ETV Bharat / state

ಬಗಲಗುಂಟೆ ವ್ಯಾಪ್ತಿಯಲ್ಲಿ ತಾಯಿ - ಮಗನ ಹತ್ಯೆ ಪ್ರಕರಣ: ಪ್ರಿಯಕರನ ಬಂಧನ

ಬಗಲಗುಂಟೆ ಠಾಣಾ ವ್ಯಾಪ್ತಿಯ ರವೀಂದ್ರನಾಥ ಗುಡ್ಡೆಯಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿ
ಆರೋಪಿ
author img

By ETV Bharat Karnataka Team

Published : Sep 8, 2023, 2:47 PM IST

ಶಿವಪ್ರಕಾಶ್ ದೇವರಾಜು, ಡಿಸಿಪಿ ಉತ್ತರ ವಿಭಾಗ ಬೆಂಗಳೂರು

ಬೆಂಗಳೂರು : ಬಗಲಗುಂಟೆ ಠಾಣಾ ವ್ಯಾಪ್ತಿಯ ರವೀಂದ್ರನಾಥ ಗುಡ್ಡೆಯಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದ ಆರೋಪಿ ಶೇಖರ್ ಎಂಬಾತನನ್ನು ಬಂಧಿಸಲಾಗಿದೆ. ನವನೀತಾ (35) ಹಾಗೂ ಸಾಯಿ ಸೃಜನ್ (8) ನನ್ನು ಹತ್ಯೆ ಮಾಡಿದ್ದ ಆಕೆಯ ಪ್ರಿಯಕರ ಶೇಖರ್​ನನ್ನು ಬಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾದ ನವನೀತಾ ತನ್ನ ಪತಿಯನ್ನು ತೊರೆದು ಮಗನೊಂದಿಗೆ 2 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಈ ವೇಳೆ, ನವನೀತಾಳಿಗೆ ಆರೋಪಿ ಶೇಖರ್ ಪರಿಚಯವಾಗಿತ್ತು. ಬಳಿಕ ಇಬ್ಬರೂ ಪರಸ್ಪರ ಪ್ರೀತಿಸಲಾರಂಭಿಸಿದ್ದರು. ಆದರೆ, ಇತ್ತೀಚಿಗೆ ನವನೀತ ಶೇಖರ್​ನನ್ನು ಬಿಟ್ಟು ಲೋಕೇಶ್ ಎಂಬಾತನೊಂದಿಗೆ ಸಂಪರ್ಕ ಹೊಂದಿದ್ದಳು. ಇದರಿಂದ ಸಿಟ್ಟಿಗೆದ್ದಿದ್ದ ಶೇಖರ್, ಲೋಕೇಶ್​ನ ಸಹವಾಸ ನಿಲ್ಲಿಸುವಂತೆ ನವನೀತಾಳಿಗೆ ಎಚ್ಚರಿಕೆ ಸಹ ನೀಡಿದ್ದ. ಆದರೂ ನವನೀತ ಲೋಕೇಶ್ ಜೊತೆ ಸಂಪರ್ಕದಲ್ಲಿದ್ದಳು.

ಸೋಮವಾರ (4/09/2023) ಎಂದಿನಂತೆ ನವನೀತಾಳ ಮನೆಗೆ ಬಂದಿದ್ದ ಶೇಖರ್ ನವನೀತಾಳ ಮಗನನ್ನು ಮನೆಯಿಂದ ಆಚೆ ಕಳುಹಿಸಿ ಆಕೆಯೊಂದಿಗೆ ಗಲಾಟೆ ಆರಂಭಿಸಿದ್ದ. ಈ ವೇಳೆ ಚಾಕುವಿನಿಂದ ಅವರ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದ. ಬಳಿಕ ಮನೆಗೆ ಬಂದ ನವನೀತಾರ ಮಗನಿಗೆ ಮ್ಯಾಜಿಕ್ ಹೇಳಿಕೊಡುತ್ತೇನೆ ಎಂದು ನಂಬಿಸಿ ಆತನ ಎರಡೂ ಕೈಕಾಲುಗಳನ್ನು ಕಟ್ಟಿದ್ದ. ನಂತರ ತಲೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ, ಮೃತ ದೇಹಗಳನ್ನು ರೂಮಿನಲ್ಲಿ ಮಂಚದ ಮೇಲೆ ಎಸೆದು ಪರಾರಿಯಾಗಿದ್ದ.

ಹತ್ಯೆಯ ಬಳಿಕ ಅಕ್ಕಪಕ್ಕದ ಏರಿಯಾ ಜನರ ಬಳಿ ನವನೀತಾ ನನಗೆ ಮೋಸ ಮಾಡಿದ್ದಾಳೆ, ಆದ್ದರಿಂದ ಆಕೆಯನ್ನು ಕೊಲೆ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದ. ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಬಗಲಗುಂಟೆ ಠಾಣಾ ಪೊಲೀಸರು ಸದ್ಯ ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಮೃತ ಮಹಿಳೆಯ ಪತಿ ಮೇಲೆ ಇದ್ದ ಶಂಕೆ: ಘಟನೆ ಬೆಳಕಿಗೆ ಬಂದ ನಂತರ ಪೊಲೀಸರಿಗೆ ನವನೀತಾಳ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರ ಆಧಾರದ ಮೇಲೆ ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ಕೈಗೊಂಡಿದ್ದರು. ಶಯನಗೃಹದಲ್ಲಿ ಸಿಕ್ಕ ಮೃತದೇಹಗಳನ್ನು ವಶಕ್ಕೆ ಪಡೆದಿದ್ದರು. ಮೃತಳ ತಾಯಿ ನೀಡಿರುವ ದೂರಿನ ಅನ್ವಯ ಹತ್ಯೆ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದರು. ಪ್ರಾಥಮಿಕ ತನಿಖೆಯಲ್ಲಿ ಬೇರಡೆ ಇದ್ದ ಪತಿ ಚಂದ್ರುವೇ ಮನೆಗೆ ಬಂದು ಹತ್ಯೆ ಮಾಡಿದ್ದಾನೆ ಎಂದು ಶಂಕಿಸಲಾಗಿತ್ತು.

ಇದನ್ನೂ ಓದಿ: Double Murder : ಬೆಂಗಳೂರಿನಲ್ಲಿ ಜೋಡಿ ಕೊಲೆ.. ಹೆಂಡತಿ, ಮಗನ ಕೊಂದು ಪರಾರಿಯಾದ ಪತಿ ಶಂಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.