ನೆಲಮಂಗಲ: ಮಾದನಾಯಕನಹಳ್ಳಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಡ್ರಗ್ಸ್ ಹಾಗೂ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರ್ಗಳು ಸೇರಿ 13 ಜನರನ್ನ ಬಂಧಿಸಿ, 50 ಲಕ್ಷ ಮೌಲ್ಯದ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ. ಈ ಆರೋಪಿಗಳಲ್ಲಿ ವಿದ್ಯಾರ್ಥಿಗಳೂ, ದಂಪತಿಗಳು ಹಾಗೂ ರೌಡಿಗಳೂ ಸೇರಿದ್ದಾರೆ.
ವೆಲ್ ಎಜುಕೇಟೆಡ್ಗಳಾಗಿದ್ರು ಹಣದಾಸೆಗೆ ಡ್ರಗ್ಸ್ ದಂಧೆ ನಡೆಸುತ್ತಿದ್ದ ದಂಧೆಕೋರರು ಅರೆಸ್ಟ್
ಸ್ನೇಹಿತರ ಜೊತೆ ಪಾರ್ಟಿಗಳಿಗೆ ತೆರಳಿ ಡ್ರಗ್ಸ್ ಮಾರಾಟ ಕಸುಬು ಮಾಡಿಕೊಂಡಿದ್ದ ವೆಲ್ ಎಜುಕೇಟೆಡ್ಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಶ್ರೀಜಿತ್, ತೇಜಸ್ವರಪ್ಪ @ ಟೋನಿ, ಹರತಷಿತ್ ಮತ್ತು ಕುಂಜು ಮೂಸ ಬಂಧಿತ ಆರೋಪಿಗಳಾಗಿದ್ದು, ಇದರಲ್ಲಿ ಶ್ರೀಜಿತ್ ಬಿಎ ಪದವೀಧರ, ತೇಜೆಸ್ವರಪ್ಪ ಎಂಬಿಎ, ಹರ್ಷಿತ್ ಬಿಇ, ಕುಂಜುಂ ಮೊಸ ಬಿಬಿಎ ಪದವೀಧರರಾಗಿದ್ದಾರೆ.
ನಗರದ ಪ್ರತಿಷ್ಠಿತ ಕಾಲೇಜು ಹಾಗೂ ಯೂನಿವರ್ಸಿಟಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕೋರಮಂಗಲ, ಇಂದಿರಾನಗರದಲ್ಲಿ ವೀಕೆಂಡ್ ಪಾರ್ಟಿಗಳಲ್ಲಿ ಡ್ರಗ್ಸ್ ಮಾರಾಟ ಮಾಡ್ತಿದ್ದರು. ಅಲ್ಲದೇ ತಮ್ಮದೇ ಕಾಲೇಜು ವಿದ್ಯಾರ್ಥಿಗಳಿಗೆ ಸಹ ಡ್ರಗ್ಸ್ ಮಾರಾಟ ಮಾಡಿರುವ ಆರೋಪಿಗಳನ್ನ ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 62 ಗ್ರಾಂ ಎಂಡಿಎಂಎ, ಒಂದು ಕೆಜಿ ಗಾಂಜಾ ಸೀಜ್ ಆಗಿದ್ದು, ಆಫ್ರಿಕನ್ ವ್ಯಕ್ತಿಯಿಂದ ಸಪ್ಲೈ ಪಡೆದು ಮಾರಾಟ ಮಾಡ್ತಿದ್ದರು. ಸದ್ಯ ತಲೆ ಮರೆಸಿಕೊಂಡಿರುವ ವಿದೇಶಿ ಪ್ರಜೆ ಪತ್ತೆಗೂ ಪೊಲೀಸರು ಬಲೆ ಬೀಸಿದ್ದಾರೆ.
