ETV Bharat / state

ಕಾನೂನು‌ ಮಾಪನ ಶಾಸ್ತ್ರ ಕಚೇರಿ ಮೇಲೆ ಎಸಿಬಿ ದಾಳಿ.. 22 ಮಂದಿ ಬಂಧನ, 9.85 ಲಕ್ಷ ರೂ.ನಗದು ಜಪ್ತಿ!

author img

By

Published : Sep 30, 2019, 9:19 PM IST

ಕಾನೂನು ಮಾಪನ ಶಾಸ್ತ್ರ ಇಲಾಖೆಯ ಕಚೇರಿಯ ಸಹಾಯಕ ನಿಯಂತ್ರಕರು ಮತ್ತು ನಿರೀಕ್ಷಕರ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ 22 ಜನರನ್ನು ಬಂಧಿಸಿ, 9.85 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾನೂನು‌ ಮಾಪನ ಶಾಸ್ತ್ರ ಕಚೇರಿ ಮೇಲೆ ಎಸಿಬಿ ದಾಳಿ

ಬೆಂಗಳೂರು: ಕಾನೂನು ಮಾಪನ ಶಾಸ್ತ್ರ ಇಲಾಖೆಯ ಕಚೇರಿಯ ಸಹಾಯಕ ನಿಯಂತ್ರಕರು ಮತ್ತು ನಿರೀಕ್ಷಕರ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ 22 ಜನರನ್ನು ಬಂಧಿಸಿ, 9.85 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾನೂನು‌ ಮಾಪನ ಶಾಸ್ತ್ರ ಕಚೇರಿ ಮೇಲೆ ಎಸಿಬಿ ದಾಳಿ..

ವಿವಿಪುರಂನ ಕಾನೂನು ಮಾಪನ ಶಾಸ್ತ್ರ ನಿರೀಕ್ಷಕರ ಕಚೇರಿ ಹಾಗೂ ಬಸವೇಶ್ವರ ನಗರದ ಕಾನೂನು ಮಾಪನ ಶಾಸ್ತ್ರ ಇಲಾಖೆ ವಿರುದ್ಧ ದೂರು ಬಂದ ಹಿನ್ನೆಲೆ ಎಸಿಬಿ ಅಧಿಕಾರಿಗಳ ಎರಡು ತಂಡ ಕಾರ್ಯಾಚರಣೆ ನಡೆಸಿ ಮಧ್ಯವರ್ತಿಗಳನ್ನು ಬಂಧಿಸಿದ್ದಾರೆ. ವಿವಿಪುರಂ ಕಾನೂನು ಮಾಪನ ಶಾಸ್ತ್ರ ನಿರೀಕ್ಷಕರ ಕಚೇರಿಯ ಮೇಲೆ ಕಾರ್ಯಾಚರಣೆ ಕೈಗೊಂಡ ವೇಳೆ ಮಧ್ಯವರ್ತಿಗಳ ಬಳಿ 7.12 ಲಕ್ಷ ರೂ. ನಗದು ಹಣ ವಶಪಡಿಸಿಕೊಂಡಿದ್ದಾರೆ. ಸಿದ್ದಪ್ಪ, ಚಂದ್ರಶೇಖರ, ಯಲ್ಲಪ್ಪ, ನವೀದ್, ಶ್ರೀನಿವಾಸ, ವಾದೂದ್, ಅರ್ಕಲಪ್ಪ, ಪ್ರಕಾಶ್, ಸೆಂಥಿಲ್‌ ಕುಮಾರ್, ಶಶಿಕುಮಾರ್ ಹಾಗೂ ಪ್ರಕಾಶ್‌ನನ್ನು ಬಂಧಿಸಿದ್ದಾರೆ. ಅಲ್ಲದೇ ನೂರಕ್ಕೂ ಹೆಚ್ಚು ಸತ್ಯಾಪನ ಪ್ರಮಾಣ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಬಸವೇಶ್ವರನಗರ ಕಾನೂನು ಮಾಪನ ಶಾಸ್ತ್ರ ಇಲಾಖೆ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು ಮಧ್ಯವರ್ತಿಗಳ ಬಳಿ ಇದ್ದ 2.73 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಚೇತನ್ ಕುಮಾರ್, ಶಿವಕುಮಾರ್, ಗೋಪಾಲಕೃಷ್ಣ, ಹರೀಶ್‌ಬಾಬು, ಪ್ರಮೋದ, ಕುಮಾರ್, ಕೆಂಪಣ್ಣ, ಮಂಜು, ಕಾಂತರಾಜು, ಪದ್ಮನಾಭ್ ಮತ್ತು ವೆಂಕಟೇಶ ಎಂಬುವರನ್ನು ಬಂಧಿಸಿ ಸತ್ಯಾಪನ ಪ್ರಮಾಣ ಪತ್ರ ಮತ್ತು ತೂಕದ ಮಾಪನಕ್ಕೆ ಸಂಬಂಧಪಟ್ಟ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಇದರಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳ ಬಳಿ ಇರಬೇಕಾದ ಸತ್ಯಾಪನ ಪ್ರಮಾಣ ಪತ್ರ, ಅಳತೆ ಮತ್ತು ತೂಕಕ್ಕೆ ಸಂಬಂಧಪಟ್ಟ ಸರ್ಕಾರಿ ವಸ್ತು, ದಾಖಲಾತಿಗಳು ಖಾಸಗಿ ಮಧ್ಯವರ್ತಿಗಳ ಬಳಿ ಪತ್ತೆಯಾಗಿವೆ. ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳು ಅಂಗಡಿಗಳಿಗೆ ಭೇಟಿ ನೀಡಿ, ಪರಿಶೀಲಿಸಿ ನಂತರ ಸತ್ಯಾಪನ ಪ್ರಮಾಣ ಪತ್ರ ನೀಡಬೇಕಿತ್ತು. ಆದರೆ, ಇವುಗಳನ್ನು ಮಧ್ಯವರ್ತಿಗಳ ಮುಖೇನ ನೀಡಿ ಭ್ರಷ್ಟಾಚಾರದಲ್ಲಿ ತೊಡಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇವರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Intro:Body:ಕಾನೂನು‌ ಮಾಪನ ಶಾಸ್ತ್ರ ಕಚೇರಿಗಳ ಎಸಿಬಿ ದಾಳಿ: 22 ಜನರ ಬಂಧನ, 9.85 ಲಕ್ಷ ರೂ.ನಗದು ಜಪ್ತಿ

