ETV Bharat / state

ಆಮ್​ ಆದ್ಮಿ ಪಕ್ಷದಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ.. ಟೆನ್ನಿಸ್​ ಕೃಷ್ಣ, ಬ್ರಿಜೇಶ್​ ಕಾಳಪ್ಪ ಸೇರಿ ಯಾರಿಗೆಲ್ಲ ಟಿಕೆಟ್​? - etv bharat kannada

ಚುನಾವಣೆಯಲ್ಲಿ ಜಯಗಳಿಸದ ನಂತರ ಶೇ.100ರಷ್ಟು ಭ್ರಷ್ಟಾಚಾರ ರಹಿತ ಆಡಳಿತ ನೀಡುವುದು ಮಾತ್ರವಲ್ಲದೇ, ಪ್ರತಿಯೊಬ್ಬ ನಾಗರಿಕನಿಗಿರುವ ಕನಸು ಕಾಣುವ ಹಾಗೂ ಬೆಳೆಯುವ ಹಕ್ಕುಗಳನ್ನು ಕಾಪಾಡುವುದಾಗಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.

aam-aadmi-party-best-list-released
ಆಮ್ ಆದ್ಮಿ ಪಾರ್ಟಿಯ ಬೆಸ್ಟ್‌ ಲಿಸ್ಟ್‌ ಬಿಡುಗಡೆ: ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ
author img

By

Published : Mar 20, 2023, 4:06 PM IST

Updated : Mar 20, 2023, 6:11 PM IST

ವಿಧಾನಸಭೆ ಚುನಾವಣೆ 2023.. ಆಮ್ ಆದ್ಮಿ ಪಾರ್ಟಿಯ ಬೆಸ್ಟ್‌ ಲಿಸ್ಟ್‌ ಬಿಡುಗಡೆ, ಇಲ್ಲಿದೆ ಅಭ್ಯರ್ಥಿಗಳ ಮಾಹಿತಿ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಆಮ್‌ ಆದ್ಮಿ ಪಾರ್ಟಿಯು ತಮ್ಮ 80 ಜನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಿಸಲು ಹೆಮ್ಮೆ ಪಡುತ್ತದೆ ಎಂದು ಆಮ್​ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.

ಎಎಪಿಯ ರಾಜ್ಯ ಕಚೇರಿಯಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡಗೊಳಿಸಿ ಮಾತಾನಾಡಿದ ಅವರು, ಭ್ರಷ್ಟಾಚಾರದಿಂದಾಗಿ ಈ ದೇಶದ ಜನರು ಶಿಕ್ಷಣ ಮತ್ತು ಆರೋಗ್ಯದಂತಹ ಮೂಲಭೂತ ಅವಶ್ಯಕತೆಗಳಿಂದ ವಂಚಿತರಾಗಿದ್ದಾರೆ ಹಾಗೂ ಭಾರತವು ವಿಶ್ವದ ನಂಬರ್‌ ಒನ್‌ ಸ್ಥಾನ ಅಲಂಕರಿಸುವುದಕ್ಕೆ ಭ್ರಷ್ಟಾಚಾರ ಅಡ್ಡಿಯಾಗಿದೆ. ಭಾರತವನ್ನು ಶೇ.100ರಷ್ಟು ಭ್ರಷ್ಟಾಚಾರ ಮುಕ್ತ ಮಾಡಬೇಕೆಂದರೆ ಶೇ.100ರಷ್ಟು ಪ್ರಾಮಾಣಿಕರಾಗಿರುವವರು ನಮ್ಮನ್ನು ಪ್ರತಿನಿಧಿಸಬೇಕು. ಈ ದೃಷ್ಟಿಯನ್ನು ಮನಗಂಡು ಮೊದಲ ಪಟ್ಟಿಯನ್ನು ಘೋಷಿಸಲಾಗಿದೆ ಎಂದು ಹೇಳಿದರು.

