ಬೆಂಗಳೂರು: ಆರ್.ಆರ್.ನಗರ ಉಪಸಮರ ಕದನ ಬಿರುಸಿನಿಂದ ಸಾಗ್ತಿದೆ. ಸದ್ಯ ದರ್ಶನ್ ಕೂಡ ಚುನಾವಣಾ ಅಖಾಡಕ್ಕೆ ಇಳಿದಿದ್ದು ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ನಗರ ಆಯುಕ್ತ ಕಮಲ್ ಪಂಥ್ ಸೂಚನೆ ಹಿನ್ನೆಲೆ ಪೊಲೀಸರು ಅಲರ್ಟ್ ಆಗಿದ್ದಾರೆ.
- ಬೆಳಗ್ಗೆ 11:00 ಕ್ಕೆ ಯಶವಂತಪುರ ರೈಲ್ವೆ ನಿಲ್ದಾಣದ ಮುಂಭಾಗದಿಂದ ರೋಡ್ ಶೋ ಆರಂಭ
- ಬೆಳಗ್ಗೆ 11:30 ಕ್ಕೆ ಜೆ.ಪಿ.ಪಾರ್ಕ್ ಚೌಡೇಶ್ವರಿ ಬಸ್ ನಿಲ್ದಾಣದಿಂದ ಹೊರಟು ಜೆ.ಪಿ.ಪಾರ್ಕ್ ವಾರ್ಡ್ ವ್ಯಾಪ್ತಿಯಲ್ಲಿ ರೋಡ್ ಶೋ ಮೂಲಕ ಮತಯಾಚನೆ
- ಮಧ್ಯಾಹ್ನ 1: 15 ಕ್ಕೆ ಜಾಲಹಳ್ಳಿ ವಿಲೇಜ್ ಮೂಲಕವಾಗಿ ರೋಡ್ ಶೋ
- ಮಧ್ಯಾಹ್ನ 2:00 ಕ್ಕೆ ಹೆಚ್.ಎಂ.ಟಿ ಪೀಣ್ಯದಿಂದ ಗೊರಗುಂಟೆಪಾಳ್ಯದಲ್ಲಿ ಪ್ರಚಾರ
- ಸಂಜೆ 4:00 ಕ್ಕೆ ಲಕ್ಷ್ಮಿದೇವಿನಗರದ ಕೂಲಿನಗರ ಸೇತುವೆಯಿಂದ ರೋಡ್ ಶೋ
- ಸಂಜೆ 5:00 ಕ್ಕೆ ಲಗ್ಗೆರೆ ಆಲದಮರ ಸರ್ಕಲ್ ಮೂಲಕ ಕೊಟ್ಟಿಗೆಪಾಳ್ಯ ಪೈಪ್ ಲೈನ್, ಸುಂಕದಕಟ್ಟೆಗಳಲ್ಲಿ ರೋಡ್ ಶೋ
- ಸಂಜೆ 6:00ಕ್ಕೆ ಕೊಟ್ಟಿಗೆಪಾಳ್ಯದ ಬಿಡಿಎ ಕಾಂಪ್ಲೆಕ್ಸ್ ವರೆಗೆ ರೋಡ್ ಶೋ
- ರಾತ್ರಿ 8:15 ಕ್ಕೆ ಜ್ಞಾನಭಾರತಿಯ ಕೆಂಗುಂಟೆ, ಮಲ್ಲತ್ತಹಳ್ಳಿಗಳ್ಳಿ ರೋಡ್ ಶೋ
- ರಾತ್ರಿ 9:00 ವರೆಗೆ ವಾರ್ಡ್ ರಾಜರಾಜೇಶ್ವರಿನಗರದ ಪ್ರವೇಶದ್ವಾರದ ಮೂಲಕ ರಾಜರಾಜೇಶ್ವರಿನಗರದ ಪ್ರಮುಖ ರಸ್ತೆಗಳಲ್ಲಿ ಚಿತ್ರನಟ ದರ್ಶನ್ ರೋಡ್ ಶೋ
ಇನ್ನು ಈ ಭಾಗದಲ್ಲಿ ಎಲ್ಲಾ ಉತ್ತರ ವಿಭಾಗ ಡಿಸಿಪಿ ಹಾಗೂ ಪಶ್ಚಿಮ ವಿಭಾಗ ಡಿಸಿಪಿ ನೇತೃತ್ವದಲ್ಲಿ ಭದ್ರತೆ ಮಾಡಲಾಗಿದೆ. ಸದ್ಯ ಜನ ಕಿಕ್ಕಿರುವ ಕಾರಣ ಯಾವುದೇ ಅಹಿತಕರ ಘಟನೆ ನಡೆಯದ ಹಾಗೆ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ.