ಬೆಂಗಳೂರು: ಕೋವಿಡ್-19 ತುರ್ತು ಪರಿಸ್ಥಿತಿ ಹಿನ್ನೆಲೆ ಏಟ್ರಿಯಾ ಕರ್ವರ್ಜೆನ್ಸ್ ಟೆಕ್ನಾಲಜೀಸ್ ಲಿಮಿಟೆಡ್ (ಆಕ್ಟ್) ಸಂಸ್ಥೆ ಬಿಬಿಎಂಪಿಗೆ ಒಂದು ಲಕ್ಷ ಮಾಸ್ಕ್ ನೀಡಿದೆ. ಆಕ್ಟ್ ಸಂಸ್ಥೆಯ ಸಿಇಒ ಬಾಲ ಮಲ್ಲದಿ, ಮೇಯರ್ಗೆ ಪತ್ರ ನೀಡುವ ಮೂಲಕ ಹಸ್ತಾಂತರಿಸಿದರು.
ಈ ವೇಳೆ ಉಪ ಮೇಯರ್ ರಾಮ್ ಮೋಹನ್ ರಾಜು, ಬಿಬಿಎಂಪಿ ವಿಪಕ್ಷ ನಾಯಕ ಅಬ್ದುಲ್ ವಾಜಿದ್, ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಇದ್ದರು. ಸದ್ಯ ಈ ಮಾಸ್ಕ್ಗಳನ್ನು ಪಾಲಿಕೆ ವಲಯದಲ್ಲಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು, ವೈದ್ಯರು, ಆರೋಗ್ಯ ವಿಭಾಗದ ಸಿಬ್ಬಂದಿಗೆ ನೀಡಲು ಬಿಬಿಎಂಪಿ ಚಿಂತಿಸಿದೆ.