ETV Bharat / state

ಬೆಂಗಳೂರು: ಹಣಕ್ಕಾಗಿ ಮಹಿಳೆಯ ಬರ್ಬರ ಹತ್ಯೆ, ಆರೋಪಿ ಬಂಧನ - ಆಗ್ನೇಯ ವಿಭಾಗದ ಡಿಸಿಪಿ ಸಿ ಕೆ ಬಾಬಾ

ಜೀವನಕ್ಕಾಗಿ ವೇಶ್ಯೆವೃತ್ತಿಯಲ್ಲಿ ತೊಡಗಿದ್ದ ಹಸೀನಾ ಎಂಬಾಕೆಯನ್ನು ಬರ್ಬರವಾಗಿ ಹತ್ಯೆಗೈದ ಆರೋಪಿಯನ್ನು ಬೊಮ್ಮನಹಳ್ಳಿ‌ ಠಾಣಾ ಪೊಲೀಸರು ಬಂಧಿಸಿದ್ದಾರೆ.

ವಾಸೀಂ
ವಾಸೀಂ
author img

By

Published : Aug 18, 2022, 9:45 PM IST

Updated : Aug 18, 2022, 10:59 PM IST

ಬೆಂಗಳೂರು: ಬ್ಲಾಕ್ ಮೇಲ್​ಗೆ ಬೆದರದ ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದ ಆರೋಪಿಯನ್ನು ಬೊಮ್ಮನಹಳ್ಳಿ‌ ಠಾಣಾ ಪೊಲೀಸರು ಬಂಧಿಸಿದ್ದಾರೆ. ವಾಸೀಂ ಬಂಧಿತ ಆರೋಪಿ. ಜೀವನೋಪಾಯಕ್ಕಾಗಿ ವೇಶ್ಯೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಹಸೀನಾ (38) ಎಂಬಾಕೆಯನ್ನು ಆಗಸ್ಟ್ 11ರಂದು ಮಡಿವಾಳ ಕೆರೆ ಬಳಿ ಆರೋಪಿ ಕೊಲೆಗೈದಿದ್ದ.

ಆಗ್ನೇಯ ವಿಭಾಗದ ಡಿಸಿಪಿ ಸಿ. ಕೆ ಬಾಬಾ ಅವರು ಮಾತನಾಡಿರುವುದು

ಹಸೀನಾ ಕೊಲೆಗೂ ಮೂರು ದಿನಗಳ ಮುನ್ನ ವಾಸೀಂ ಎಂಬಾತನನ್ನು ಪರಿಚಯ ಮಾಡಿಕೊಂಡಿದ್ದಳು. ಆಟೋ ಡ್ರೈವರ್ ಆಗಿದ್ದ ಆರೋಪಿ ಹಸಿನಾಳನ್ನು ಬೆದರಿಸಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ. ಆದರೆ, ಆಕೆ ಆರೋಪಿಯ ಬೆದರಿಕೆಗೆ ತಲೆಕೆಡಿಸಿಕೊಂಡಿರಲಿಲ್ಲ. ಆಗಸ್ಟ್ 11ರಂದು ಮಾತನಾಡುವುದಾಗಿ ಹಸೀನಾಳನ್ನು ಜಯನಗರದಿಂದ ಪಿಕ್ ಮಾಡಿಕೊಂಡು ಬೊಮ್ಮನಹಳ್ಳಿ ಕೆರೆ ಬಳಿ ಬಂದಿದ್ದಾನೆ.

ಹಣದೊಂದಿಗೆ ಪರಾರಿ: ಕೆರೆ ಬಳಿ ಸ್ವಲ್ಪ ಸಮಯ ಏಕಾಂತದಲ್ಲಿ‌ ಕಾಲ ಕಳೆದು ನಂತರ ಹಸೀನಾಳ‌ ಬಳಿ ಹಣಕ್ಕೆ ವಾಸೀಂ ಡಿಮ್ಯಾಂಡ್ ಮಾಡಿದ್ದ. ಇದಕ್ಕೆ ಒಪ್ಪದಿದ್ದಾಗ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದು ವ್ಯಾನಿಟಿ ಬ್ಯಾಗ್​ನಲ್ಲಿದ್ದ ಮೂರುವರೆ ಸಾವಿರ ರೂ ಹಣದೊಂದಿಗೆ ಪರಾರಿಯಾಗಿದ್ದ.

80ಕ್ಕೂ ಅಧಿಕ ಸಿಸಿಟಿವಿಗಳ ಪರಿಶೀಲನೆ: ಅಪರಿಚಿತವಾಗಿ ದೊರೆತ ಶವದ ಮೂಲ ಹುಡುಕಿ ಹೊರಟ ಬೊಮ್ಮನಹಳ್ಳಿ ಠಾಣಾ ಪೊಲೀಸರು ಮೊದಲು ಮೃತದೇಹದ ಫೋಟೋ ಆಧರಿಸಿ ಆಕೆಯ ಸಂಬಂಧಿಕರನ್ನು ಪತ್ತೆ ಹಚ್ಚಿದ್ರು. ಕೊಲೆಯಾದವಳ ವಿವರ ಲಭ್ಯವಾಗ್ತಿದ್ದಂತೆ ಸಮೀಪದ 80ಕ್ಕೂ ಅಧಿಕ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಆರೋಪಿ ಹಸೀನಾಳನ್ನು ಕರೆದೊಯ್ದಿರೋದು ಪತ್ತೆಯಾಗಿತ್ತು. ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ‌ಪೊಲೀಸರು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ ಕೆ ಬಾಬಾ ತಿಳಿಸಿದ್ದಾರೆ.

ಇದನ್ನೂ ಓದಿ: ಎಂ ಎಸ್ ಬಿಲ್ಡಿಂಗ್ ನೀರಿನ ಸಂಪ್​ನಲ್ಲಿ ಪುರುಷನ ಮೃತದೇಹ ಪತ್ತೆ

Last Updated : Aug 18, 2022, 10:59 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.