ಬೆಂಗಳೂರು: ಹಣಕಾಸಿನ ನೆರವು ನೀಡುವ ನೆಪದಲ್ಲಿ ನಟಿ ವಿಜಯಲಕ್ಷ್ಮೀಗೆ ನಟ ರವಿ ಪ್ರಕಾಶ್ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ವಿಜಯಲಕ್ಷ್ಮೀ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಒಂದು ಲಕ್ಷ ರೂ. ಹಣವನ್ನು ರವಿ ಪ್ರಕಾಶ್ ನೀಡಿದ್ದರಂತೆ. ನಂತರ ಆರೋಗ್ಯ ವಿಚಾರಿಸುವ ನೆಪದಲ್ಲಿ ಪದೇ ಪದೇ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಸ್ವತಃ ನಟಿ ವಿಜಯಲಕ್ಷ್ಮೀ ಆರೋಪಿಸಿದ್ದಾರೆ.
ಕಳೆದ ವಾರ ವಿಜಯಲಕ್ಷ್ಮೀ ಮಲ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಜಯದೇವ ಆಸ್ಪತ್ರೆಗೆ ದಾಖಲಾಗಿದ್ರು. ಆಸ್ಪತ್ರೆಯಿಂದ ವಿಡಿಯೋ ಮಾಡಿ ಫೇಸ್ ಬುಕ್ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಇದರಿಂದ ಬೇಸತ್ತ ವಿಜಯಲಕ್ಷ್ಮೀ ತನ್ನ ಅಕ್ಕ ಉಷಾದೇವಿಯಿಂದ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ನಟ ರವಿ ಪ್ರಕಾಶ್, ಡೈರೆಕ್ಟರ್ ಸ್ಪೆಷಲ್, ಮೇಘವೇ ಮೇಘವೇ, ರಮ್ಯ ಚೈತ್ರಕಾಲ ಚಿತ್ರಗಳಲ್ಲಿ ನಟಿಸಿದ್ದಾರೆ. ನಟಿ ವಿಜಯಲಕ್ಷ್ಮಿ ಆರೋಪಗಳು ಕುರಿತು ಈವರೆಗೂ ರವಿ ಪ್ರಕಾಶ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.