ಬೆಂಗಳೂರು: ಸಿಗರೇಟ್ ಕೇಳುವ ಕಾರಣಕ್ಕೆ ವಾಗ್ವಾದಕ್ಕಿಳಿದ ದುಷ್ಕರ್ಮಿಗಳು ಬೇಕರಿಯೊಂದರ ಸಿಬ್ಬಂದಿಗೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಈ ಘಟನೆ ಕುಂದಲಹಳ್ಳಿಯಲ್ಲಿ ನಿನ್ನೆ (ಗುರುವಾರ) ನಡೆದಿದೆ. ಆರೋಪಿಗಳ ಗ್ಯಾಂಗ್ ಕಳೆದ ರಾತ್ರಿ ಸಿಗರೇಟು ಕೇಳುವ ನೆಪದಲ್ಲಿ ಬೇಕರಿಗೆ ಬಂದಿದೆ. ಈ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ಸಿಬ್ಬಂದಿ ಮೇಲೆ ಗಲಾಟೆ ಮಾಡಿದ್ದಾರೆ. ಊರು ಬಿಟ್ಟು ಊರಿಗೆ ಬಂದಿದ್ದೀರಾ? ಎಂದೆಲ್ಲಾ ತಗಾದೆ ತೆಗೆದಿದ್ದಾರೆ. ನೋಡು ನೋಡುತ್ತಿದ್ದಂತೆಯೇ ಸಿಬ್ಬಂದಿ ಮೇಲೆ ಮಾರಣಾಂತಿಕವಾಗಿ ಹಲ್ಲೆಯನ್ನೂ ನಡೆಸಿದ್ದಾರೆ. ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಶಿವಮೊಗ್ಗ: ಡೀಸೆಲ್ ಕಳ್ಳರ ಹಿಡಿದು ಪೊಲೀಸರಿಗೊಪ್ಪಿಸಿದ ಜನರು