ETV Bharat / state

ಜಿಎಸ್​ಟಿ ಹೆಸರಿನಲ್ಲಿ ಖಾಸಗಿ ಕಂಪನಿಗೆ 9.6 ಕೋಟಿ ವಂಚನೆ: ಪೊಲೀಸರಿಂದ ಇಬ್ಬರ ಬಂಧನ - ಈಟಿವಿ ಭಾರತ್ ಕನ್ನಡ ಸುದ್ದಿ

ಖಾಸಗಿ ಕಂಪನಿಗೆ ಜಿಎಸ್​ಟಿ ಹೆಸರಲ್ಲಿ ವಂಚನೆ - ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ - ಇಬ್ಬರು ಆರೋಪಿಗಳ ಬಂಧನ

ನಿಖಿಲ್ ಹಾಗೂ ವಿನಯ್
ನಿಖಿಲ್ ಹಾಗೂ ವಿನಯ್
author img

By

Published : Jan 26, 2023, 10:28 PM IST

ಬೆಂಗಳೂರು: ಅದು ಕೊರಿಯಾ ಮೂಲದ ವ್ಯಕ್ತಿಗೆ ಸೇರಿದ್ದ ಆಟೋಮೋಟಿವ್ ಪ್ರೈವೇಟ್ ಲಿಮಿಟೆಡ್ ಕಂಪನಿ. ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದ್ದ ಕಂಪನಿಗೆ ಅಸೋಸಿಯೇಟ್ ಚಾರ್ಟರ್ಡ್ ಅಕೌಂಟೆಡ್ ಆಗಿದ್ದ ವ್ಯಕ್ತಿ ಮಾಡಿದ್ದು ಅಂತಿಂಥಾ ದೋಖಾ ಅಲ್ಲ. ಜಿಎಸ್​ಟಿ ತೆರಿಗೆ ಹೆಸರಲ್ಲಿ ಆತ ವಂಚಿಸಿದ್ದು ಬರೋಬ್ಬರಿ 9 ಕೋಟಿ ರೂಪಾಯಿ. ಇದೀಗ ತಾವು ಮೋಸ ಹೋಗಿರುವುದು ಮಾಲೀಕರಿಗೆ ಗೊತ್ತಾಗಿ ಪ್ರಕರಣ ದಾಖಲಾಗಿದೆ.

ಜಿಎಸ್​ಟಿ ತೆರಿಗೆ ಕಟ್ಟಬೇಕೆಂದು ಹೇಳಿ ಖಾಸಗಿ ಕಂಪನಿಗೆ 9 ಕೋಟಿ 60 ಲಕ್ಷ ರೂ. ವಂಚಿಸಿರುವಂತಹ ಘಟನೆ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಇದೀಗ ಘಟನೆ ಸಂಬಂಧ ಸಂಜಯನಗರ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ನಿಖಿಲ್ ಹಾಗೂ ವಿನಯ್ ಬಾಬು ಬಂಧಿತ ಆರೋಪಿಗಳು‌ ಎಂಬುದು ತಿಳಿದು ಬಂದಿದೆ.

ಸಂಜಯನಗರ ಪೊಲೀಸರ ಅತಿಥಿಗಳಾಗಿರೋ ಇಬ್ಬರು ಮಾಡಿರುವ ದೋಖಾ ಅಂತಿದ್ದಲ್ಲಾ. ಕೊರಿಯಾ ಮೂಲದ ಟರ್ಮಿನಸ್ ಡೆಚಾಂಗ್ ಸೀಟ್ ಎಂಬ ಆಟೋಮೋಟಿವ್ ಖಾಸಗಿ ಕಂಪನಿಗೆ ಅಸೋಸಿಯೇಟ್ ಚಾರ್ಟರ್ಡ್ ಅಕೌಂಟೆಂಟ್ ಆಗಿ ಇಬ್ಬರು ಸೇರಿಕೊಂಡಿದ್ದರು. ಹೀಗೆ, ಸೇರಿಕೊಂಡವರು ಜಿಎಸ್​ಟಿ ತೆರಿಗೆ ಕಟ್ಟಬೇಕೆಂದು ಕಂಪನಿ ಮಾಲೀಕರ ಬಳಿ ಸುಮಾರು 9 ಕೋಟಿ 60 ಲಕ್ಷ ಹಣವನ್ನ ಹಂತ ಹಂತವಾಗಿ ಪಡೆದಿದ್ದಾರೆ.

