ETV Bharat / state

ಮತ್ತೆ ಎಸಿಬಿ ಕಚೇರಿಗೆ ನುಗ್ಗಿದ ಮಹಾಮಾರಿ: ಡಿವೈಎಸ್ಪಿಗೂ ತಗುಲಿದ ಕೊರೊನಾ!

author img

By

Published : Jul 9, 2020, 12:25 PM IST

ರಾಜ್ಯದಲ್ಲಿ ಪೊಲೀಸರ ಬೆನ್ನು ಬಿಡದೇ ಕಾಡುತ್ತಿರುವ ಮಹಾಮಾರಿ ಕೊರೊನಾ ವೈರಸ್​​ ಇದೀಗ ಎರಡನೇ ಬಾರಿಗೆ ಎಸಿಬಿ ಕಚೇರಿಗೆ ಲಗ್ಗೆಯಿಟ್ಟಿದೆ.

ACB
ಎಸಿಬಿ ಕಚೇರಿ

ಬೆಂಗಳೂರು: ಎಸಿಬಿ ತಂಡದ ಡಿವೈಎಸ್ಪಿಯೊಬ್ಬರಿಗೆ ಇಂದು ಕೊರೊನಾ ಸೋಂಕು ಪತ್ತೆಯಾದ ಕಾರಣ ಎಸಿಬಿ ಕಚೇರಿಯನ್ನು 48 ಗಂಟೆಗಳ ಕಾಲ ಸೀಲ್​ಡೌನ್​ ಮಾಡಲಾಗಿದೆ.

ಎಸಿಬಿ ಕಚೇರಿ ಸೀಲ್​ಡೌನ್​​

ಹಾಗೆಯೇ ಸೋಂಕಿತ ಡಿವೈಎಸ್ಪಿಯ ಸಂಪರ್ಕದಲ್ಲಿದ್ದ ಸಿಬ್ಬಂದಿಯನ್ನ ಕ್ವಾರಂಟೈನ್​ನಲ್ಲಿರುವಂತೆ ಹಿರಿಯಾಧಿಕಾರಿಗಳು ಸೂಚನೆ ನೀಡಿದ್ದು, ಅಧಿಕಾರಿಯನ್ನ ಕೋವಿಡ್​​​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಹಿಂದೆ ಎಸಿಬಿ ಐಜಿಪಿಯೊಬ್ಬರ ಗನ್​​ಮ್ಯಾನ್​ಗೆ ಕೊರೊನಾ ಸೋಂಕು ಬಂದಿತ್ತು. ಆತನ ಸಂಪರ್ಕದಿಂದಲೇ ಡಿವೈಎಸ್ಪಿಗೆ ವೈರಸ್​​ ತಗುಲಿರುವ ಗುಮಾನಿ‌ ಇದ್ದು, ಸದ್ಯ ಸಿಬ್ಬಂದಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಸದ್ಯ ಎಸಿಬಿಗೆ ದೂರುದಾರರು ಬರುವ ಹಾಗಿಲ್ಲ. ಅಲ್ಲದೇ ಅಧಿಕಾರಿಗಳು ಕೂಡಾ ಭ್ರಷ್ಟರ ಮೇಲೆ‌ ಯಾವುದೇ ದಾಳಿಯನ್ನ ನಡೆಸದಿರಲು ನಿರ್ಧಾರ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.