ಬೆಂಗಳೂರು: ನಿರ್ಮಾಣ ಪೂರ್ಣಗೊಂಡ ಕಟ್ಟಡಕ್ಕೆ ಸ್ವಾಧೀನಪತ್ರ (ಒಸಿ) ನೀಡಲು ವ್ಯಕ್ತಿಯೋರ್ವರಿಂದ ಲಂಚ ಸ್ವೀಕರಿಸುವಾಗ ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ನಗರ ಯೋಜನಾ ವಿಭಾಗದ ಸಹಾಯಕ ನಿರ್ದೇಶಕ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ದೇವೆಂದ್ರಪ್ಪ ಲಂಚ ಸ್ವೀಕರಿಸಿ ಸಿಕ್ಕಿಬಿದ್ದ ಅಧಿಕಾರಿಯಾಗಿದ್ದು, 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ನಗರದ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ದೂರುದಾರರು ಹುಳಿಮಾವಿನಲ್ಲಿ ಖಾಸಗಿ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಲು ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದ ಎಡಿಟಿಪಿ ಕಚೇರಿಗೆ ನಕ್ಷೆ ಮಂಜೂರಾತಿ ಅರ್ಜಿ ಸಲ್ಲಿಸಿ ಮಂಜೂರಾತಿ ಪಡೆದು ಕಟ್ಟಡ ನಿರ್ಮಿಸಿದ್ದರು.
-
Devendrappa, Joint Director of Town Planning, Bengaluru was caught while receiving a bribe of Rs 20 lakhs in cash by a private company for obtaining Occupation Certificate. Rs 7-8 lakhs more found in his vehicle. Further Investigation underway: Anti Corruption Bureau#Karnataka pic.twitter.com/Ze8LTcCmrE
— ANI (@ANI) February 5, 2021 " class="align-text-top noRightClick twitterSection" data="
">Devendrappa, Joint Director of Town Planning, Bengaluru was caught while receiving a bribe of Rs 20 lakhs in cash by a private company for obtaining Occupation Certificate. Rs 7-8 lakhs more found in his vehicle. Further Investigation underway: Anti Corruption Bureau#Karnataka pic.twitter.com/Ze8LTcCmrE
— ANI (@ANI) February 5, 2021Devendrappa, Joint Director of Town Planning, Bengaluru was caught while receiving a bribe of Rs 20 lakhs in cash by a private company for obtaining Occupation Certificate. Rs 7-8 lakhs more found in his vehicle. Further Investigation underway: Anti Corruption Bureau#Karnataka pic.twitter.com/Ze8LTcCmrE
— ANI (@ANI) February 5, 2021
ಪೂರ್ಣಗೊಂಡ ಕಾಮಗಾರಿಗೆ ಓಸಿ ಪಡೆಯಲು ಎಡಿಟಿಪಿ ದೇವೇಂದ್ರಪ್ಪ ಬಳಿ ಅರ್ಜಿ ಸಲ್ಲಿಸಿದ್ದರು. 40 ಲಕ್ಷ ಹಣ ನೀಡಿದರೆ ಓಸಿ ನೀಡುವುದಾಗಿ ಹೇಳಿದ್ದಾರೆ. ಈ ಸಂಬಂಧ ಅರ್ಜಿದಾರ ಎಸಿಬಿಗೆ ದೂರು ನೀಡಿದ್ದರು. ಇದರಂತೆ ಕಾರ್ಯಾಚರಣೆ ಕೈಗೊಂಡ ಎಸಿಬಿ ಅಧಿಕಾರಿಗಳು 20 ಲಕ್ಷ ರೂ. ಲಂಚ ಪಡೆದುಕೊಳ್ಳುವಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಹಣ ಜಪ್ತಿ ಮಾಡಿ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಇದನ್ನೂ ಓದಿ: ಕಾಲ್ಗರ್ಲ್ ಸರ್ವಿಸ್ ಮೂಲಕ ಹನಿಟ್ರ್ಯಾಪ್ ಮಾಡುತ್ತಿದ್ದ ದಂಪತಿ ಅಂದರ್