ಬೆಂಗಳೂರು: ನಗರದ ಕಾನೂನು ಮಾಪನಶಾಸ್ತ್ರ ಇಲಾಖೆಯ ಕಚೇರಿಗಳಲ್ಲಿ ಕಾನೂನು ಮಾಪನಶಾಸ್ತ್ರ ಸಹಾಯಕ ನಿಯಂತ್ರಕರು ಮತ್ತು ಕಾನೂನು ಮಾಪನ ನಿರೀಕ್ಷಕರುಗಳ ಕಚೇರಿ ಮೇಲೆ ಭ್ರಷ್ಠಾಚಾರ ನಿಗ್ರಹ ದಳ(ಎಸಿಬಿ) ಪೊಲೀಸರು ಕಾರ್ಯಾಚರಣೆ ನಡೆಸಿ 22 ಜನರನ್ನು ಬಂಧಿಸಿ,9.85 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.
ವಿವಿಪುರಂನ ಕಾನೂನು ಮಾಪನ ನಿರೀಕ್ಷಕರ ಕಚೇರಿ ಹಾಗೂ ಬಸವೇಶ್ವರ ನಗರದ ಕಾನೂನು ಮಾಪನಶಾಸ್ತ್ರ ಇಲಾಖೆ ವಿರುದ್ದ ದೂರು ಬಂದಿರುವ ಹಿನ್ನೆಲೆಯಲ್ಲಿ ಸೋಮವಾರ ಎಸಿಬಿ ಅಧಿಕಾರಿಗಳ ಎರಡು ತಂಡ ಕಾರ್ಯಾಚರಣೆ ನಡೆಸಿ ಮಧ್ಯವರ್ತಿಗಳನ್ನು ಬಂಧಿಸಿದ್ದಾರೆ.
ವಿವಿಪುರ ಕಾನೂನು ಮಾಪನ ನಿರೀಕ್ಷಕರ ಕಚೇರಿಯ ಮೇಲೆ ಕಾರ್ಯಾಚರಣೆ ಕೈಗೊಂಡ ವೇಳೆ ಮಧ್ಯವರ್ತಿಗಳ ಬಳಿ 7,12,045 ರೂ.ನಗದು ಹಣ ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.
ಈ ಕೃತ್ಯದಲ್ಲಿ ತೊಡಗಿದ್ದ ಸಿದ್ದಪ್ಪ, ಚಂದ್ರಶೇಖರ, ಯಲ್ಲಪ್ಪ, ನವೀದ್, ಶ್ರೀನಿವಾಸ, ವಾದೂದ್, ಅರ್ಕಲಪ್ಪ, ಪ್ರಕಾಶ್, ಸೆಂಥಿಲ್‌ಕುಮಾರ್, ಶಶಿಕುಮಾರ್ ಹಾಗೂ ಪ್ರಕಾಶ್‌ನನ್ನು ಬಂಧಿಸಿದ್ದಾರೆ.ಅಲ್ಲದೇ ನೂರಕ್ಕೂ ಹೆಚ್ಚು ಸತ್ಯಾಪನ ಪ್ರಮಾಣ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಬಸವೇಶ್ವರ ನಗರ ಕಾನೂನು ಮಾಪನ ಶಾಸ್ತ್ರ ಇಲಾಖೆ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು ಮಧ್ಯವರ್ತಿಗಳ ಬಳಿ ಇದ್ದ 2,73,000 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ಕೃತ್ಯದಲ್ಲಿ ತೊಡಗಿದ್ದ ಚೇತನ್ ಕುಮಾರ್, ಶಿವಕುಮಾರ್, ಗೋಪಾಲಕೃಷ್ಣ, ಹರೀಶ್‌ಬಾಬು, ಪ್ರಮೋದ, ಕುಮಾರ್, ಕೆಂಪಣ್ಣ, ಮಂಜು, ಕಾಂತರಾಜು, ಪದ್ಮನಾಭ್ ಮತ್ತು ವೆಂಕಟೇಶ ಎಂಬುವವರನ್ನು ಬಂಧಿಸಿ ಸತ್ಯಾಪನ ಪ್ರಮಾಣ ಪತ್ರ ಮತ್ತು ತೂಕದ ಮಾಪನಕ್ಕೆ ಸಂಬಂಧಪಟ್ಟಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಇದರಲ್ಲಿ ಕಾನೂನು ಮಾಪನ ಶಾಸ ಇಲಾಖೆಯ ಅಧಿಕಾರಿಗಳ ಬಳಿ ಇರಬೇಕಾದ ಸತ್ಯಾಪನ ಪ್ರಮಾಣ ಪತ್ರ, ಅಳತೆ ಮತ್ತು ತೂಕಕ್ಕೆ ಸಂಬಂಧಪಟ್ಟ ಸರ್ಕಾರಿ ವಸ್ತು, ದಾಖಲಾತಿಗಳು ಖಾಸಗಿ,ಮಧ್ಯವರ್ತಿಗಳ ಬಳಿ ಪತ್ತೆಯಾಗಿವೆ. ಕಾನೂನು ಮಾಪನ ಶಾಸ ಇಲಾಖೆಯ ಅಧಿಕಾರಿಗಳು ಅಂಗಡಿಗಳಿಗೆ ಭೇಟಿ ನೀಡಿ, ಪರಿಶೀಲಿಸಿ ನಂತರ ಸತ್ಯಾಪನ ಪ್ರಮಾಣ ಪತ್ರ ನೀಡಬೇಕಿತ್ತು. ಆದರೆ, ಇವುಗಳನ್ನು ಮಧ್ಯವರ್ತಿಗಳ ಮುಖೇನ ನೀಡಿ ಭ್ರಷ್ಟಾಚಾರದಲ್ಲಿ ತೊಡಗಿರುವುದು ಮೇಲ್ನೊಟಕ್ಕೆ ಕಂಡು ಬಂದಿದೆ. ಇವರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.