ETV Bharat / state

ಕೋರ್ಟ್ ಅನುಮತಿ ಪಡೆದು ಇಂದು ಕೊಚ್ಚಿಗೆ ಸ್ವಪ್ನಾ ಸುರೇಶ್​​ ಕರೆದೊಯ್ಯಲಿದೆ ಎನ್​ಐಎ

ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಹಾಗೂ ಸಂದೀಪ್‌ ನಾಯರ್ ಅವರನ್ನು ಎನ್​ಐಎ ಅಧಿಕಾರಿಗಳು ಇಂದು ಕೊಚ್ಚಿಗೆ ಕರೆದೊಯ್ಯಲಿದ್ದಾರೆ.

Accused  Swapna Suresh will be taken to Kochi with court permission
ಕೋರ್ಟ್ ಅನುಮತಿ ಪಡೆದು ಕೊಚ್ಚಿಗೆ ಸ್ವಪ್ನಾ ಸುರೇಶ್​​ ಕರೆದೊಯ್ಯಲಿದೆ ಎನ್​ಐಎ
author img

By

Published : Jul 12, 2020, 7:52 AM IST

Updated : Jul 12, 2020, 8:23 AM IST

ಬೆಂಗಳೂರು: ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಹಾಗೂ ಸಂದೀಪ್‌ ನಾಯರ್ ಅವರನ್ನು ಎನ್​ಐಎ ಅಧಿಕಾರಿಗಳು ಇಂದು ಕೊಚ್ಚಿಯಲ್ಲಿರುವ ಎನ್‌ಐಎ ಕಚೇರಿಗೆ ಹಾಜರುಪಡಿಸಲಿದ್ದಾರೆ.

ಬೆಂಗಳೂರಿನ ಎನ್​ಐಎ ಕೋರ್ಟ್​ನಿಂದ ವಾರೆಂಟ್ ಪಡೆದು, ಇಂದು ಕೊಚ್ಚಿಯಲ್ಲಿರುವ ಎನ್‌ಐಎ ಕಚೇರಿಗೆ ಸ್ವಪ್ನಾ ಹಾಗೂ ಸಂದೀಪ್‌ ಅವರನ್ನು ಹಾಜರುಪಡಿಸುವ ಸಾಧ್ಯತೆಯಿದೆ. ಆರೋಪಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು ತಡರಾತ್ರಿ ಬೆಂಗಳೂರಿನ ಬಿಟಿಎಂ ಲೇಔಟ್​​ನ ಖಾಸಗಿ ಹೋಟೆಲ್​ನಲ್ಲಿ ವಶಕ್ಕೆ ಪಡೆದಿದೆ. ಸದ್ಯ ಆರೋಪಿಗಳು ಎನ್​ಐಎ ವಶದಲ್ಲಿದ್ದಾರೆ.

ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಸುಮಾರು 15 ಕೋಟಿ ರೂಪಾಯಿ ಮೌಲ್ಯದ 30 ಕೆ.ಜಿ. ಚಿನ್ನವನ್ನು ಕಸ್ಟಮ್ಸ್‌ ಅಧಿಕಾರಿಗಳು ಜುಲೈ 5ರಂದು ವಶಪಡಿಸಿಕೊಂಡಿದ್ದರು. ಆ ಬಳಿಕ ಸ್ವಪ್ನಾ ಸುರೇಶ್ ತಲೆಮರೆಸಿಕೊಂಡಿದ್ದರು. ಆದ್ರೂ ಅಜ್ಞಾತ ಸ್ಥಳದಿಂದ ಮಾಧ್ಯಮಗಳಿಗೆ ಧ್ವನಿ ಸಂದೇಶ ಕಳುಹಿಸುತ್ತಲೇ ಇದ್ದರು. ನಾನು ನಿರಪರಾಧಿ, ನನ್ನನ್ನು ಸುಖಾಸುಮ್ಮನೆ ಈ ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ ಎಂದು ಆರೋಪಿಸುತ್ತಿದ್ದರು. ರಾಜಕೀಯ ನಾಯಕರ ಜೊತೆ ಒಳ್ಳೆಯ ಸಂಬಂಧವಿದೆ. ಆದ್ರೆ ಅದನ್ನು ದುರಪಯೋಗ ಪಡಿಸಿಕೊಂಡಿಲ್ಲ ಎಂದು ಹೇಳಿದ್ದರು.

Last Updated : Jul 12, 2020, 8:23 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.