ETV Bharat / state

ಕೊರೊನಾ ಸಂದರ್ಭದಲ್ಲಿ ನಿರ್ಬಂಧದ ನಡುವೆ ಸಭೆ ನಡೆಸಿದ್ದ ಆರೋಪ: ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್ - campus front of india

ಕೋವಿಡ್​ ಮೂರನೇ ಅಲೆ ಸಂದರ್ಭದಲ್ಲಿ ನಿರ್ಬಂಧದ ಮಧ್ಯೆ ಸಭೆ ನಡೆಸಿದ್ದ ಆರೋಪದಲ್ಲಿ ದಾಖಲಾಗಿದ್ದ ಪ್ರರಣವನ್ನು ಧಾರವಾಡ ಹೈಕೋರ್ಟ್ ಪೀಠ ರದ್ದುಗೊಳಿಸಿ ಆದೇಶಿಸಿದೆ.

accused-of-holding-a-meeting-amid-restrictions-during-corona-high-court-quashed-the-case
ಕೊರೋನಾ ಸಂದರ್ಭದಲ್ಲಿ ನಿರ್ಬಂಧದ ನಡುವೆ ಸಭೆ ನಡೆಸಿದ್ದ ಆರೋಪ: ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್
author img

By

Published : Apr 4, 2023, 8:03 PM IST

Updated : Apr 5, 2023, 5:28 PM IST

ಬೆಂಗಳೂರು/ಧಾರವಾಡ: ನಿಷೇಧಿತ ಕ್ಯಾಂಪಸ್​ ಫ್ರಂಟ್​ ಆಫ್​ ಇಂಡಿಯಾ (ಸಿಎಫ್​ಐ) ಸಂಘಟನೆಯ ಸದಸ್ಯರ ವಿರುದ್ಧ ಕಳೆದ ವರ್ಷ ಕೊರೊನಾ ನಿಯಮಗಳ ಉಲ್ಲಂಘನೆ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ಖಾದರ್ ಭಾಷಾ ಸೇರಿದಂತೆ ಇತರೆ ಎಂಟು ಮಂದಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಎಂ ಖಾಜಿ ಅವರಿದ್ದ ಧಾರವಾಡದ ಹೈಕೋರ್ಟ್​ ನ್ಯಾಯಪೀಠ ಪ್ರಕರಣ ರದ್ದು ಮಾಡಿದೆ.

ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಈ ಪ್ರಕರಣದಲ್ಲಿ ಆರೋಪಿತರು ಸಭೆ ನಡೆಸಿದ ಸಂದರ್ಭದಲ್ಲಿ ಕೋವಿಡ್ ಮೂರನೇ ಅಲೆ ನಡೆಯುತ್ತಿತ್ತು. ಆಗ ಕೊರೊನಾ ಸೋಂಕು ಹರಡುವ ಸಾಧ್ಯತೆಯಿತ್ತು ಎಂದು ಆರೋಪಿಸಲಾಗಿದೆ. ಆದರೆ, ತನಿಖಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದವರು ಮತ್ತು ಪ್ರೇಕ್ಷಕರಾಗಿದ್ದವರಲ್ಲಿ ಯಾರಿಗಾದರು ಕೊರೊನಾ ಸೋಂಕು ಇತ್ತೇ ಎಂಬುದರ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿರಲಿಲ್ಲ. ಇದು ಐಪಿಸಿ 270 (ಮಾರಣಾಂತಿಕ ಕಾಯಿಲೆಯ ಸೋಂಕು ಹರಡುವುದು) ಅನ್ವಯ ಶಿಕ್ಷಾರ್ಹ ಅಪರಾಧವಾಗುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಅಷ್ಟೇ ಅಲ್ಲದೆ, ಸಾಂಕ್ರಾಮಿಕ ರೋಗಗಳ (ತಿದ್ದುಪಡಿ) ಸುಗ್ರೀವಾಜ್ಞೆ 2020 ವಿಶೇಷ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಅವಕಾಶವನ್ನು ಕಲ್ಪಿಸುತ್ತದೆ. ಯಾವುದೇ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಮಾಡಬಾರದು ಎಂಬುದಾಗಿದೆ. ಹೀಗಾಗಿ ಇದು ಶಿಕ್ಷಾರ್ಹ ಅಪರಾಧವನ್ನು ರೂಪಿಸುವುದಕ್ಕೆ ಅವಕಾಶವಿಲ್ಲ. ಹೀಗಾಗಿ ಆರ್ಜಿದಾರರು ಯಾವುದೇ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಪಡಿಸಿಲ್ಲ. ಹೀಗಾಗಿ ಅರ್ಜಿದಾರರ ವಿರುದ್ಧ ಯಾವುದೇ ಆರೋಪ ಸಾಬೀತಾಗುವಂತಹ ಸಾಕ್ಷ್ಯಾಧಾರಗಳು ಇಲ್ಲ. ಆದ್ದರಿಂದ ಪ್ರಕರಣವನ್ನು ರದ್ದು ಪಡಿಸುತ್ತಿರುವುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಇದನ್ನೂ ಓದಿ: ದೇಶದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳದ ಸ್ಥಿತಿಗತಿ ಗಮನಿಸಿ ರಾಜ್ಯದಲ್ಲೂ ತಪಾಸಣೆ ಹೆಚ್ಚಳ: ಸಚಿವ ಸುಧಾಕರ್

