ETV Bharat / state

ಉದ್ಯಮಿ ಮೊಮ್ಮಗನ ಅಟ್ಟಹಾಸಕ್ಕೆ ಬಲಿಯಾದ ಶ್ವಾನ.. ಬೀದಿ ನಾಯಿ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ನಟಿ ರಮ್ಯಾ - ಅನಿಮಲ್ ಕಾನೂನು ಬಗ್ಗೆ ನಟಿ ರಮ್ಯಾ ಪ್ರತಿಕ್ರಿಯೆ

ಲಾರಾ ನಾಯಿಯನ್ನ ಸಣ್ಣ ಮರಿಯಿದ್ದಾಗಿನಿಂದಲೂ ಗಾಯತ್ರಿ ಎಂಬುವರು ಸಲುಹಿದ್ದರು .ಇನ್ನು ಸುಮನಹಳ್ಳಿಯಲ್ಲಿರುವ ಬಿಬಿಎಂಪಿ ಪ್ರಾಣಿಗಳ ಚಿತಾಗಾರದಲ್ಲಿ ಲಾರಾ ಅಂತ್ಯಕ್ರಿಯೆ ಮಾಡಲಾಯಿತು..

actress-ramya
ನಟಿ ರಮ್ಯಾ
author img

By

Published : Feb 1, 2022, 7:05 PM IST

Updated : Feb 1, 2022, 10:11 PM IST

ಬೆಂಗಳೂರು : ಕೆಲವು ದಿನಗಳ ಹಿಂದೆ ಕಾರು ಹತ್ತಿಸಿ ಬೀದಿ ನಾಯಿಯನ್ನು ಹತ್ಯೆಗೈದ ಪ್ರಕರಣ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಘಟನೆ ಸಂಬಂಧ ಉದ್ಯಮಿ ಆದಕೇಶವುಲು ನಾಯ್ಡು ಅವರ ಮೊಮ್ಮಗ ಆದಿಯನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಲಾಗಿದೆ.

ಇದರ ಬೆನ್ನಲ್ಲೇ ಸ್ಯಾಂಡಲ್​ವುಡ್ ನಟಿ ರಮ್ಯಾ ಆರೋಪಿಯ ಮೃಗೀಯ ವರ್ತನೆಯನ್ನ ಖಂಡಿಸಿದ್ದಾರೆ. ಅಷ್ಟೇ ಅಲ್ಲ, ಶ್ವಾನ ಲಾರಾ ಅಂತ್ಯಕ್ರಿಯೆಯಲ್ಲೂ ಭಾಗಿಯಾಗಿದ್ದಾರೆ. ಈ ಸಂಬಂಧ ಮಾತನಾಡಿರುವ ಅವರು, ನಮ್ಮ ದೇಶದಲ್ಲಿ ಅನಿಮಲ್ ಬಗ್ಗೆ ಕಟ್ಟುನಿಟ್ಟಿನ ಕಾನೂನು ಇಲ್ಲ ಅಂತಾ ಬೇಸರ ಹೊರಹಾಕಿದ್ದಾರೆ.

ಬೀದಿ ನಾಯಿ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ನಟಿ ರಮ್ಯಾ

ಇಂದು ಆ್ಯಂಬುಲೆನ್ಸ್ ಮೂಲಕ ಸುಮ್ಮನಹಳ್ಳಿ ಚಿತಾಗಾರಕ್ಕೆ ಮೃತ ಶ್ವಾನ ಲಾರಾ ಪಾರ್ಥಿವ ಶರೀರವನ್ನ ತರಲಾಯಿತು. ಹಾಗೇ ಅಂತ್ಯಕ್ರಿಯೆಯಲ್ಲಿ ನೂರಾರು ಪ್ರಾಣಿ ಪ್ರಿಯರು ಭಾಗಿಯಾಗಿದ್ದರು. ಪ್ರಮುಖ ವಿಷಯ ಅಂದ್ರೆ ಈ ರೀತಿಯ ಬೀದಿ ನಾಯಿಗಳಿಗೆ ಗಾಯಿತ್ರಿ ಎಂಬ ಮಹಿಳೆ ಊಟ ಹಾಕಿ ಸಲಹುತ್ತಿದ್ದರು.

