ETV Bharat / state

ಕೆಲಸದ ಆಮಿಷವೊಡ್ಡಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಕಿರಾತಕರು: ಸ್ಪಾ ಮೇಲೆ ದಾಳಿ - ಬೆಂಗಳೂರಲ್ಲಿ ವೇಶ್ಯಾವಾಟಿಕೆ

ನಗರದ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ದಿ ಡ್ರಾಗನ್ ಸ್ಪಾದಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿತ್ತು ಎನ್ನಲಾಗಿದೆ. ಹೊರ ರಾಜ್ಯದಲ್ಲಿ ಕಷ್ಟದಲ್ಲಿರುವ ಮಹಿಳೆಯರನ್ನು ಟಾರ್ಗೆಟ್ ಮಾಡಿ ಈ ಕೆಲಸಕ್ಕೆ ಕಿರಾತಕರು ನೂಕುತ್ತಿದ್ದರು ಎಂದು ತಿಳಿದುಬಂದಿದೆ.

ಸ್ಪಾ ಮೇಲೆ ದಾಳಿ ,  ACB officers attack on spa over Prostitution racket
ಸ್ಪಾ ಮೇಲೆ ದಾಳಿ
author img

By

Published : Jan 24, 2020, 1:56 PM IST

ಬೆಂಗಳೂರು: ಉದ್ಯೋಗ ಕೊಡಿಸುವ ನೆಪದಲ್ಲಿ ಹೊರ ರಾಜ್ಯದಿಂದ ಹುಡುಗಿಯರನ್ನು ಕರೆಯಿಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಸ್ಪಾ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ನಗರದ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ದಿ ಡ್ರಾಗನ್ ಸ್ಪಾದಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿತ್ತು ಎನ್ನಲಾಗಿದೆ. ಹೊರ ರಾಜ್ಯದಲ್ಲಿ ಕಷ್ಟದಲ್ಲಿರುವ ಮಹಿಳೆಯರನ್ನು ಟಾರ್ಗೆಟ್ ಮಾಡಿ ಹೆಚ್ಚಿನ ಸಂಬಳ ಕೊಡುವ ಆಮಿಷ ತೋರಿಸಿ, ಸ್ಪಾಗೆ ಕರೆತಂದು ವೇಶ್ಯಾವಾಟಿಕೆ ದಂಧೆಗೆ ನೂಕುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಪೊಲೀಸ್‌ ದಾಳಿ ವೇಳೆ ಸ್ಥಳದಲ್ಲಿದ್ದ ವಡ್ಡಿ ಚಿನ್ನ, ಅಂಕಲ್ ಕುಮಾರ್, ರಿಚರ್ಡ್ ಹಾಗು ಪ್ರಜ್ವಲ್ ಸಿಸಿಬಿ ಅಧಿಕಾರಿಗಳ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಪ್ರಕರಣ ತನಿಖೆ ಮುಂದುವರೆದಿದೆ.

Intro:ವೆಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ
ಅಮಾಯಕ ಹೆಣ್ಣುಮಕ್ಕಳು ಟಾರ್ಗೇಟ್

ಹೊರ ರಾಜ್ಯದಿಂದ ಹುಡುಗಿಯರನ್ನ ಉದ್ಯೋಗ ಕೊಡಿಸುವ ನೆಪದಲ್ಲಿ ಕರೆಯಿಸಿ ವೆಶ್ಯಾವಾಟಿಕೆ ಧಂದೆ ನಡೆಸುತ್ತಿದ್ದ ಸ್ಪಾ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ನಗರದ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ದಿ ಡ್ರಾಗನ್ ಸ್ಪಾದಲ್ಲಿ ಹೊರ ರಾಜ್ಯದಲ್ಲಿ ಕಷ್ಟದಲ್ಲಿರುವ ಮಹಿಳೆಯರನ್ನ ಟಾರ್ಗೇಟ್ ಮಾಡಿಕೊಂಡು ಹೆಚ್ವಿನ ಸಂಬಳ ಕೊಡುವ ಆಮಿಷ ತೋರಿಸಿ ಸ್ಪಾಕ್ಕೆ ಕರೆತಂದು ಗಿರಾಕಿಗಳನ್ನ ಮೊಬೈಲ್ ಮೂಲಕ ಬರಮಾಡಿಕೊಂಡು ಒಬ್ಬ ಗಿರಾಕಿಯಿಂದ ಎರಡುಸಾವಿರದಿಂದ ಮೂರು ಸಾವಿರದ ವರೆಗೆ ಹಣ ಪಡೆದು ಲೈಗಿಂಕ ಚಟುವಟಿಕೆ ನಡೆಸುತ್ತಿದ್ದರು.