ಪ್ರಕರಣದ ಹಿನ್ನೆಲೆ ಏನು? : ಕೊರೊನಾ ಮೂರನೇ ಅಲೆಯ ಸಂದರ್ಭದಲ್ಲಿ ಸರ್ಕಾರ ನಿರ್ಬಂಧ ವಿಧಿಸಿದ್ದರೂ ನಿಯಮಗಳನ್ನು ಉಲ್ಲಂಘಿಸಿ ಕ್ಯಾಂಪಸ್​ ಫ್ರಂಟ್​ ಆಫ್​ ಇಂಡಿಯಾದ ಸದಸ್ಯರಾಗಿರುವ ಅರ್ಜಿದಾರರೂ ಸೇರಿದಂತೆ ಪ್ರಕರಣದ ಇತರೆ ಆರೋಪಿಗಳು ಬಾಗಲಕೋಟೆಯ ಡಾ. ಬಿ.ಆರ್​ ಅಂಬೇಡ್ಕರ್​ ಭವನದಲ್ಲಿ ಸಾರ್ವಜನಿಕ ಸಭೆ ಹಮ್ಮಿಕೊಂಡಿದ್ದರು. ಈ ಸಭೆಯಲ್ಲಿ ರಾಜ್ಯದ ವಿವಿಧ ಭಾಗಗಳ ಕಾಲೇಜುಗಳ ಸುಮಾರು 130ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆ ನಡೆಸಿದ ಆರೋಪದಲ್ಲಿ ಖಾದರ್​ ಭಾಷಾ ಸೇರಿದಂತೆ ಮತ್ತಿತರರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್​ಗಳು ಮತ್ತು ಸಾಂಕ್ರಾಮಿಕ ರೋಗಗಳ (ತಿದ್ದುಪಡಿ) ಸುಗ್ರೀವಾಜ್ಞೆ 2020 ಸೆಕ್ಷನ್​ 4 ಮತ್ತು 5ರ ಅಡಿ ಜಮಖಂಡಿ ವೃತ್ತ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ನಮ್ಮ ಕಕ್ಷಿದಾರರ ವಿರುದ್ಧ ತಪ್ಪಾಗಿ ಪ್ರಕರಣ ದಾಖಲಿಸಿದ್ದಾರೆ. ಸಭೆ ನಡೆಸಿರುವವರಲ್ಲಿ ಯಾರೊಬ್ಬರೂ ಕೊರೋನಾದಿಂದ ಬಳಲುತ್ತಿದ್ದರೂ ಎಂಬುದರ ಸಂಬಂಧ ಸೂಕ್ತ ಸಾಕ್ಷ್ಯಾಧಾರಗಳನ್ನು ತನಿಖಾಧಿಕಾರಿಗಳು ಒದಗಿಸಿಲ್ಲ ಎಂದು ವಾದ ಮಂಡಿಸಿದ್ದರು.

ಇದನ್ನೂ ಓದಿ: ಹವಾಮಾನ ಬದಲಾವಣೆಯಿಂದ ಕೋವಿಡ್​ ಸೋಂಕು ಹೆಚ್ಚಳ: ನಿರ್ಲಕ್ಷ್ಯ ಬೇಡ, ಮುನ್ನೆಚ್ಚರಿಕೆ ಇರಲಿ

Last Updated : Apr 5, 2023, 5:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.