ಇದನ್ನೂ ಓದಿ: ಬಿಎಸ್​​ವೈ ಬಗ್ಗೆ ಅಪಾರವಾದ ಗೌರವ ಇದೆ.. ಅವರ ಬಗ್ಗೆ ಮಾತಾಡಬೇಡ ಎಂದಿದ್ದಾರೆ, ನೀವೂ ಪ್ರಶ್ನೆ ಕೇಳಬೇಡಿ: ಯತ್ನಾಳ್​

ಮೋಸ ಹೋಗಿರುವುದು ತಿಳಿದುಬಂದ ಬಳಿಕ ಪ್ರಕರಣ ವರ್ಗಾವಣೆ: ಕಂಪನಿ ಆಂತರಿಕ ಲೆಕ್ಕಪರಿಶೋಧನೆ ವರದಿ ನೀಡಿದ್ದ ಆರೋಪಿ ನಿಖಿಲ್, 9 ಕೋಟಿಗೂ ಹೆಚ್ಚು ಜಿಎಸ್​ಟಿ ಕಟ್ಟಬೇಕೆಂದು ವರದಿ ನೀಡಿದ್ದ. ನಿಖಿಲ್ ವರದಿ ಅನ್ವಯ ಹಂತ ಹಂತವಾಗಿ ಮಾಲೀಕರು ಜಿಎಸ್​ಟಿ ಕಟ್ಟಿದ್ದರು. ಬಳಿಕ ತಾವು ಮೋಸ ಹೋಗಿರುವುದು ತಿಳಿದು ಬಂದಿತ್ತು. ಈ ಬಗ್ಗೆ ಸತ್ಯ ಗೊತ್ತಾಗುತ್ತಿದ್ದಂತೆ ಮಾಲೀಕ ಸದಾಶಿವನಗರ ಠಾಣೆಗೆ ದೂರು ನೀಡಿದ್ದರು. ನಂತರ ಆರೋಪಿಗಳು ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಹಿನ್ನೆಲೆ ವಂಚನೆಯ ಪ್ರಕರಣವನ್ನು ಸದಾಶಿವನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿದ್ದರು.

ಇದನ್ನೂ ಓದಿ: ಹಾಸನ: ಸ್ವಪಕ್ಷ ಕಾರ್ಯಕರ್ತನ ಮೇಲೆ ಬಿಜೆಪಿಯ ಗ್ರಾಮಾಂತರ ಉಪಾಧ್ಯಕ್ಷರಿಂದ ಹಲ್ಲೆ

ಆರೋಪಿಗಳಿಗೆ ಸಂಬಂಧಿಸಿದ 3 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಜಪ್ತಿ: ಇನ್ನು ಪ್ರಕರಣ ದಾಖಲಿಸಿಕೊಂಡಿದ್ದ ಸಂಜಯ್ ನಗರ ಪೊಲೀಸರು ನಿಖಿಲ್, ವಿನಯ್ ಬಾಬು ಅವರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಮತ್ತಿಬ್ಬರು ತಲೆ ಮರೆಸಿಕೊಂಡಿದ್ದರು. ಅವರಿಗೂ ಪೊಲೀಸರು ಬಲೆ ಬೀಸಿದ್ದಾರೆ. ಅಷ್ಟೇ ಅಲ್ಲದೆ ಆರೋಪಿಗಳಿಗೆ ಸಂಬಂಧಿಸಿದ 3 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ಆರೋಪಿಗಳು ಶೋಕಿಗೆ ಕೋಟ್ಯಂತರ ಹಣ ಖರ್ಚುಮಾಡಿದ್ದು, ಆರೋಪಿ ವಿನಯ್ ಬಾಬು ಅಪಾರ್ಟ್​ಮೆಂಟ್​ಗಳಲ್ಲಿ ಫ್ಲ್ಯಾಟ್ ಖರೀದಿಸಿರುವುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ಜಡ್ಜ್​ ಮನೆಯನ್ನೂ ಬಿಡದ ಖದೀಮರು ; 60ಕ್ಕೂ ಅಧಿಕ ಕಳ್ಳತನ ಪ್ರಕರಣದ ಇಬ್ಬರು ಆರೋಪಿಗಳು ಅರೆಸ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.