ETV Bharat / state

ಆನ್-ಲೈನ್ ಕ್ಲಾಸ್ ಟೈಂ ಲಿಮಿಟ್ ಕ್ರಾಸ್ ಮಾಡುವ ಸಂಸ್ಥೆಗಳ ವಿರುದ್ಧ ಕ್ರಮ: ಸುರೇಶ್ ಕುಮಾರ್

ಆನ್-ಲೈನ್ ಬೋಧನೆ ಮಾರ್ಗಸೂಚಿ ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕರ್ನಾಟಕ ಶಿಕ್ಷಣ ಕಾಯ್ದೆ-1983 (1995)ರ ಸೆಕ್ಷನ್ 124(5) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಎಚ್ಚರಿಸಿದ್ದಾರೆ.

author img

By

Published : Oct 28, 2020, 5:26 PM IST

Minister Suresh Kumar
ಸುರೇಶ್ ಕುಮಾರ್

ಬೆಂಗಳೂರು: ಕೋವಿಡ್ ಸೋಂಕಿನ ತೀವ್ರತೆ ಹಿನ್ನೆಲೆಯಲ್ಲಿ ಭೌತಿಕವಾಗಿ ಇನ್ನೂ ಶಾಲೆಗಳು ತೆರೆಯಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಶಾಲೆಗಳು ಶಿಕ್ಷಣದಲ್ಲಿ ತಂತ್ರಜ್ಞಾನಾಧಾರಿತ ಶಿಕ್ಷಣ ಕುರಿತು ತಜ್ಞರ ಸಮಿತಿಯ ಶಿಫಾರಸ್ಸಿನನ್ವಯ ಆನ್‍ಲೈನ್ ಪಾಠ ಮಾಡಲು ಅನುವು ಮಾಡಿಕೊಡಲಾಗಿತ್ತು.

ಆದರೆ ಶಾಲೆಗಳು ಸರ್ಕಾರದ ಆನ್-ಲೈನ್ ಮಾರ್ಗಸೂಚಿ ಪಾಲಿಸದೇ ಹೆಚ್ಚಿನ ಅವಧಿ ಆನ್-ಲೈನ್ ತರಗತಿಗಳನ್ನು ನಡೆಸುತ್ತಿವೆ. ಇದರಿಂದ ಮಕ್ಕಳ ಆರೋಗ್ಯ ಮತ್ತು ದೃಷ್ಟಿಯ ಮೇಲೆ ಪರಿಣಾಮಗಳುಂಟಾಗುತ್ತಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಇಲಾಖೆ ಸುತ್ತೋಲೆ ಹೊರಡಿಸಿದೆ.

ತಜ್ಞರ ವರದಿಯ ಶಿಫಾರಸಿನ ಅವಧಿಯನ್ವಯ ಆನ್-ಲೈನ್ ಬೋಧನೆ ಮಾಡಬೇಕು. ಈ ಮಾರ್ಗಸೂಚಿ ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕರ್ನಾಟಕ ಶಿಕ್ಷಣ ಕಾಯ್ದೆ-1983 (1995)ರ ಸೆಕ್ಷನ್ 124(5) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದ್ದಾರೆ.

ಹಾಗೇ ರಾಜ್ಯದ ಖಾಸಗಿ ಶಾಲೆಗಳು ಆನ್-ಲೈನ್ ಬೋಧನೆ ಆರಂಭಿಸಿ ಹೆಚ್ಚುವರಿ ಶುಲ್ಕ ಪಾವತಿಸಲು ಒತ್ತಡ ತರುತ್ತಿದ್ದ ಹಿನ್ನೆಲೆಯಲ್ಲಿ ಪೋಷಕರ ದೂರಿನನ್ವಯ ಕ್ರಮ ಕೈಗೊಂಡು ಹೆಚ್ಚುವರಿ ಶುಲ್ಕ ಪಡೆಯದೇ ಆನ್-ಲೈನ್ ತರಗತಿಗಳನ್ನು ನಡೆಸುವಂತೆ ಏಪ್ರಿಲ್ 2020ರಲ್ಲಿ ಆದೇಶ ನೀಡಲಾಗಿತ್ತು. ಪೋಷಕರಿಗೆ ಮಕ್ಕಳ ಆನ್-ಲೈನ್ ತರಗತಿಗಳಿಗೆ ಮೊಬೈಲ್‍ನಂತಹ ಸಾಧನಗಳನ್ನು ಕೊಳ್ಳಲು ಸಾಮರ್ಥ್ಯ ಇಲ್ಲದಿರುವ ಮತ್ತು ಎಲ್‍ಕೆಜಿಯಿಂದ ಐದನೇ ತರಗತಿ ಮಕ್ಕಳು ಆನ್-ಲೈನ್ ಶಿಕ್ಷಣದಲ್ಲಿ ಭಾಗವಹಿಸಲು ತೊಂದರೆಗಳಾಗುತ್ತಿವೆ ಎಂಬ ಪೋಷಕರ ದೂರಿನ ಹಿನ್ನೆಲೆಯಲ್ಲಿ ಜೂ.15ರಂದು ತಜ್ಞರ ಸಮಿತಿ ರಚಿಸಿ ಆನ್-ಲೈನ್ ಶಿಕ್ಷಣ ಕುರಿತು ವರದಿ ನೀಡಲು ಕೇಳಲಾಗಿತ್ತು.

