ETV Bharat / state

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ.. ಅಕುಲ್​, ಸಂತೋಷ್​, ಯುವರಾಜ್​ ಮೊಬೈಲ್ ಗಳು ಸಿಸಿಬಿ ವಶಕ್ಕೆ - sandalwood latest news

ಮಾಜಿ ಶಾಸಕರ ಪುತ್ರ ಆರ್ ವಿ ಯುವರಾಜ್ ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೇ ಹಾಗೆಯೇ ನಿರ್ಗಮಿಸಿದರು. ಇದೇ ವೇಳೆ ಪ್ರಶ್ನೆ ಕೇಳಲು ಮುಂದಾದ ಕೆಲ ಮಾಧ್ಯಮ ಪ್ರತಿನಿಧಿಗಳನ್ನು ನೂಕಾಡಿದರು..

achore akhul balaji , actor santosh and yuvaraj attend the CCB enquiry
ನಿರೂಪಕ ಅಕುಲ್​ ಬಾಲಾಜಿ ಹಾಗೂ ನಟ ಸಂತೋಷ
author img

By

Published : Sep 19, 2020, 7:01 PM IST

ಬೆಂಗಳೂರು : ಮಾದಕ ವಸ್ತುಗಳು ಹಾಗೂ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಿರೂಪಕ ಅಕುಲ್ ಬಾಲಾಜಿ, ನಟ ಸಂತೋಷ್ ಹಾಗೂ ಮಾಜಿ ಶಾಸಕರ ಪುತ್ರ ಆರ್ ವಿ ಯುವರಾಜ್ ಅವರನ್ನು ಸತತ ಏಳು ಗಂಟೆಗಳ ಕಾಲ ಸಿಸಿಬಿ ವಿಚಾರಣೆ ನಡೆಸಿದೆ. ಜತೆಗೆ ಇವರೆಲ್ಲರ ಮೊಬೈಲ್​ಗಳನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಸಿಸಿಬಿ ತನಿಖಾಧಿಕಾರಿಗಳ ವಿಚಾರಣೆ ನಂತರ ಮಾತನಾಡಿದ ನಿರೂಪಕ ಅಕುಲ್ ಬಾಲಾಜಿ, ಸಿಸಿಬಿ ನೋಟಿಸ್​ ನೀಡಿದ ಹಿನ್ನೆಲೆ ವಿಚಾರಣೆಗೆ ಹಾಜರಾಗಿದ್ದೆನು. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದ ತನಿಖಾಧಿಕಾರಿಗಳ ಎಲ್ಲಾ ಪ್ರಶ್ನೆಗಳಿಗೆ ಸಮಂಜಸವಾಗಿ ಉತ್ತರ ನೀಡಿದ್ದೇನೆ ಎಂದರು. ಸಿಸಿಬಿ ತನಿಖೆಗೆ ಸಹಕರಿಸಿದ್ದೇನೆ. ಸದ್ಯ ನನ್ನ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದು, ಹೆಚ್ಚಿನ ವಿಚಾರಣೆಗೆ ಮತ್ತೆ ಕರೆದ್ರೆ ಬರುತ್ತೇನೆ ಎಂದು ಹೇಳಿ ನಿರ್ಗಮಿಸಿದ್ದಾರೆ.

ಸಿಸಿಬಿ ವಿಚಾರಣೆಗೆ ಸಂಪೂರ್ಣವಾಗಿ ಸಹಕರಿಸಿದ್ದೇನೆ. ತನಿಖಾ ಹಂತದಲ್ಲಿ ಏನು‌ ಹೇಳಲು ಸಾಧ್ಯವಿಲ್ಲ. ಯಾರ ಹೆಸರು ಹೇಳುವುದು ಸೂಕ್ತವಲ್ಲ. ನನ್ನ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ನಟ ಸಂತೋಷ್ ಹೇಳಿದರು. ಮಾಜಿ ಶಾಸಕರ ಪುತ್ರ ಆರ್ ವಿ ಯುವರಾಜ್ ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೇ ಹಾಗೆಯೇ ನಿರ್ಗಮಿಸಿದರು. ಇದೇ ವೇಳೆ ಪ್ರಶ್ನೆ ಕೇಳಲು ಮುಂದಾದ ಕೆಲ ಮಾಧ್ಯಮ ಪ್ರತಿನಿಧಿಗಳನ್ನು ನೂಕಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.