ETV Bharat / state

ಕೂಲಿ ಕಾರ್ಮಿಕರಿಗೆ ನಟಿ ರಾಗಿಣಿ, ನಟ ಜೆಕೆ  ದಿನಸಿ ಕಿಟ್ ವಿತರಣೆ - ನಟ ಜಯರಾಮ್ ಕಾರ್ತಿಕ್​​

ಬೆಂಗಳೂರು ಹೊರವಲಯದ ಹೆಬ್ಬಗೋಡಿಯಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಅಂಬರೀಶ್ ಅವರು ಆಯೋಜಿಸಿದ್ದ ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ನಟಿ ರಾಗಿಣಿ ಹಾಗೂ ನಟ ಜೆಕೆ ಭಾಗಿಯಾಗಿದ್ದರು.

Actress Ragini and actor JK distributing groceries to wage laborers
ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ ಮಾಡಿದ ನಟಿ ರಾಗಿಣಿ ಹಾಗೂ ನಟ ಜೆಕೆ
author img

By

Published : May 17, 2020, 10:49 PM IST

ಬೆಂಗಳೂರು: ಲಾಕ್​ಡೌನ್​ನಿಂದ ಕೆಲಸವಿಲ್ಲದೇ ಸಂಕಷ್ಟಕ್ಕೆ ಒಳಗಾಗಿದ್ದ ಕೂಲಿ ಕಾರ್ಮಿಕರಿಗೆ ಬೆಂಗಳೂರು ಹೊರವಲಯದ ಹೆಬ್ಬಗೋಡಿಯಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಅಂಬರೀಶ್ ಆಯೋಜಿಸಿದ್ದ ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ನಟಿ ರಾಗಿಣಿ ಹಾಗೂ ನಟ ಜಯರಾಮ್ ಕಾರ್ತಿಕ್ (ಜೆಕೆ) ಭಾಗವಹಿಸಿದ್ದರು.

ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯಲ್ಲಿರುವ 1 ಸಾವಿರಕ್ಕೂ ಅಧಿಕ ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್​ಗಳನ್ನು ವಿತರಣೆ ಮಾಡಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನಟಿ ರಾಗಿಣಿ, ಕೊರೊನಾ ಲಾಕ್​ಡೌನ್ ಸಂದರ್ಭದಲ್ಲಿ ಹಲವರು ಬಡ ಹಾಗೂ ಕೂಲಿ ಕಾರ್ಮಿಕರ ನೆರವಿಗೆ ಬಂದಿದ್ದಾರೆ. ಅದರಲ್ಲಿ ಕರವೇ ಅಂಬರೀಶ್ ನೇತೃತ್ವದ ತಂಡ ಲಾಕ್​​​​​ಡೌನ್ ಆದ ದಿನದಿಂದಲೂ ಆಹಾರ ಪ್ಯಾಕೇಟ್ ಹಾಗೂ ದಿನಸಿ ಕಿಟ್​ಗಳನ್ನು ವಿತರಿಸುತ್ತಿದ್ದಾರೆ ಎಂದರು.

ಇಂತಹ ತುರ್ತು ಸಂದರ್ಭದಲ್ಲಿ ಒಬ್ಬರೇ ನಿಂತು ಇಂತಹ ಕೆಲಸ ಮಾಡುವುದಕ್ಕೆ ಆಗುವುದಿಲ್ಲ. ಉಳ್ಳವರು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿರುವುದು ಖುಷಿಯ ವಿಚಾರ ಎಂದರು.

ನಟ ಜೆಕೆ ಮಾತನಾಡಿ, ಕೊರೊನಾ ಮಹಾಮಾರಿಯಿಂದಾಗಿ ಜನ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅವರಿಗೆ ಈಗಿನ ಪರಿಸ್ಥಿತಿಯಲ್ಲಿ ಹಣಕ್ಕಿಂತ ಆಹಾರ ಹಾಗೂ ದಿನಸಿಯ ಅವಶ್ಯಕತೆ ಇದೆ. ಅದನ್ನು ಕರವೇ ಅಂಬರೀಶ್ ನೇತೃತ್ವದ ತಂಡ ಮಾಡುತ್ತಿರುವುದು ಒಳ್ಳೆಯ ವಿಚಾರ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.