ETV Bharat / state

ದೂರು ಬಂದ ಕಾರಣ ಕೆಎಎಸ್ ಅಧಿಕಾರಿ ಸುಧಾ ನಿವಾಸದ ಮೇಲೆ‌ ದಾಳಿ: ಎಸಿಬಿ ಐಜಿಪಿ

ಕೆಎಎಸ್ ಅಧಿಕಾರಿ ಸುಧಾ ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಮಾಹಿತಿ ಬಂದಿತ್ತು. ಈ ಹಿನ್ನೆಲೆ ಅವರಿಗೆ ಸಂಬಂಧಪಟ್ಟ 6 ಕಡೆ ದಾಳಿ ಮಾಡಿದ್ದೇವೆ ಎಂದು ಭ್ರಷ್ಟಾಚಾರ ನಿಗ್ರಹ ಸಂಸ್ಥೆ (ಎಸಿಬಿ) ಐಜಿಪಿ ಚಂದ್ರಶೇಖರ್ ಪ್ರತಿಕ್ರಿಯಿಸಿದ್ದಾರೆ.

banglore
ಐಜಿಪಿ ಚಂದ್ರಶೇಖರ್
author img

By

Published : Nov 7, 2020, 6:39 PM IST

Updated : Nov 7, 2020, 7:28 PM IST

ಬೆಂಗಳೂರು: ಕೆಎಎಸ್ ಸುಧಾ ಮನೆ ‌ಮೆಲೆ ಎಸಿಬಿ ದಾಳಿ ಪ್ರಕರಣ ಸಂಬಂಧ ಭ್ರಷ್ಟಾಚಾರ ನಿಗ್ರಹ ಸಂಸ್ಥೆ (ಎಸಿಬಿ) ಐಜಿಪಿ ಚಂದ್ರಶೇಖರ್ ಪ್ರತಿಕ್ರಿಯಿಸಿದ್ದಾರೆ.

ಕೆಎಎಸ್ ಅಧಿಕಾರಿಯಾಗಿರುವ ಸುಧಾ ಅವರು ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಮಾಹಿತಿ ಬಂದಿತ್ತು. ಈ ಹಿನ್ನೆಲೆ ಅವರಿಗೆ ಸಂಬಂಧಪಟ್ಟ 6 ಕಡೆ ದಾಳಿ ಮಾಡಿದ್ದೇವೆ. ಕೆಲವು ದಾಖಲೆಗಳು ಸಿಕ್ಕಿವೆ, ಅವನ್ನು ವಶಪಡಿಸಿಕೊಂಡಿದ್ದೇವೆ. ಬೆಂಗಳೂರು, ಉಡುಪಿ, ಮೈಸೂರು ಸೇರಿದಂತೆ ಆರು ಕಡೆ ದಾಳಿ ನಡೆಸಿದ್ದೇವೆ. ಸುಧಾ ಅವರ‌ ಮೇಲೆ ಮಾತ್ರ ಈಗ ದೂರು ದಾಖಲಿಸಿದ್ದೇವೆ. ಪ್ರಾಥಮಿಕ ಮಾಹಿತಿ ಪ್ರಕಾರ ಬೇನಾಮಿ ಆಸ್ತಿಯೂ ಇದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆಯೂ ತನಿಖೆ ನಡೆಸಲಿದ್ದೇವೆ. ಆ ರೀತಿಯಾಗಿ ಬೇನಾಮಿಗಳು ಯಾರಾದರೂ ಇದ್ದರೆ ಅವರ ವಿರುದ್ಧವೂ ಕೇಸ್ ದಾಖಲಿಸಿಕೊಳ್ಳಲಿದ್ದೇವೆ. ಪರಿಶೀಲನೆ ಮುಗಿದ ಬಳಿಕ ಈ ಬಗ್ಗೆ ಸಂಪೂರ್ಣ ವಿವರ ನೀಡುತ್ತೇವೆ ಎಂದರು.

ಐಜಿಪಿ ಚಂದ್ರಶೇಖರ್

ಈಗ ಸರ್ಚ್​ ನಡೆಯುತ್ತಿದ್ದು, ತನಿಖಾ ಹಂತದಲ್ಲಿರುವ ಕಾರಣ ಹೆಚ್ಚೇನೂ ಹೇಳಲು ಆಗೋದಿಲ್ಲ. ಸುಧಾ ಅವರಿಗೆ ಸೇರಿದ ಒಂದು ಫ್ಲ್ಯಾಟ್ ಇನ್ನೂ ಸರ್ಚ್ ಮಾಡಿಲ್ಲ. ತಡರಾತ್ರಿವರೆಗೂ ಸರ್ಚ್ ಮಾಡೋದಕ್ಕೆ ಚಿಂತನೆ ಮಾಡಿದ್ದೇವೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಹೀಗಾಗಿ ಯಾವುದೇ ಯಡವಟ್ಟು ಎಸಿಬಿ ಕಡೆಯಿಂದ ‌ನಡೆಯದಂತೆ ಎಚ್ಚರ ವಹಿಸುತ್ತಿದ್ದೇವೆ. 2-3 ದಿನಗಳ ಕಾಲ ಯಾವುದೇ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದರು.

ಈ ಹಿಂದೆ ಬಿಡಿಎನಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿದ್ದ ಡಾ. ಬಿ.ಸುಧಾ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಹಾಗೂ ಅವ್ಯವಹಾರ ಆರೋಪ ಸಂಬಂಧ ಎಸಿಬಿಯಲ್ಲಿ ದೂರು ದಾಖಲಾಗಿತ್ತು. ಪ್ರಸ್ತುತ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪರಿಶೀಲನೆ ವೇಳೆ ಮನೆಯಲ್ಲಿ 10 ಲಕ್ಷ ನಗದು ಪತ್ತೆಯಾಗಿದೆ ಎಂದು ತಿಳಿಸಿದರು.

Last Updated : Nov 7, 2020, 7:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.