ETV Bharat / state

ಆಮ್ ಆದ್ಮಿ ಪಕ್ಷದಿಂದ‌ ಡಿಸೆಂಬರ್‌ 2ಕ್ಕೆ ಕರ ನಿರಾಕರಣೆ ಚಳವಳಿ: ಫಣಿರಾಜ್ - Aam Aadmi Party

ಬಿಬಿಎಂಪಿಯಿಂದ ಕಸ ನಿರ್ವಹಣೆಗೆ ಸೆಸ್ ಮತ್ತು ಬಳಕೆದಾರರ ಶುಲ್ಕ ಸಂಗ್ರಹ ಹೆಚ್ಚಳ ಆದೇಶ ಹಿಂಪಡೆಯದಿದ್ದರೆ ಆಮ್ ಆದ್ಮಿ ಪಕ್ಷದಿಂದ‌ ಡಿಸೆಂಬರ್‌ 2ಕ್ಕೆ ಕರ ನಿರಾಕರಣೆ ಚಳವಳಿ ನಡೆಸುವುದಾಗಿ ಆಮ್ ‌ಆದ್ಮಿ ಪಕ್ಷ ತಿಳಿಸಿದೆ.

press meet
ಸುದ್ದಿಗೋಷ್ಠಿ
author img

By

Published : Nov 28, 2020, 5:41 PM IST

ಬೆಂಗಳೂರು: ಕಸ ನಿರ್ವಹಣೆಗಾಗಿ ಆಸ್ತಿ ತೆರಿಗೆ ಜೊತೆ ಉಪ ಕರ (ಸೆಸ್‌)ವನ್ನು ರೂ 200 ರಿಂದ 600 ಕ್ಕೆ ಹೆಚ್ಚಳ ಮಾಡಲು ಹೊರಟಿರುವ ಬಿಬಿಎಂಪಿ ಮತ್ತೆ ಸಾರ್ವಜನಿಕರನ್ನು ಸುಲಿಗೆ ಮಾಡಲು ಹೊರಟಿದೆ. ಬಿಬಿಎಂಪಿಯ ಈ ತೀರ್ಮಾನವನ್ನು ವಿರೋಧಿಸಿ ಆಮ್ ‌ಆದ್ಮಿ ಪಕ್ಷ ಡಿಸೆಂಬರ್ 2 ರಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.

ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಫಣಿರಾಜ್ ಎಸ್.ವಿ ಮಾತನಾಡಿ, ನಾಚಿಕೆಗೆಟ್ಟ ಸರ್ಕಾರ ಬಡವರನ್ನು ಸುಲಿದು ತಿನ್ನಲು ಹೊರಟಿದೆ, ವಿದ್ಯುತ್ ಬಿಲ್ ಹೆಚ್ಚಳ ಮಾಡಿದೆ, ನಂತರ ನೀರಿನ ಬಿಲ್ ಹೆಚ್ಚಳಕ್ಕೆ ಕೈ ಹಾಕಿದೆ, ಈಗ ಕಸ ಸಂಗ್ರಹ ಶುಲ್ಕ ಹೆಚ್ಚಳ ಮಾಡಲು ಹೊರಟಿರುವ ಈ ಜನ ವಿರೋಧಿ ನಡೆಯನ್ನು ಸಹಿಸುವುದಿಲ್ಲ. ಕೂಡಲೇ ಈ ಆದೇಶವನ್ನು ಬಿಬಿಎಂಪಿ ಹಿಂಪಡೆಯದೇ ಹೋದರೆ ಬಳಕೆದಾರರ ಶುಲ್ಕ ಕಟ್ಟದೆ ಕರ ನಿರಾಕರಣೆ ಚಳವಳಿ ಪ್ರಾರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿ

ಈಗಾಗಲೇ ಜನರಿಂದ 45 ಕೋಟಿಯಷ್ಟು ಕಸದ ನಿರ್ವಹಣೆಗೆ ಎಂದು ಸೆಸ್ ಸಂಗ್ರಹಿಸಲಾಗುತ್ತಿದೆ. ಬೆಂಗಳೂರಿಗಿಂತಲೂ ದೊಡ್ಡ ವಿಸ್ತೀರ್ಣದ ದೆಹಲಿ ನಗರದ ಕಸ ನಿರ್ವಹಣೆಗೆ ಅಲ್ಲಿನ ಆಮ್ ಆದ್ಮಿ ಪಕ್ಷದ ಸರ್ಕಾರ ವಾರ್ಷಿಕ ₹ 250 ಕೋಟಿ ಖರ್ಚು ಮಾಡುತ್ತಿದೆ. ಆದರೆ ಬಿಬಿಎಂಪಿ ಮಾತ್ರ ವರ್ಷಕ್ಕೆ ₹1200 ಕೋಟಿಗೂ ಅಧಿಕ ವೆಚ್ಚ ಅಂದರೆ ವಾರ್ಡ್ ಒಂದಕ್ಕೆ 6 ಕೋಟಿಯಷ್ಟು ಖರ್ಚು ಏಕೆ ಎಂದು ಮೊದಲು ಬಿಬಿಎಂಪಿ ಉತ್ತರಿಸಬೇಕು ಎಂದು ಹೇಳಿದರು.

ಕಸದಿಂದ ಅನೇಕ ರಾಜ್ಯಗಳು, ಆದಾಯವನ್ನು ಪಡೆಯುತ್ತಿವೆ. ಇಂತಹ ಅವಕಾಶಗಳನ್ನು ಬೆಂಗಳೂರಿನಲ್ಲೂ ಜಾರಿಗೆ ತರುವುದು ಬಿಟ್ಟು ಜನರ ಮೇಲೆ ಏಕೆ ಮತ್ತಷ್ಟು ಹೊರೆ ಹಾಕುತ್ತಿದ್ದೀರಿ ಎಂದು ಪ್ರಶ್ನಿಸಿದರು. ಮತ್ತೊಮ್ಮೆ‌ ಶುಲ್ಕ ವಿಧಿಸುವ ಬಗ್ಗೆ ಸಾರ್ವಜನಿಕರಿಂದ‌ ಅಭಿಪ್ರಾಯ ಪಡೆದು ಮುಂದುವರೆಯಬೇಕಾಗಿ ಆಮ್‌ ಆದ್ಮಿ ಪಕ್ಷ ಆಗ್ರಹಿಸುತ್ತದೆ ಎಂದರು.

ಸುದ್ದಿ ಗೋಷ್ಠಿಯಲ್ಲಿ ಅತ್ತೂರು ವಾರ್ಡ್ ಅಧ್ಯಕ್ಷೆ ಸುಹಾಸಿನಿ ಫಣಿರಾಜ್, ವಸಂತ ನಗರ ವಾರ್ಡ್ ಅಧ್ಯಕ್ಷೆ ಜನನಿ ಭರತ್ ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.