ETV Bharat / state

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟಿ ರಾಗಿಣಿ... ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಂಡ ಅಧಿಕಾರಿಗಳು - ಬೆಂಗಳೂರು ಲೆಟೆಸ್ಟ್ ನ್ಯೂಸ್

ಖ್ಯಾತ ನಟಿ ಆಗಿರುವುದರಿಂದ ಸಹ ಕೈದಿಗಳು ಮಾತನಾಡಿಸುವ ಸಾಧ್ಯತೆ ಇದೆ. ಅಲ್ಲದೆ ಡ್ರಗ್ಸ್ ಪ್ರಕರಣ ಆಗಿರೋದ್ರಿಂದ ಸಹ ಕೈದಿಗಳಿಂದ ಗಲಾಟೆಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಭದ್ರತಾ ನಿಟ್ಟಿನಲ್ಲಿ ಕೊಠಡಿ ಹೊರ ಭಾಗದಲ್ಲಿ ಸಿಬ್ಬಂದಿಯನ್ನು ನಿಯೋಜನೆಗೊಳಿಸಲಾಗಿದೆ.

Actress Ragini is in Parappana Agrahara Jail
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟಿ ರಾಗಿಣಿ...ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಂಡ ಅಧಿಕಾರಿಗಳು
author img

By

Published : Sep 15, 2020, 11:26 AM IST

ಬೆಂಗಳೂರು: ನಟಿ ರಾಗಿಣಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.

ರಾಗಿಣಿ ಇರುವ ಬ್ಯಾರಕ್​​ಗೆ ವಿಶೇಷ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದು, ಮಹಿಳಾ ಬ್ಯಾರಕ್​ನ ಕೊಠಡಿಯೊಂದರಲ್ಲಿ ನಟಿಯೊಬ್ಬಳೇ ಕಾಲ‌ ಕಳೆಯುತ್ತಿದ್ದಾರೆ. ಖ್ಯಾತ ನಟಿ ಆಗಿರುವುದರಿಂದ ಸಹ ಕೈದಿಗಳು ಮಾತನಾಡಿಸುವ ಸಾಧ್ಯತೆ ಇದೆ. ಅಲ್ಲದೇ, ಡ್ರಗ್ಸ್ ಪ್ರಕರಣ ಆಗಿರೋದ್ರಿಂದ ಸಹ ಕೈದಿಗಳಿಂದ ಗಲಾಟೆಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಭದ್ರತಾ ನಿಟ್ಟಿನಲ್ಲಿ ಕೊಠಡಿ ಹೊರಭಾಗದಲ್ಲಿ ಸಿಬ್ಬಂದಿಯನ್ನು ನಿಯೋಜನೆಗೊಳಿಸಲಾಗಿದೆ. ಇನ್ನುಳಿದ 4 ಆರೋಪಿಗಳ ಕೊಠಡಿಯಲ್ಲಿಯೂ ಸಹ ಸಿಬ್ಬಂದಿಯನ್ನು ನಿಯೋಜಿಸಿ ಅಲರ್ಟ್ ಮಾಡಲಾಗಿದೆ. ಹಾಗಾಗಿ ಈವರೆಗೆ ಯಾವುದೇ ಗಲಾಟೆಗಳಾಗಿಲ್ಲ ಎಂಬ ಮಾಹಿತಿ ಇದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟಿ ರಾಗಿಣಿ

ಇನ್ನು ರಾತ್ರಿ ಜೈಲಿನಲ್ಲಿನ ಊಟ‌ ಬಿಟ್ಟು ಸಿಸಿಬಿ ಅಧಿಕಾರಿಗಳು ನೀಡಿದ ಆಹಾರವನ್ನು ಸೇವಿಸಿದ್ದಾರೆ. ಸೊಳ್ಳೆ ಕಾಟ ಜೋರಾಗಿದ್ದು, ಒಂದು ದಿಂಬು, ಚಾಪೆ, ಜಮಖಾನ, ಒಂದು ಬೆಡ್ ಶೀಟ್​​ನಲ್ಲಿ ರಾತ್ರಿ ಕಳೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.