ETV Bharat / state

ಕರಾಳ ಕಾನೂನುಗಳ ರದ್ದುಗೊಳಿಸಿ ಸ್ಟಾನ್​ ಸ್ವಾಮಿಗೆ ನ್ಯಾಯವೊದಗಿಸಿ : ಪ್ರಗತಿಪರರ ಆಗ್ರಹ - ಸ್ಟಾನ್​ ಸ್ವಾಮಿ ಸಾವು

ಮಾನವಹಕ್ಕುಗಳ ಹೋರಾಟಗಾರ ಸ್ಟಾನ್ ಸ್ವಾಮಿ ಸಾವಿನ ಬಳಿಕ ದೇಶದಾದ್ಯಂತ ಸರ್ಕಾರದ ನೀತಿ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಇದರ ಅಂಗವಾಗಿ ಬೆಂಗಳೂರಲ್ಲಿಯೂ ಪ್ರತಿಭಟನೆ ನಡೆದಿದ್ದು, ಯುಎಪಿ ಕಾಯ್ದೆಯ ರದ್ದುಪಡಿಸುವಂತೆ ಆಗ್ರಹಿಸಲಾಗಿದೆ..

Activist protest Stan Swamys death urged to removal of UAPA
ಪ್ರಜಾಪ್ರಭುತ್ವದ ಉಳಿವಿಗಾಗಿ ರಾಷ್ಟ್ರೀಯಾಂದೋಲನ
author img

By

Published : Aug 3, 2021, 6:54 PM IST

ಬೆಂಗಳೂರು : ಕರಾಳ ಕಾನೂನುಗಳ್ಳನ್ನು ಬಳಸಿ ಮಾನವ ಹಕ್ಕುಗಳ ಹೋರಾಟಗಳನ್ನು ದಮನಿಸುವ ಪಿತೂರಿ ಮತ್ತು ಮುಂದಾಳುಗಳನ್ನು ಹೆದರಿಸುವ-ಹಿಂಸಿಸುವ ಸರ್ಕಾರಗಳ ನಡೆಯನ್ನು ವಿರೋಧಿಸುವ ಸಲುವಾಗಿ ದೇಶದ ನೂರಕ್ಕೂ ಹೆಚ್ಚು ಪ್ರಗತಿಪರ, ಜೀವಪರ, ಜನಪರ ಚಳವಳಿಗಳು ಮತ್ತು ಸಂಘಟನೆಗಳು ಒಟ್ಟಾಗಿ ಪ್ರಜಾಪ್ರಭುತ್ವದ ಉಳಿವಿಗಾಗಿ ರಾಷ್ಟ್ರೀಯಾಂದೋಲನಕ್ಕೆ ಮಂಗಳವಾರ ಕರೆ ಕೊಡಲಾಗಿತ್ತು.

ಪ್ರಗತಿಪರ ಸಂಘಟನೆಗಳು ಇಂದು ಮೌರ್ಯ ಜಂಕ್ಷನ್ ಗಾಂಧಿ ಪ್ರತಿಮೆಯ ಬಳಿ ಸಂವಾದ, ಸಂಗೀತ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ತಮ್ಮ ಕಾಳಜಿ, ನಿಲುವುಗಳ ಜೊತೆ ಸರ್ಕಾರಗಳ ಈ ದಮನಕಾರಿ ಕುತಂತ್ರಗಳನ್ನು ಖಂಡಿಸುವ ಮೂಲಕ ಪ್ರತಿಭಟಿಸಿದರು.

ಕರಾಳ ಕಾನೂನುಗಳ ರದ್ದುಗೊಳಿಸಿ ಸ್ಟಾನ್​ ಸ್ವಾಮಿಗೆ ನ್ಯಾಯವೊದಗಿಸಿ

‘ಪ್ರಜಾಪ್ರಭುತ್ವದ ಉಳಿವಿಗಾಗಿ ರಾಷ್ಟ್ರೀಯಾಂದೋಲನ’ವು ಯುಎಪಿಎ ಮತ್ತು ದೇಶದ್ರೋಹ ಕಾನೂನುಗಳು ಸೇರಿದಂತೆ ಇನ್ನಿತರೇ ಕಾನೂನುಗಳನ್ನು ರದ್ದುಗೊಳಿಸಲು ಆಗ್ರಹಿಸಿದರು. 84 ವರ್ಷದ ಪಾದ್ರಿ ಸ್ಟಾನ್ ಸ್ವಾಮಿ ಈ ರೀತಿಯ ಕಾನೂನುಗಳಿಗೆ ತೀರ ಇತ್ತೀಚಿಗೆ ಗುರಿಯಾಗಿದ್ದರು.

ಜುಲೈ 5ರಂದು ನ್ಯಾಯಾಂಗ ಬಂಧನದಲ್ಲಿದ್ದ ಸಾಂಸ್ಥಿಕ ಹತ್ಯೆಯು, ಈ ಕಾನೂನುಗಳು ಎಷ್ಟು ವಿಷಮಕಾರಿಯಾಗಿ ಬಳಿಸಿಕೊಳ್ಳಲಾಗುತ್ತಿದೆ ಎಂಬುದರ ವಿಚಾರವಾಗಿ ನಮ್ಮ ಆತ್ಮಸಾಕ್ಷಿಯನ್ನೇ ಅಲುಗಾಡಿಸಿದೆ ಎಂದು ಪ್ರತಿಭಟನಾನಿರತರು ದೂರಿದ್ದಾರೆ.

