ETV Bharat / state

ದೆಹಲಿ ಮೊಹಲ್ಲಾ ಕ್ಲಿನಿಕ್ ಮಾದರಿಯಲ್ಲೇ ಬೆಂಗಳೂರಲ್ಲಿ ಆಮ್ ಆದ್ಮಿ ಕ್ಲಿನಿಕ್! - AAP Sarted Mohalla clinic

ದೆಹಲಿಯಲ್ಲಿ ಆರಂಭ ಮಾಡಲಾಗಿರುವ ಮೊಹಲ್ಲಾ ಕ್ಲಿನಿಕ್​ ರೀತಿಯಲ್ಲಿ ಬೆಂಗಳೂರಿನಲ್ಲಿ ಆಮ್​ ಆದ್ಮಿ ಪಕ್ಷ ಕ್ಲಿನಿಕ್ ಆರಂಭ ಮಾಡಿದೆ.

AAP Sarted Mohalla clinic in Bengaluru
AAP Sarted Mohalla clinic in Bengaluru
author img

By

Published : Oct 31, 2020, 2:37 AM IST

ಬೆಂಗಳೂರು: ಬಡವರು, ಜನಸಾಮಾನ್ಯರ ಆರೋಗ್ಯ ಸೇವೆಗಾಗಿ ಗಲ್ಲಿ-ಗಲ್ಲಿಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡುವ ದೆಹಲಿ ಸರ್ಕಾರ ಆರಂಭಿಸಿದ ಮೊಹಲ್ಲಾ ಕ್ಲಿನಿಕ್ ಮಾದರಿಯಲ್ಲೇ ಬೆಂಗಳೂರಲ್ಲೂ ಆಮ್ ಆದ್ಮಿ ಕ್ಲಿನಿಕ್ ಆರಂಭವಾಗಲಿದೆ.

ನವೆಂಬರ್ ಒಂದರಂದು, ಶಾಂತಿನಗರದ ಬಸಪ್ಪ ರಸ್ತೆಯಲ್ಲಿ ಆಮ್ ಆದ್ಮಿ ಪಕ್ಷ ಹಾಗೂ ಟ್ರಸ್ಟ್ ಜೊತೆಗೂಡಿ ಈ ಕ್ಲಿನಿಕ್ ನಡೆಸಲಿದೆ. ಕೋವಿಡ್ ಸೇರಿದಂತೆ 60 ವಿಧದ ಲ್ಯಾಬ್​ ಟೆಸ್ಟ್​ಗಳು ಉಚಿತವಾಗಿ ಮಾಡಿಕೊಡಲಿದ್ದಾರೆ. ಮೆಡಿಕಲ್ ಟೆಸ್ಟ್ ಗಳು, ಖಾಯಿಲೆಗಳಿಗೆ ಉಚಿತ ಔಷಧಿ, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುವ ಭರವಸೆಯನ್ನೂ ನೀಡಿದ್ದಾರೆ.

ಬೆಂಗಳೂರಿನಲ್ಲಿ ಎಎಪಿ ಮೊಹಲ್ಲಾ ಕ್ಲಿನಿಕ್​ ಆರಂಭ

ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಈ ಕ್ಲಿನಿಕ್ ತೆರೆದಿರಲಿದೆ. ಸ್ವಯಂ ಪ್ರೇರಿತರಾಗಿ ಹತ್ತು ಜನ ವೈದ್ಯರು ಈ ಕ್ಲಿನಿಕ್​ಗೆ ಬರಲಿದ್ದು, ಜನ ಸಾಮಾನ್ಯರ ಆರೋಗ್ಯ ತಪಾಸಣೆ, ಚಿಕಿತ್ಸೆಗೆ ಸಲಹೆ, ಔಷಧಿ ನೀಡಲಿದ್ದಾರೆ. ಅಲ್ಲದೆ ತಜ್ಞ ವೈದ್ಯರ ಅಗತ್ಯವಿದ್ದರೂ ವ್ಯವಸ್ಥೆ ಮಾಡಲಾಗುವುದು. ಬೆಂಗಳೂರಿನಲ್ಲಿ ಪ್ರಥಮವಾಗಿ ವೈದ್ಯಕೀಯ ಸೇವೆ ನೀಡುವ ಕ್ಲಿನಿಕ್​ಗೆ ಚಾಲನೆ ನೀಡಲಾಗ್ತಿದೆ.

ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಆಮ್ ‌ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್ ವಿ ಸದಮ್ ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.