ETV Bharat / state

ವಿದ್ಯುತ್ ದರ ಏರಿಕೆ ವಿರೋಧಿಸಿ ಆಮ್ ಆದ್ಮಿ ಪಕ್ಷದಿಂದ ‘ಶಾಕ್ ಬೇಡ’ ಆ್ಯಪ್ ಬಿಡುಗಡೆ - Bangalore news

‘ಶಾಕ್ ಬೇಡ’ ಎಂಬ ಹೊಸ ಅಪ್ಲಿಕೇಶನ್ ಅಭಿವೃದ್ಧಿಪಡಿಸಿರುವ ಆಮ್​ ಆದ್ಮಿ ಪಾರ್ಟಿ, ಕಳೆದ ತಿಂಗಳು ಬೆಂಗಳೂರಿನ ಜನ ಪಾವತಿಸಿದ ವಿದ್ಯುತ್ ಬಿಲ್ ಮೊತ್ತವನ್ನು ನಮೂದಿಸಿ ನವೆಂಬರ್ ತಿಂಗಳು ಎಷ್ಟು ವಿದ್ಯುತ್‌ ಬಿಲ್‌ ಬರುತ್ತದೆ ಎಂದು ನೋಡಬಹುದಾದ ಸೌಲಭ್ಯ ಒದಗಿಸಿದೆ. ಈ ಮೂಲಕ ದೆಹಲಿ ಹಾಗೂ ಬೆಂಗಳೂರು ನಿವಾಸಿಗಳ ಬಿಲ್ ಅಂತರ ಕುರಿತು ಮಾಹಿತಿ ನೀಡಲಿದೆ.

aam-aadmi-party-released-shock-beda-app
ವಿದ್ಯುತ್ ದರ ಏರಿಕೆ ವಿರೋಧಿಸಿ ಆಮ್ ಆದ್ಮಿ ಪಕ್ಷದಿಂದ ‘ಶಾಕ್ ಬೇಡ’ ಆ್ಯಪ್ ಬಿಡುಗಡೆ
author img

By

Published : Nov 13, 2020, 8:06 PM IST

ಬೆಂಗಳೂರು: ಕೋವಿಡ್ ಸಂಕಷ್ಟದಲ್ಲೂ ವಿದ್ಯುತ್ ದರ ಏರಿಕೆ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಕ್ಷ ‘ಬಿಲ್ ಕಡಿಮೆ ಮಾಡಿ ಇಲ್ಲ ಕುರ್ಚಿ ಖಾಲಿ ಮಾಡಿ’ ಎಂದು ಆಗ್ರಹಿಸಿದೆ.

ಇದರ ಜೊತೆಗೆ ‘ಶಾಕ್ ಬೇಡ’ ಎಂಬ ಹೊಸ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದು, ಕಳೆದ ತಿಂಗಳು ಬೆಂಗಳೂರಿನ ಜನ ಪಾವತಿಸಿದ ವಿದ್ಯುತ್ ಬಿಲ್ ಮೊತ್ತವನ್ನು ನಮೂದಿಸಿ ನವೆಂಬರ್ ತಿಂಗಳು ಎಷ್ಟು ವಿದ್ಯುತ್‌ ಬಿಲ್‌ ಬರುತ್ತದೆ ಎಂದು ನೋಡಬಹುದು ಮತ್ತು ಅಷ್ಟೇ ಪ್ರಮಾಣದ ವಿದ್ಯುತ್‌ ಉಪಯೋಗಿಸುವ ದೆಹಲಿಯ ನಿವಾಸಿಗಳು ಎಷ್ಟು ಬಿಲ್‌ ಪಾವತಿಸುತ್ತಾರೆ ಎನ್ನುವುದನ್ನು ತುಲನೆ ಮಾಡಿ ನೋಡಬಹುದು ಎಂದು ಪಕ್ಷದ ಮುಖಂಡ ಪೃಥ್ವಿ ರೆಡ್ಡಿ ತಿಳಿಸಿದ್ದಾರೆ.

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಅವೈಜ್ಞಾನಿಕ ದರ ಹೆಚ್ಚಳದ ಆದೇಶವನ್ನು ಈ ಕೂಡಲೇ ಹಿಂಪಡೆಯಬೇಕು. ವಿದ್ಯುತ್ ಸೋರಿಕೆ, ಕಳ್ಳತನ ತಡೆಗಟ್ಟದೆ ಆ ಹೊರೆಯನ್ನು ಜನರ ಮೇಲೆ ಹಾಕಿದ ಎಲ್ಲಾ 3 ಪಕ್ಷಗಳು ಇಂದಿನ ಈ ಪರಿಸ್ಥಿತಿಗೆ ಕಾರಣ‌ ಎಂದು ದೂರಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.