹಣ ಪಡೆದರೆ ಸ್ಥಳೀಯ ಅಧಿಕಾರಿಗೆ ದೂರು ನೀಡಲು ಸೂಚನೆ

ಸರ್ಕಾರಿ ಬಸ್​ಗಳ ಸಂಚಾರ ಸ್ಥಗಿತಗೊಂಡ ಕಾರಣ ಖಾಸಗಿ ಬಸ್​ಗಳಿಗೆ ದುಪ್ಪಟ್ಟು ಹಣ ಕೇಳಿದರೆ ಪ್ರಯಾಣಿಕರು ಸ್ಥಳೀಯ ಅಧಿಕಾರಿಗಳಿಗೆ ದೂರು ನೀಡಬೇಕು ಎಂದು ಸಾರಿಗೆ ಇಲಾಖೆ ಅಪರ ಆಯುಕ್ತ ನರೇಂದ್ರ ಹೋಳ್ಕರ್ ಹೇಳಿದ್ದಾರೆ.

Additional Commissioner for Transport Narendra Holkar reaction
ಮೆಜೆಸ್ಟಿಕ್​ನಲ್ಲಿ ಖಾಸಗಿ ಬಸ್​ಗಳ ಸಂಚಾರ
author img

By

Published : Apr 7, 2021, 11:29 AM IST

ಬೆಂಗಳೂರು: ಸಾರಿಗೆ ನೌಕರರ ಮುಷ್ಕರವಿರುವ ಕಾರಣ ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆಯಾಗದಂತೆ ಸರ್ಕಾರ ಖಾಸಗಿ ಬಸ್​ಗಳನ್ನು ರಸ್ತೆಗಿಳಿಸಿದೆ. ಆದರೆ ಖಾಸಗಿ ಬಸ್​ನವರು ಹೆಚ್ಚಿನ ಹಣ ವಸೂಲಿ ಮಾಡ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ದುಪ್ಪಟ್ಟು ಹಣ ಪಡೆದರೆ ಸ್ಥಳೀಯ ಅಧಿಕಾರಿಗೆ ದೂರು ನೀಡಿ ಎಂದು ಅಪರ ಆಯುಕ್ತ ನರೇಂದ್ರ ಹೋಳ್ಕರ್ ಪ್ರಯಾಣಿಕರಿಗೆ ತಿಳಿಸಿದ್ದಾರೆ.

ಮೆಜೆಸ್ಟಿಕ್​ನಲ್ಲಿ ಖಾಸಗಿ ಬಸ್​ಗಳ ಸಂಚಾರ

ಖಾಸಗಿ ಬಸ್​ಗಳ ಸಂಚಾರಕ್ಕೆ ಅವಕಾಶ ನೀಡಿದ್ದು ಮೆಜೆಸ್ಟಿಕ್ ನಿಲ್ದಾಣದೊಳಗೆ ಬೇರೆ-ಬೇರೆ ಜಿಲ್ಲೆಗಳಿಗೆ ಹೋಗಲು ಬಸ್ಸುಗಳು ಆಗಮಿಸುತ್ತಿವೆ. ಮೈಸೂರು, ಹಾಸನ, ಶಿವಮೊಗ್ಗ ಸೇರಿದಂತೆ ಎಲ್ಲ ಭಾಗಗಳಿಗೂ ಖಾಸಗಿ ಬಸ್​ಗಳೇ ಸಂಚರಿಸುತ್ತಿದ್ದು, ಇದಕ್ಕೆ ಆರ್​ಟಿಒ ಪರ್ಮಿಟ್ ನೀಡಿದೆ.

ಇತ್ತ, ಸಾರಿಗೆ ಇಲಾಖೆಯ ಅಪರ ಆಯುಕ್ತ ನರೇಂದ್ರ ಹೋಳ್ಕರ್ ಮೆಜೆಸ್ಟಿಕ್ ನಿಲ್ದಾಣಕ್ಕೆ ಆಗಮಿಸಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, ಖಾಸಗಿ ಬಸ್​ಗಳಲ್ಲಿ ಹೆಚ್ಚಿನ ದರ ತೆಗೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಇದೆ. ಅದು ನಮ್ಮ‌ ಗಮನಕ್ಕೆ‌ ಇನ್ನೂ ಬಂದಿಲ್ಲ. ಅಂತಹದ್ದು ನಮ್ಮ‌ ಗಮನಕ್ಕೆ ಬಂದ್ರೆ ಕೂಡಲೇ ಕ್ರಮ ತೆಗೆದುಕೊಳ್ಳುತ್ತೇವೆ. ಎಲ್ಲ ಭಾಗದಲ್ಲೂ ನಮ್ಮ‌ ಅಧಿಕಾರಿಗಳ ಕಣ್ಗಾವಲಿದೆ. ಬಸ್​ಗಳು ಸಾಕಷ್ಟು ಸಂಖ್ಯೆಯಲ್ಲಿ ಇವೆ, ಆದ್ರೆ ಜನ ಮಾತ್ರ ಬರುತ್ತಿಲ್ಲ. ‌ಈಗಾಗಲೇ 102 ಬಸ್​ಗಳು ಕಾರ್ಯಾಚರಣೆ ನಡೆಸುತ್ತಿವೆ. ಸ್ಥಳೀಯವಾಗಿ ಮ್ಯಾಕ್ಸಿ ಕ್ಯಾಬ್, ಆಟೋಗಳು ಸಂಚರಿಸುತ್ತಿವೆ. ದರ ಏರಿಕೆ ಬಗ್ಗೆ ದೂರು ಬಂದ್ರೆ ತಕ್ಷಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಾರಿಗೆ ಇಲಾಖೆ ಅಧಿಕಾರಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.