ETV Bharat / state

ತಾಯಿಯಾಗಿದ್ದು ನನ್ನ ಬದುಕಿನ ಅತೀ ಸಂಭ್ರಮದ ಕ್ಷಣ: ನಟಿ ಮಯೂರಿ

ಶಿಶುವಿನ ಆರೋಗ್ಯಕರ ಬೆಳವಣಿಗೆಗೆ ತಾಯಿ ಎದೆಹಾಲು ಅತ್ಯಗತ್ಯ. ನಾನು ಈ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ- ನಟಿ ಮಯೂರಿ

ನಟಿ ಮಯೂರಿ
Actress Mayuri
author img

By

Published : Aug 5, 2021, 6:44 AM IST

ಬೆಂಗಳೂರು: ಮಗುವಿಗೆ ಎದೆಹಾಲು ನೀಡುವುದರ ಅವಶ್ಯಕತೆಯ ಕುರಿತಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾರತ್‌ಹಳ್ಳಿಯ ರೈನ್ ಬೋ ಮಕ್ಕಳ ಆಸ್ಪತ್ರೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸ್ಯಾಂಡಲ್‍ವುಡ್ ನಟಿ ಮಯೂರಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ಯಾಮರಾ ಮುಂದೆ ಹಲವು ಪಾತ್ರ ನಿಭಾಯಿಸಿದ್ದ ನನಗೆ ನಿಜ ಜೀವನದಲ್ಲಿ ತಾಯಿಯಾದಾಗ ಆ ಪಾತ್ರ ಅದೆಷ್ಟು ಜವಾಬ್ದಾರಿಯುತ ಎಂಬುದು ಅರ್ಥವಾಯಿತು. ಆ ಬದಲಾವಣೆಯನ್ನು ಅತೀವ ಸಂಭ್ರಮದಿಂದ ಸ್ವೀಕರಿಸಿದ್ದೇನೆ. ಮಗುವನ್ನು ನೋಡಿಕೊಳ್ಳುವುದು ನಿಜಕ್ಕೂ ಬಹುದೊಡ್ಡ ಹೊಣೆ ಎಂಬುದು ಮನವರಿಕೆಯಾಗಿದೆ. ನಾನು ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ ಎಂದರೆ ಇದಕ್ಕೆ ನನ್ನ ಪತಿ ಮತ್ತು ಕುಟುಂಬದವರ ಬೆಂಬಲ ಕಾರಣ ಎಂದರು.

ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಮಾತನಾಡಿದ ನಟಿ ಮಯೂರಿ

ತಾಯಿ ಮಗುವಿಗೆ ಎದೆಹಾಲು ನೀಡುವುದು ಅತ್ಯವಶ್ಯಕ. ಎದೆ ಹಾಲನ್ನು ಅಮೃತ ಸಮಾನ ಎನ್ನುತ್ತಾರೆ. ಶಿಶುವಿನ ಆರೋಗ್ಯಕರ ಬೆಳವಣಿಗೆಗೆ ತಾಯಿ ಎದೆಹಾಲು ಅತ್ಯಗತ್ಯ. ನಾನು ಈ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ಎದೆಹಾಲಿನ ಮಹತ್ವದ ಕುರಿತು ರೈನ್ ಬೋ ಕೈಗೊಂಡಿರುವ ಈ ಜಾಗೃತಿ ಕಾರ್ಯಕ್ರಮ ತುಂಬಾ ಸಮಯೋಚಿತವಾಗಿದೆ. ಆಸ್ಪತ್ರೆಯ ಈ ಕಾಳಜಿಯ ಅಭಿಯಾನದಲ್ಲಿ ನಾನು ಜೊತೆಯಾಗಿರುವುದು ಸಂತಸ ತಂದಿದೆ ಎಂದು ಹೇಳಿದರು.

ಮಾರತ್‌ಹಳ್ಳಿ ರೈನ್ ಬೋ ಮಕ್ಕಳ ಆಸ್ಪತ್ರೆಯ ಶಿಶುಗಳ ತೀವ್ರ ನಿಗಾ ಘಟಕದ ಮುಖ್ಯಸ್ಥ ಡಾ.ರಕ್ಷಯ್ ಶೆಟ್ಟಿ ಮಾತನಾಡಿ, ಶಿಶುಗಳ ಬೆಳವಣಿಗೆಗೆ ಪೌಷ್ಟಿಕಾಂಶಗಳು ತುಂಬಾ ಅವಶ್ಯಕ. ಇವು ತಾಯಿಯ ಎದೆಹಾಲಿನಿಂದಲೇ ಸಿಗುವುದು. ಈ ಕಾರಣಕ್ಕೆ ತಾಯಂದಿರು ಮಕ್ಕಳಿಗೆ ಎದೆಹಾಲು ನೀಡುವುದರಲ್ಲಿ ನಿರ್ಲಕ್ಷ್ಯ ಮಾಡಕೂಡದು. ಮಕ್ಕಳಲ್ಲಿ ಹೆಚ್ಚಿನ ರೋಗನಿರೋಧಕ ಶಕ್ತಿ ಬೆಳವಣಿಗೆಯಾಗಲು ತಾಯಿ ಎದೆಹಾಲು ನೀಡುವುದು ಅತೀ ಮುಖ್ಯ ಎಂದು ತಿಳಿಸಿದರು.

ಮಕ್ಕಳಿಗೆ ಎದೆಹಾಲು ನೀಡಲು ಹಲವು ಮಹಿಳೆಯರು ಹಿಂದೇಟು ಹಾಕುತ್ತಾರೆ. ಆದರೆ ಈ ವಿಷಯದಲ್ಲಿ ಯಾವತ್ತೂ ತಪ್ಪು ನಿರ್ಧಾರ ತೆಗೆದುಕೊಳ್ಳಬಾರದು. ತಾಯಂದಿರು ಮಕ್ಕಳಿಗೆ ಎದೆಹಾಲು ನೀಡಲೇಬೇಕು. ಅಂದಾಗ ಮಾತ್ರ ಅವರ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುತ್ತದೆ. ಈ ವಿಷಯದಲ್ಲಿ ಜಾಗೃತಿ ಮೂಡಿಸಬೇಕೆಂದು ರೈನ್ ಬೋ ಆಸ್ಪತ್ರೆ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಮೂಲಕ ಎದೆಹಾಲಿನ ಮಹತ್ವವನ್ನು ಸಾರುವ ಕೆಲಸವಾಗಲಿದೆ ಎಂದು ಮಾರತ್ ಹಳ್ಳಿ ರೈನ್ ಬೋ ಮಕ್ಕಳ ಆಸ್ಪತ್ರೆಯ ನವಜಾತ ಶಿಶು ತಜ್ಞ ಡಾ. ಬಾಬು ಎಸ್ ಮದರ್‍ಕರ್ ತಿಳಿಸಿದರು.

ರೈನ್ ಬೋ ಮಕ್ಕಳ ಆಸ್ಪತ್ರೆಯ ಯುನಿಟ್ ಮುಖ್ಯಸ್ಥ ಅಕ್ಷಯ್ ಮಾತನಾಡಿ, ರೈನ್ ಬೋ ಮಕ್ಕಳ ಆಸ್ಪತ್ರೆಯು ಆರೋಗ್ಯದ ಕಾಳಜಿ ಕುರಿತಂತೆ ನಿರಂತರವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಈ ಕಾರ್ಯವು ಅತೀ ಮುಖ್ಯವಾದದ್ದು ಎಂದು ನಾವು ನಂಬಿದ್ದು, ಸಮಾಜದಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.