ನಮ್ಮ ಸಮಾಜದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರಾಮಾಣಿಕರಿದ್ದರೂ ಅವರು ರಾಜಕೀಯ ಪ್ರವೇಶಿಸಲಿಲ್ಲ ಹಾಗೂ ಚುನಾವಣೆಗೆ ನಿಲ್ಲಲಿಲ್ಲ. ಇಂತಹವರು ಚುನಾವಣೆಗೆ ಸ್ಪರ್ಧಿಸುವುದು, ಸಾಂಪ್ರದಾಯಿಕ ಪಕ್ಷಗಳ ಹಣಬಲಕ್ಕೆ ತೀವ್ರ ಪೈಪೋಟಿ ನೀಡುವುದು ಇಲ್ಲಿಯವರೆಗೂ ಕಷ್ಟಕರವಾಗಿತ್ತು ಎಂದು ನುಡಿದರು. ಈಗ ಎಎಪಿ ಎಲ್ಲವನ್ನೂ ಬದಲಾಯಿಸಿದೆ. ಸಾಮಾನ್ಯ ಹಿನ್ನೆಲೆಯ ಪ್ರಾಮಾಣಿಕ ಜನರನ್ನು ನಾವು ರಾಜಕೀಯಕ್ಕೆ ಕರೆತಂದಿದ್ದೇವೆ. ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಿದ್ದೇವೆ ಎಂದರು.

ಜಯಗಳಿಸದ ನಂತರ ಶೇ.100ರಷ್ಟು ಭ್ರಷ್ಟಾಚಾರ ರಹಿತ ಆಡಳಿತ ನೀಡುವುದು ಮಾತ್ರವಲ್ಲದೇ, ಪ್ರತಿಯೊಬ್ಬ ನಾಗರಿಕನಿಗಿರುವ ಕನಸು ಕಾಣುವ ಹಾಗೂ ಬೆಳೆಯುವ ಹಕ್ಕುಗಳನ್ನು ಕಾಪಾಡುವುದಾಗಿ ಇವರು ಖಚಿತ ಪಡಿಸಿದ್ದಾರೆ. ಆಮ್‌ ಆದ್ಮಿ ಪಾರ್ಟಿಯು ಇಂದು ದೇಶದ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಕ್ಷವಾಗಿದ್ದು, ಅನೇಕ ರಾಜ್ಯಗಳಲ್ಲಿ ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳ ವಿರುದ್ಧ ಸ್ಪರ್ಧಿಸಲು ಮತ್ತು ಗೆಲ್ಲಲು ಸಮರ್ಥವಾಗಿದೆ ಎಂದು ಅಭಿಪ್ರಾಯಪಟ್ಟರು.

2500 ವರ್ಷಗಳ ಹಿಂದೆ, ಗ್ರೀಕರು ಪ್ರಜಾಪ್ರಭುತ್ವವನ್ನು ಅನುಸರಿಸಲು ಆರಂಭಿಸಿದಾಗ, ಅವರು ಸಮಾಜದ ಎಲ್ಲಾ ವರ್ಗದ ಜನರು ಸಾರ್ವಜನಿಕ ಪ್ರತಿನಿಧಿಗಳಾಗಲು ಪೂರಕವಾದ ವ್ಯವಸ್ಥೆಯನ್ನು ಬಳಸಿದರು. ಸಾಮಾನ್ಯ ಜನರು ತಾವು ಅಭ್ಯರ್ಥಿಯಾಗಬೇಕೆಂದು ಬಯಸುತ್ತಿದ್ದರು ಹಾಗೂ ನಂತರ ಆ ಗುಂಪಿನಿಂದ ಯಾರಾದರೂ ಒಬ್ಬರನ್ನು ಜನಪ್ರತಿನಿಧಿಯನ್ನಾಗಿ ಆಯ್ಕೆ ಮಾಡಲಾಗುತ್ತಿತ್ತು. ಪ್ರತಿಯೊಬ್ಬರೂ ಜನಪ್ರತಿನಿಧಿಗಳಾಗಲು ಸಮರ್ಥರು ಎಂದು ನಂಬಲಾಗಿತ್ತು. ಇಂದು ಭಾರತದಲ್ಲಿ, ಎಎಪಿಯನ್ನು ಒಂದು ವೇದಿಕೆಯಾಗಿ ಬಳಸಿಕೊಂಡು ಜನಸಾಮಾನ್ಯರು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಹಾಗೂ ಜನರನ್ನು ಪ್ರತಿನಿಧಿಸಬಹುದು ಎಂದು ಹೇಳಿದರು.