ಈ ದೇಶದ ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಅಪಾರ ಗೌರವ ಮತ್ತು ನಂಬಿಕೆ ಹೊಂದಿದ್ದ ಸ್ವಾಮಿ ತಮ್ಮ ಕೊನೆಯ ಉಸಿರಿರುವವರೆಗೂ ಎಲ್ಲಾ ರೀತಿಯ ಅಪಪ್ರಚಾರ ಮತ್ತು ಅವಮಾನಗಳನ್ನು ಸಹಿಸಿಕೊಂಡು ತಮ್ಮ ಮೇಲಿದ್ದ ಆರೋಪವನ್ನು ಸುಳ್ಳೆಂದು ಸಾಬೀತು ಪಡಿಸಲು ಒಂದೇ ಒಂದು ಅವಕಾಶ ಸಿಗಲಿದೆ ಎಂದೇ ಕಾದಿದ್ದರು. ಅವರ ಸಾವು, ನಮ್ಮ ರಾಷ್ಟ್ರ ಮತ್ತು ನ್ಯಾಯಾಂಗದ ಆತ್ಮಸಾಕ್ಷಿಯನ್ನೂ ಬೆಚ್ಚಿಬೀಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದೊಂದು ದಶಕದಲ್ಲಿ ಸರ್ಕಾರಗಳ ನಡೆಗಳನ್ನು ವಿಮರ್ಶಿಸುವುದಕ್ಕೆ, ಖಂಡಿಸುವುದಕ್ಕಿರುವ ಮತ್ತು ಅವುಗಳ ವಿರುದ್ಧ ಪ್ರತಿಭಟಿಸಲಿಕ್ಕೆ ಅವಕಾಶಗಳು ಬಹಳವಾಗಿ ಕ್ಷೀಣಿಸಿದೆ ಮತ್ತು ಸರ್ಕಾರದ ವಿರುದ್ಧ ಪ್ರತಿಭಟಿಸಲು ಧೈರ್ಯ ಮಾಡುವವರಿಗೆ ಕಿರುಕುಳ ಮತ್ತು ಶಿಕ್ಷೆ ವಿಧಿಸಲು ರಾಜ್ಯವು ಅಪರಾಧ ನ್ಯಾಯ ವ್ಯವಸ್ಥೆಯನ್ನು ಶಸ್ತ್ರವಾಗಿ ಬಳಿಸಿಕೊಳ್ಳುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಇಡೀ ನ್ಯಾಯಾಂಗ ವ್ಯವಸ್ಥೆಯು ನಾಗರಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ.

2015-2019ರ ನಡುವೆ 5128 ಯುಎಪಿಎ ಪ್ರಕರಣಗಳಲ್ಲಿ 7050 ಬಂಧನಗಳು ನಡೆದಿವೆ. ಆದರೆ, ಈ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಕೇವಲ ಶೇ.2.20ರಷ್ಟು ಮಾತ್ರ ಎಂದು ಲೋಕಸಭೆಯಲ್ಲಿಯೇ ತಿಳಿಸಲಾಗಿದೆ ಎಂದು ಪ್ರತಿಭಟನಾ ನಿರತರ ಮುಂದಾಳತ್ವ ವಹಿಸಿಕೊಂಡಿದ್ದ ನರಸಿಂಹಮೂರ್ತಿ ಈಟಿವಿ ಭಾರತಕ್ಕೆ ತಿಳಿಸಿದರು.

ಪ್ರತಿಭಟನಾ ನಿರತರ ಪ್ರಮುಖ ಬೇಡಿಕೆಗಳು :

1. ದೇಶದ್ರೋಹ ಕಾನೂನನ್ನು ರದ್ದುಪಡಿಸುವುದು

2. ಯುಎಪಿಎ ರದ್ದುಪಡಿಸುವುದು

3. ನಾಗರಿಕರು ಜಾಮೀನು ಪಡೆಯುವ ಹಕ್ಕನ್ನು ಮರುಸ್ಥಾಪಿಸಬೇಕು

4. ಎಲ್ಲಾ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕು

5. ಸುಳ್ಳು ಪ್ರಕರಣಗಳನ್ನು ದಾಖಲಿಸುವ ಪ್ರವೃತ್ತಿಯನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಅನುಸರಿಸಬೇಕು ಮತ್ತು ಇದರಿಂದ ಅನ್ಯಾಯ ಎದುರಿಸಿರುವ ಎಲ್ಲರಿಗೂ ಪರಿಹಾರ ನೀಡಬೇಕು

6. ಕಾನೂನುಬಾಹಿರ ಬಂಧನಗಳನ್ನು ಮತ್ತು ಅಪರಾಧ ನ್ಯಾಯ ವ್ಯವಸ್ಥೆಯನ್ನು ಶಸ್ತ್ರಾಸ್ತ್ರವಾಗಿ ಬಳಸುವುದನ್ನು ನಿಲ್ಲಿಸಬೇಕು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.