ETV Bharat / state

ಗೆದ್ದು ಬಾ ಇಂಡಿಯಾ: ಟೀಂ ಇಂಡಿಯಾಗೆ ಶುಭಕೋರಿದ ನಟಿ ಹರ್ಷಿಕಾ - wishes for team India

ಭಾರತ ಮತ್ತು ಪಾಕಿಸ್ತಾನ ನಡುವೆ ಇಂದು ಟಿ-20 ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿದ್ದು, ನಟಿ ಹರ್ಷಿಕಾ ಪೂಣಚ್ಛ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ವಿಡಿಯೋ ಸಂದೇಶದ ಮೂಲಕ ಭಾರತ ತಂಡಕ್ಕೆ ಶುಭ ಕೋರಿದ್ದಾರೆ.

actress harshika poonaccha wishes to team India
ಟೀಂ ಇಂಡಿಯಾಗೆ ಶುಭಕೋರಿದ ನಟಿ ಹರ್ಷಿಕಾ ಪೂಣಚ್ಛ
author img

By

Published : Oct 24, 2021, 7:20 PM IST

ಬೆಂಗಳೂರು: ಇಂದು ಭಾರತ V/S ಪಾಕಿಸ್ತಾನ ಟಿ20 ವಿಶ್ವಕಪ್​ ಪಂದ್ಯ ನಡೆಯುತ್ತಿದ್ದು, ಸ್ಯಾಂಡಲ್​ವುಡ್​ ನಟಿ ಹರ್ಷಿಕಾ ಪೂಣಚ್ಛ 'ಗೆದ್ದು ಬಾ ಇಂಡಿಯಾ, ನಮಗೆ ವರ್ಲ್ಡ್​ ಕಪ್​ ಮತ್ತೆ ಬೇಕು' ಎಂದು ಟೀಮ್​ ಇಂಡಿಯಾಗೆ ಶುಭಕೋರಿದ್ದಾರೆ.

ಶುಭಕೋರಿದ ಶಾಸಕ ರೇಣುಕಾಚಾರ್ಯ:

ಟಿ-20 ವಿಶ್ವಕಪ್ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನ ವಿರುದ್ಧ ಸೆಣಸುತ್ತಿದ್ದು, ವಿಶ್ವಕಪ್ ಇತಿಹಾಸಲ್ಲಿ ಪಾಕಿಸ್ತಾನದ ವಿರುದ್ಧ ಅಜೇಯ ದಾಖಲೆ ಹೊಂದಿರುವ ಭಾರತ ಕ್ರಿಕೆಟ್ ತಂಡ ಈ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಮತ್ತೊಮ್ಮೆ ಬಗ್ಗುಬಡಿಯುವ ಮೂಲಕ, ಭಾರತ ಮತ್ತೊಂದು ವಿಶ್ವಕಪ್ ಗೆಲ್ಲಲೆಂದು ಹಾರೈಸುತ್ತೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ವಿಡಿಯೋ ಸಂದೇಶದ ಮೂಲಕ ಶುಭ ಕೋರಿದ್ದಾರೆ.

ಟೀಂ ಇಂಡಿಯಾಗೆ ಶುಭಕೋರಿದ ನಟಿ ಹರ್ಷಿಕಾ ಪೂಣಚ್ಛ

ಪಂದ್ಯ ನೋಡಲು ಗಡಿಜಿಲ್ಲೆಯಲ್ಲಿ ಬಂದ್ ವಾತಾವರಣ:

ಐಸಿಸಿ ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ಇಂದು ನಡೆಯುತ್ತಿರುವ ಭಾರತ-ಪಾಕಿಸ್ತಾನ ಪಂದ್ಯ ವೀಕ್ಷಿಸಲು ಚಾಮರಾಜನಗರದಲ್ಲಿ ಜನರು ತಮ್ಮ ವೀಕೆಂಡ್ ಸುತ್ತಾಟ ಬದಿಗಿಟ್ಟು ಟಿವಿ ಮುಂದೆ ಕುಳಿತಿದ್ದು, ನಗರದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿವೆ.

ಭಾರತ, ಪಾಕಿಸ್ತಾನ ವಿರುದ್ಧ ಕ್ರಿಕೆಟ್ ಆಡುವಾಗ ಕ್ರಿಕೆಟ್ ಪ್ರೇಮಿಗಳಲ್ಲಷ್ಟೇ ಅಲ್ಲದೇ ಇತರರು ಪಂದ್ಯ ವೀಕ್ಷಿಸುವ ಹುಮ್ಮಸ್ಸು ತೋರುವುದರಿಂದ ಈ ವಾತಾವರಣ ನಿರ್ಮಾಣವಾಗಿದೆ. ಹೋಟೆಲ್​​ಗಳು, ಫಾಸ್ಟ್ ಫುಡ್ ಸೆಂಟರ್​ಗಳು, ಚಾಟ್ ತಳ್ಳುಗಾಡಿಗಳು ನಿರೀಕ್ಷಿತ ವ್ಯಾಪಾರವಿಲ್ಲದೇ ನಿರಾಸೆ ಅನುಭವಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇವಲ ಸರಕು ತುಂಬಿದ ವಾಹನಗಳಷ್ಟೇ ಸಂಚರಿಸುತ್ತಿದ್ದು, ಪ್ರಯಾಣಿಕ ವಾಹನಗಳ ಸಂಖ್ಯೆ ತೀರಾ ವಿರಳವಾಗಿರುವುದು ಕಂಡು ಬಂದಿದೆ.

ಟೀಂ ಇಂಡಿಯಾಗೆ ಶುಭಕೋರಿದ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ

ಇನ್ನು, ಟೀಂ ಇಂಡಿಯಾ ಗೆದ್ದು ಬರಲೆಂದು ಹಾರೈಸಿ ಅಜಾದ್ ಹಿಂದೂ ಸೇನೆಯ ವತಿಯಿಂದ ಚಾಮರಾಜನಗರದ ಶ್ರೀಮಾರಮ್ಮತಾಯಿ ದೇವಸ್ಥಾನದಲ್ಲಿ ವಿಶೇಷಪೂಜೆ ಸಲ್ಲಿಸಲಾಗಿದೆ. ಗೆದ್ದು ಬಾ ಇಂಡಿಯಾ ಹಾಗೂ ವಿಜಯ ಸಂಕೇತದೊಂದಿಗೆ ಜೈಕಾರ ಕೂಗಿದ ಕ್ರಿಕೆಟ್ ಪ್ರೇಮಿಗಳು, ವಿರಾಟ್ ಕೊಹ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದುವರೆಗೂ ಯಾವುದೇ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಸೋತಿಲ್ಲ ಎಂಬುದು ವಿಶೇಷವಾಗಿದ್ದು ಇಂದು ಅದು ಮುಂದುವರೆಯಲೆಂದು ಮಾರಮ್ಮ ತಾಯಿಗೆ ಬೇಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.