ಜೂ. 17ರಂದು ಎಲ್‍ಕೆಜಿಯಿಂದ ಐದನೇ ತರಗತಿವರೆಗೆ ಆನ್-ಲೈನ್ ಶಿಕ್ಷಣ ರದ್ದುಪಡಿಸಲು ಆದೇಶ ಹೊರಡಿಸಲಾಗಿತ್ತು. ತಜ್ಞರ ಸಮಿತಿ ವರದಿ ಬರುವತನಕ ಪ್ರಾಥಮಿಕ ತರಗತಿಗಳಿಂದ 10ನೇ ತರಗತಿವರೆಗೆ ಆನ್‍ಲೈನ್ ಶಿಕ್ಷಣಕ್ಕೆ ತರಗತಿವಾರು ಅವಧಿ ನಿಗದಿಪಡಿಸಿ ಜೂ. 27ರಂದು ಸುತ್ತೋಲೆ ಹೊರಡಿಸಲಾಗಿತ್ತು.

ಇಲಾಖೆಯ ಜೂ. 17ರ ಸುತ್ತೋಲೆ ವಿರುದ್ಧ ಖಾಸಗಿ ಶಿಕ್ಷಣಸಂಸ್ಥೆಗಳು ಉಚ್ಚ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿದ್ದು, ನ್ಯಾಯಾಲಯವು ಜೂ. 17 ಮತ್ತು ಜೂ. 27ರ ಆದೇಶಗಳಿಗೆ ತಡೆಯಾಜ್ಞೆ ನೀಡಿದ್ದು, ಆನ್-ಲೈನ್ ಶಿಕ್ಷಣವನ್ನು ಯಥಾವತ್ತಾಗಿ ಮುಂದುವರೆಸಿಕೊಂಡು ಹೋಗಲು ಅವಕಾಶವಾಗಿತ್ತು.

ಸದ್ಯ ಸುತ್ತೋಲೆಯಲ್ಲಿ ತಜ್ಞರ ಸಮಿತಿ ಶಿಫಾರಸ್ಸಿನನ್ವಯ ಆನ್-ಲೈನ್ ಬೋಧನೆಗೆ ತರಗತಿಗಳ ಅವಧಿಯನ್ನು ವಿವರಿಸಲಾಗಿದೆ.

time table
ವೇಳಾಪಟ್ಟಿ

ಪ್ರತಿ ತರಗತಿಯ ಗರಿಷ್ಠ ಸಮಯ: 30 ನಿಮಿಷಗಳು, 6 ಮತ್ತು ನಂತರದ ತರಗತಿಗಳಿಗೆ ಅವಶ್ಯಕತೆಗನುಗುಣವಾಗಿ 30-45 ನಿಮಿಷಗಳು, ವಯೋಮಾನಕ್ಕನುಗುಣವಾಗಿ ದಿನಕ್ಕೆ 1 ರಿಂದ 4 ಗರಿಷ್ಠ ಅಧಿವೇಶನಗಳು 2 ನೇ ತರಗತಿಯವರೆಗೆ ವಾರದಲ್ಲಿ ಪರ್ಯಾಯ ದಿನಗಳ ಬೋಧನೆ, 3 ನೇ ತರಗತಿಯ ನಂತರ ವಾರಕ್ಕೆ ಗರಿಷ್ಠ 5 ದಿನಗಳವರೆಗೆ. 2 ನೇ ತರಗತಿಯವರೆಗೆ ಪೋಷಕರ ಉಪಸ್ಥಿತಿ ಕಡ್ಡಾಯ ಅಥವಾ ಪೋಷಕರ ಅನುಮತಿಯ ಮೇರೆಗೆ ವಯಸ್ಕರ ಉಪಸ್ಥಿತಿಗೆ ಅವಕಾಶವಿದೆ. ಸಿಂಕ್ರೊನಸ್ (ನೇರ ಪ್ರಸಾರದ ಅಧಿವೇಶನಗಳು) ಮತ್ತು ಅಸಿಂಕ್ರೊನಸ್ (ಪೂರ್ವ-ಮುದ್ರಿತ ಅಧಿವೇಶನಗಳು) ವಿಧಾನಗಳಿಗೆ ಅನುಮತಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

3-6 ವರ್ಷದ ( ಪ್ರೀ-ಪ್ರೈಮಾರಿ) ಮಕ್ಕಳಿಗೆ ಆಟ- ಕಥೆ ಹೇಳುವುದು- ಪದ್ಯ- ಆಸಕ್ತಿಕರ ಚಟುವಟಿಕೆಯಷ್ಟೇ ಆನ್ ಲೈನ್ ಮಾಡಿಸಬೇಕು.( ಮೂರು ದಿನಗಳು)
1-2 ನೇ ತರಗತಿ ಮಕ್ಕಳಿಗೂ ಇದೇ ನಿಯಮ ಜಾರಿಯಲ್ಲಿ ಇರುತ್ತದೆ. ( ಮೂರು ದಿನಗಳು)
3-5ನೇ ತರಗತಿ ಮಕ್ಕಳಿಗೆ ಶೇಕಡ 25 ರಷ್ಟು ಪಠ್ಯ ಕ್ರಮ- ಶೇಕಡ 75 ರಷ್ಟು ಸಾಮಾನ್ಯ ಜ್ಞಾನ. (5 ದಿನಗಳು)
6-8ನೇ ತರಗತಿ ಮಕ್ಕಳಿಗೆ ಶೇಕಡ 50 ರಷ್ಟು ಪಠ್ಯ ಕ್ರಮ- ಶೇಕಡ 50 ರಷ್ಟು ಸಾಮಾನ್ಯ ಜ್ಞಾನ. (5 ದಿನಗಳು)
9-10ನೇ ತರಗತಿ ಮಕ್ಕಳಿಗೆ ಶೇಕಡ 75 ರಷ್ಟು ಪಠ್ಯ ಕ್ರಮ- ಶೇಕಡ 25 ರಷ್ಟು ಸಾಮಾನ್ಯ/ಪಠ್ಯಕ್ರಮ. (5 ದಿನಗಳು)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.