ETV Bharat / state

ಪಿಜಿಗೆ ಹೊಸದಾಗಿ ಸೇರಿರುವ ನೆಪ: ಕೀ ಪಡೆದು ಲಕ್ಷಾಂತರ ಮೌಲ್ಯದ ಲ್ಯಾಪ್‌ಟಾಪ್ ಎಗರಿಸಿದ ಚಾಲಾಕಿ

author img

By

Published : Oct 5, 2021, 3:47 PM IST

ನಗರದ ಬಿ.ಟಿ.ಎಂ ಲೇಔಟ್ 1 ನೆಯ ಹಂತದಲ್ಲಿರುವ ಭವಿಷ್ಯ ಪಿಜಿಗೆ ಬಂದಿರುವ ಕಳ್ಳ, ತಾನು ಹೊಸದಾಗಿ ಇದೇ ಪಿಜಿಗೆ ಸೇರಿದ್ದೇನೆ. ಮಾಲೀಕರು ಈ ರೂಂನಲ್ಲಿ ಇರಲು ಹೇಳಿದ್ದಾರೆ. ಕೀ ಕೊಟ್ಟರೆ ಲಗೇಜ್ ತರುತ್ತೇನೆ ಎಂದು ಹೇಳಿ ಅಲ್ಲಿ ವಾಸವಿದ್ದ ವ್ಯಕ್ತಿಯಿಂದ ರೂಂನ ಕೀ ಪಡೆದು ನಂತರ ತನ್ನ ಕೈ ಚಳಕ ತೋರಿಸಿದ್ದಾನೆ.

laptop
ಲ್ಯಾಪ್‌ಟಾಪ್

ಬೆಂಗಳೂರು: ಪಿಜಿಗೆ ಹೊಸದಾಗಿ ಬಂದಿರುವುದಾಗಿ ಹೇಳಿ ರೂಂನ ಕೀ ಪಡೆದ ಚಾಲಾಕಿವೋರ್ವ 1.9 ಲಕ್ಷ ರೂ. ಮೌಲ್ಯದ 2 ಲ್ಯಾಪ್‌ಟಾಪ್ ಕಳವು ಮಾಡಿ ಪರಾರಿಯಾಗಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ಬಿ.ಟಿ.ಎಂ ಲೇಔಟ್ 1 ನೆಯ ಹಂತದಲ್ಲಿರುವ ಭವಿಷ್ಯ ಪಿಜಿಯಲ್ಲಿ ಸ್ನೇಹಿತ ರಾಜ್‌ಶಾ ಜೊತೆಗೆ ಮಕರಂದ್ ಎಂಬುವರು ವಾಸಿಸುತ್ತಿದ್ದರು. ಸೆಪ್ಟೆಂಬರ್ 29ರ ಮಧ್ಯಾಹ್ನ 1 ಗಂಟೆಯಲ್ಲಿ ರೂಂಗೆ ಬಂದ ಅಪರಿಚಿತ ವ್ಯಕ್ತಿ ತಾನು ಹೊಸದಾಗಿ ಇದೇ ಪಿಜಿಗೆ ಸೇರಿದ್ದೇನೆ. ಮಾಲೀಕರು ಈ ರೂಂನಲ್ಲಿ ಇರಲು ಹೇಳಿದ್ದಾರೆ. ಕೀ ಕೊಟ್ಟರೆ ಲಗೇಜ್ ತರುತ್ತೇನೆ ಎಂದು ಹೇಳಿ ಮಕರಂದ್ ಬಳಿ ರೂಂನ ಕೀ ಪಡೆದಿದ್ದ.

ಮಕರಂದ್ ಹಾಗೂ ರಾಜ್‌ಶಾ ಹೊರಹೋಗಿ ಸ್ವಲ್ಪ ಹೊತ್ತಿನ ಬಳಿಕ ಹಿಂದಿರುಗಿದಾಗ ರೂಂನಲ್ಲಿದ್ದ ಲ್ಯಾಪ್‌ಟಾಪ್​ಗಳು ಇರಲಿಲ್ಲ. ಜತೆಗೆ ಅಪರಿಚಿತ ವ್ಯಕ್ತಿಯೂ ಇರಲಿಲ್ಲ. ಈ ಬಗ್ಗೆ ಪಿಜಿ ಮಾಲೀಕರನ್ನು ವಿಚಾರಿಸಿದಾಗ ಯಾರೂ ಹೊಸದಾಗಿ ಪಿಜಿಗೆ ಸೇರಿಲ್ಲ ಎಂದಿದ್ದಾರೆ. ಆಗ ಕಳ್ಳನ ಕರಾಮತ್ತು ಬೆಳಕಿಗೆ ಬಂದಿದೆ. ಬೆಳಗಾವಿ ಮೂಲದ ಮಕರಂದ್ ಎಂಬುವರು ಈ ಬಗ್ಗೆ ದೂರು ನೀಡಿದ್ದಾರೆ. ಆರೋಪಿಯ ಪತ್ತೆಗೆ ಬಲೆ ಬೀಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಓದಿ: ಮಗಳ ತಂಟೆಗೆ ಬರಬೇಡ ಎಂದಿದ್ದಕ್ಕೆ ತಂದೆಯ ಕೊಲೆಗೆ ಸ್ಕೆಚ್‌; ರೌಡಿ ಸೇರಿ 10 ಮಂದಿ ಅರೆಸ್ಟ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.