ಹೀಗಾಗಿ ಸಮಾಜದ ಸ್ವಾಸ್ಥ್ಯ ವನ್ನ ಹಾಳುಮಾಡುವ‌ ಮಾಹಿತಿ ಸಿಸಿಬಿ ಅಧಿಕಾರಿಗಳಿಗೆ ಲಭ್ಯವಾಗಿ ದಾಳಿ‌ ನಡೆಸಿದ್ದಾರೆ. ದಾಳಿ ವೇಳೆ ವಡ್ಡಿ ಚಿನ್ನ, ಕುಮಾರ್ ಅಂಕಲ್ ಕುಮಾರ್, ರಿಚರ್ಡ್, ಪ್ರಜ್ವಲ್ ದಾಳಿ‌ನಡೆಸುತ್ತಿದ್ದಂತೆ ಸಿಸಿಬಿ ಅಧಿಕಾರಿಗಳ ಕೈಯಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದಾರೆ

ಇನ್ನು ತನೀಕೆ ವೇಳೆ ಆರೋಪಿಗಳ ಪೈಕಿ ವಡ್ಡಿ ಚಿನ್ನ ಸ್ಪಾದ ಮಾಲೀಕನಾಗಿದ್ದು ಈತ ಹೇಳಿದಂತೆ ಕುಮಾರ್ ಅಲಿಯಾಸ್ ಅಂಕಲ್ ಕುಮಾರ್ , ರಿಚರ್ಡ್ ಲೂಯಿಸ್, ಪ್ರಜ್ವಲ್ ಎಂಬುವರು ಗಿರಾಕಿಗಳಿಗೆ ಸಂತ್ರಸ್ತೆ ಯರನ್ನ ರೆಡಿ ಮಾಡಿ ಪೋಟೋ ತೆಗೆದು ವೆಶ್ಯಾವಾಟಿಕೆಯಲ್ಲಿ ತೊಡಗಿಸ್ತಿದ್ದ .

ಹಾಗೆ ಆರೋಪಿಗಳು ಸಂಘಟಿತ ರೀತಿಯಲ್ಲಿ ತಮ್ಮದೇ ಜಾಲವನ್ನು ಸೃಷ್ಟಿಸಿ ಅಮಾಯಕ ಹೆಣ್ಣು ಮಕ್ಕಳನ್ನ ಕರೆಯಿಸಿ ಕೊಂಡು ಅವರುಗಳಿಗೆ ಉದ್ಯೋಗ ಕೊಡಿಸುವ ನೆಪದಲ್ಲಿ ಗಿರಾಕಿಗಳಿಗೆ ಸಂತ್ರಸ್ಥೆ ಯರ ಪೋಟೋ ತೆಗೆದು ಕಳುಹಿಸಿ ಈ ಕೃತ್ಯ ವೆಸಗುತ್ತಿದ್ದ ವಿಚಾರ ತಿಳಿದು ಬಂದಿದೆ. ಸದ್ಯ ‌ಮಹಿಳೆಯರ ರಕ್ಷಣೆ ಮಾಡಿ ಆರೋಪಿಗಳಿಗೆ ಶೋಧ‌ ಮುಂದುವರೆಸಿದ್ದಾರೆBody:KN_BNG_07_CCBRAID_7204498Conclusion:KN_BNG_07_CCBRAID_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.