ಬೆಂಗಳೂರು: ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ಪ್ರಕರಣದ ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾಧಿಕಾರಿಯಾಗಿ ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿ ಅಬ್ದುಲ್ ಅಹದ್ ಅವರನ್ನು ನೇಮಕ ಮಾಡಿ ಇದೀಗ ಹೈಕೋರ್ಟ್ ಆದೇಶ ಹೊರಡಿಸಿದೆ.
ಟಿಡಿಆರ್ ಹಗರಣದಲ್ಲಿ ಬಿಬಿಎಂಪಿ, ಬಿಡಿಎ ರಾಜಕಾರಣಿಗಳು ಮತ್ತು ಖಾಸಗಿ ವ್ಯಕ್ತಿಗಳು ಭಾಗಿಯಾಗಿರುವ ಆರೋಪವಿದ್ದು, ಹೀಗಾಗಿ ತನಿಖೆ ನಡೆಸಲು ಅಧಿಕಾರಿ ನೇಮಿಸಬೇಕೆಂದು ನಾಕೋಡ ಕನ್‌ಸ್ಟ್ರಕ್ಷನ್ ಲಿಮಿಟೆಡ್ ಕಂಪೆನಿಯ ನಿರ್ದೇಶಕ ರತನ್ ಬಾಬೂಲಾಲ್ ಅರ್ಜಿ ಸಲ್ಲಿಸಿದ್ದರು. ನ್ಯಾ. ಎಸ್.ಎನ್.ಸತ್ಯನಾರಾಯಣ ಅವರು ತನಿಖೆ ನಡೆಸಲು ಅಬ್ದುಲ್ ಅಹದ್ ಅವರನ್ನು ನೇಮಕ ಮಾಡಿದ್ದಾರೆ.
ಬಿಬಿಎಂಪಿಯ ರಸ್ತೆ ವಿಸ್ತರಣೆಗೆ ಪರ್ಯಾಯವಾಗಿ ಟಿಡಿಆರ್ ಹಕ್ಕು ವಿತರಿಸುವ ವ್ಯವಸ್ಥೆಯಲ್ಲಿ ಗೋಲ್ಮಾಲ್ ಆರೋಪ ಕೇಳಿಬಂದಿದ್ದು, ಈ ಸಂಬಂಧ ಎಸಿಬಿ ದಾಳಿ ನಡೆಸಿ ಹಲವರನ್ನು ಬಂಧಿಸಲಾಗಿದೆ. ಇದೀಗ ಹೆಚ್ಚುವರಿ ತನಿಖೆಗಾಗಿ ನೂತನ ಅಧಿಕಾರಿ ಅಬ್ದುಲ್ ಅಹದ್ ಅವರನ್ನು ನೇಮಿಸಲಾಗಿದೆ.