ಗಾಂಜಾ ದಂಧೆಗಿಳಿದಿದ್ದ ಕುಖ್ಯಾತ ರೌಡಿ ಶೀಟರ್ಗಳು ಪೊಲೀಸರ ಬಲೆಗೆ: ರೌಡಿಸಂ ವರ್ಕೌಟ್ ಆಗ್ತಿಲ್ಲ ಅಂತ ಹೊರ ರಾಜ್ಯದಿಂದ ಗಾಂಜಾ ತರಿಸಿ ಗಾಂಜಾ ಮಾರಾಟ ಮಾಡ್ತಿದ್ದ ಡಿಜೆ ಹಳ್ಳಿ ಹಾಗೂ ಆರ್. ಟಿ ನಗರ ರೌಡಿಶೀಟರ್ಗಳನ್ನ ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 60 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಇರ್ಫಾನ್ ಖಾನ್, ಸೈಯದ್ ನೂರ್ ಅಫ್ಜಲ್ ಖಾನ್ ಬಂಧಿತ ಆರೋಪಿಗಳಾಗಿದ್ದು, ಆರೋಪಿ ಇರ್ಫಾನ್ ಈ ಹಿಂದೆ ಡಿಜೆ ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಪ್ರಕರಣದಲ್ಲಿ ಸೇನಾ ವಾಹನಕ್ಕೆ ಬೆಂಕಿ ಹಾಕಿದ್ದ. ನೆಲಮಂಗಲ ಮಾದನಾಯಕನಹಳ್ಳಿ ಹೈವೆಗಳಲ್ಲಿ ಲಾರಿ ಮತ್ತು ಟ್ರಕ್ ಚಾಲಕರಿಗೆ ಗಾಂಜಾ ಮಾರಾಟ ಮಾಡ್ತಿದ್ರು.
ಜೈಲಿನಲ್ಲಿದ್ದುಕೊಂಡೆ ಶಿಷ್ಯಂದಿರಿಂದ ಕಳ್ಳತನ ಮಾಡಿಸಿದ್ದ ಕಳ್ಳ: ಜೈಲಿನಲ್ಲೇ ಇದ್ದು ಕಳ್ಳತನ ಮಾಡಿಸ್ತಿದ್ದ ಕುಖ್ಯಾತ ಮನೆಗಳ್ಳರನ್ನ ಮಾದನಾಯಕನಹಳ್ಳಿ ಇನ್ಸ್ಪೆಕ್ಟರ್ ಮಂಜುನಾಥ್ ಅಂಡ್ ಟೀಂ ಅರೆಸ್ಟ್ ಮಾಡಿದ್ದಾರೆ. ಜೈಲಿನಿಂದ ಹೊರಬರಲು ಲಾಯರ್ಗೆ ಫೀಜ್ ನೀಡಲು ಜೈಲಿನಿಂದಲೇ ಸ್ಕೆಚ್ ಹಾಕಿಸಿದ್ದ. ಶಿಷ್ಯಂದಿರು ಜೈಲಿಗೆ ಎಂಟ್ರಿಕೊಟ್ಟಾಗ ಮನೆಗಳ್ಳತನಕ್ಕೆ ಪ್ಲಾನ್ ಕೊಟ್ಟು ಕಳ್ಳತನ ಮಾಡಿಸಿದ್ದ ಶ್ರೀನಿವಾಸ್ ಜೊತೆಗೆ ಆತನ ಸಹಚರರನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಸದ್ಯ ಕಳ್ಳತನದಲ್ಲಿ ಭಾಗಿಯಾಗಿದ್ದ ದಂಪತಿ ಸೇರಿ 6 ಮಂದಿ ಸೆರೆಯಾಗಿದ್ದಾರೆ. ಶ್ರೀನಿವಾಸ್, ಮಂಜುಳಾ, ಮುಬಾರಕ್ ಅಹ್ಮದ್, ಗಂಗಾಧರಪ್ಪ ಶಾರದಮ್ಮ, ಗಂಗಣ್ಣ@ ಸೊಳ್ಳೆ ಬಂಧಿತರಾಗಿದ್ದಾರೆ. ಬಂಧಿತರಿಂದ 25 ಲಕ್ಷ ಮೌಲ್ಯದ 245 ಗ್ರಾಂ ತೂಕದ ಚಿನ್ನದ ಗಟ್ಟಿ, 255 ಗ್ರಾಂ ತೂಕದ ಚಿನ್ನಾಭರಣ ಸೇರಿ ಒಟ್ಟು 500 ಗ್ರಾಂ ಚಿನ್ನಾಭರಣ ಹಾಗೂ ಚಿನ್ನದ ಗಟ್ಟಿಗಳನ್ನ ಸೀಜ್ ಮಾಡಿದ್ದಾರೆ.
ಓದಿ: ಬೆಸ್ಕಾಂ ಅಧಿಕಾರಿಗಳಿಂದ ನೂರಾರು ಮರಗಳ ಮಾರಣ ಹೋಮ.. ಪರಿಸರ ಪ್ರೇಮಿಗಳಿಂದ ಶ್ರದ್ದಾಂಜಲಿ ಕಾರ್ಯಕ್ರಮ