ಸುಮ್ಮನಹಳ್ಳಿಯಲ್ಲಿರುವ ಬಿಬಿಎಂಪಿ ಪ್ರಾಣಿಗಳ ಚಿತಾಗಾರದಲ್ಲಿ ಲಾರಾದ ಅಂತ್ಯಕ್ರಿಯೆ ಮಾಡಲಾಯಿತು. ಈ ವೇಳೆ ಕೈಯಲ್ಲಿ ಗುಲಾಬಿ ಹೂ, ಪೋಸ್ಟರ್​ಗಳನ್ನ ಹಿಡಿದು ಶಾಲಾ ಮಕ್ಕಳು ಕಂಬನಿ ಮಿಡಿದರು. ಮೋಹಕ ತಾರೆ ರಮ್ಯಾ ಕೂಡ ಪೋಸ್ಟರ್ ಹಿಡಿಯುವ ಮೂಲಕ ಶ್ವಾನದ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

  • To Badri, Sudha, Advaith, Priya, Gayatri aunty, Sanjana and everyone who loved and cared for Lara- you inspire me. The fight goes on. pic.twitter.com/7gWG2GosWJ

    — Divya Spandana/Ramya (@divyaspandana) February 1, 2022 " class="align-text-top noRightClick twitterSection" data=" ">

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ನಂತರ ಮಾತನಾಡಿದ ನಟಿ ರಮ್ಯಾ, ಆ್ಯಕ್ಸಿಡೆಂಟ್ ಆಗುತ್ತೆ, ಮನುಷ್ಯ ತಪ್ಪು ಮಾಡ್ತಾನೆ ಸಹಜ. ಆದರೆ, ಈ ವಿಚಾರದಲ್ಲಿ ನೋಡಿದಾಗ ಬೇಕಂತಲೇ ನಾಯಿ ಮೇಲೆ ಗಾಡಿ ಹತ್ತಿಸಿದ್ದಾರೆ. ಇದನ್ನ ನೋಡಿ ಸಹಿಸಿಕೊಳ್ಳಲು ಆಗಲಿಲ್ಲ. ನಮ್ಮ ದೇಶದಲ್ಲಿ ಅನಿಮಲ್ ಲಾ‌ ಸ್ಟ್ರಿಕ್ಟ್ ಇಲ್ಲ. 50 ರೂಪಾಯಿ ಕೊಟ್ಟು ಹೊರಗಡೆ ಬರ್ತಾರೆ. ದಯೆ ಅನ್ನೋದು ಕೇವಲ ಮನುಷ್ಯನಿಗೆ ಅಲ್ಲ, ಪ್ರಕೃತಿಯಲ್ಲಿರುವ ಪ್ರಾಣಿಗಳಿಗೂ ಕೂಡ ಇರಬೇಕು. ಮೊದಲನೆಯದಾಗಿ ಕಾನೂನು ಕಠಿಣವಾಗಬೇಕಿದೆ. ದೊಡ್ಡವರು, ದುಡ್ಡಿರೋರು ಕಾನೂನಿನಲ್ಲಿ ಎಸ್ಕೇಪ್ ಆಗ್ತಾರೆ. ಕಾನೂನು ಕಠಿಣಗೊಳಿಸಬೇಕು ಅಂತಾ ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಹೇಳಿದರು.

ಓದಿ: ಬೀದಿನಾಯಿ ಮೇಲೆ ಕಾರು ಹರಿಸಿ ಕೊಂದ ಪಾಪಿ: 'ಲಾರಾ' ಅಂತ್ಯಕ್ರಿಯೆಗೆ ಎಲ್ಲರೂ ಬರುವಂತೆ ನಟಿ ರಮ್ಯಾ ಕರೆ

Last Updated : Feb 1, 2022, 10:11 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.