ನಮ್ಮದು ಯುವ ದೇಶವಾಗಿದ್ದು, ಯುವಕರು ತಮ್ಮ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಧ್ವನಿ ಹೊಂದಿರಬೇಕು. ನಮ್ಮ ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಯುವ ಸ್ಪರ್ಧಿಗಳು. ಇವರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನರು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ನಮ್ಮ ರಾಜ್ಯದ ಅರ್ಧಕ್ಕಿಂತಲೂ ಹೆಚ್ಚಿನ ಭಾಗ ಕೃಷಿಯನ್ನು ಅವಲಂಬಿಸಿದೆ. ಆದರೆ, ನಮ್ಮ ವಿಧಾನಸಭೆಯಲ್ಲಿ ರೈತರಿಗೆ ಪ್ರಾತಿನಿಧ್ಯವಿಲ್ಲ. ನಮ್ಮ ಮೊದಲ ಪಟ್ಟಿಯಲ್ಲಿ 7 ರೈತರು ಇರುವುದು ನಮಗೆ ಖುಷಿ ತಂದಿದೆ ಎಂದು ಹೇಳಿದರು.

ನಮ್ಮ ಜನಸಂಖ್ಯೆಯ ಶೇ.50ರಷ್ಟು ಮಹಿಳೆಯರು, ಮತ್ತು ಬೇರೆ ಪಕ್ಷಗಳು ಅವರನ್ನು ನಾಮನಿರ್ದೇಶನ ಮಾಡದ ಕಾರಣ ಮಹಿಳೆಯರಿಗೆ ಸಾರ್ವಜನಿಕ ಹುದ್ದೆಯನ್ನು ಪಡೆಯುವುದು ಕಷ್ಟವಾಗಿದೆ. ನಮ್ಮ ಮೊದಲ ಪಟ್ಟಿಯಲ್ಲಿ 7 ಮಹಿಳೆಯರಿದ್ದಾರೆ ಎನ್ನುಲು ನಾವು ಸಂತೋಷಪಡುತ್ತೇವೆ ಮತ್ತು ನಮ್ಮ ಮುಂದಿನ ಪಟ್ಟಿಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ರಾಜ್ಯದ ಜನರಿಗೆ ಹೆಚ್ಚಿನ ರೀತಿಯಲ್ಲಿ ಸೇವೆ ಸಲ್ಲಿಸಲು ಸಾಮಾಜಿಕ ಕಾರ್ಯಕರ್ತರು ಎಎಪಿಯನ್ನು ಒಂದು ವೇದಿಕೆಯಾಗಿ ದೇಶಾದ್ಯಂತ ಸಾಮಾಜಿಕ ಕಾರ್ಯಕರ್ತರು ಹೆಚ್ಚಾಗಿ ನೋಡುತ್ತಾರೆ. ನಮ್ಮ ಮೊದಲ ಪಟ್ಟಿಯಲ್ಲಿ 5 ಸಾಮಾಜಿಕ ಕಾರ್ಯಕರ್ತರು ಇದ್ದಾರೆ ಎಂದು ಪೃಥ್ವಿ ರೆಡ್ಡಿ ಮಾಹಿತಿ ನೀಡಿದರು.

ಮಾಧ್ಯಮಗೋಷ್ಟಿಯಲ್ಲಿ ಪಕ್ಷದ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸೇರಿದಂತೆ ಹಲವು ನಾಯಕರುಗಳು ಭಾಗವಹಿಸಿದ್ದರು.

ಕ್ಷೇತ್ರ - ಅಭ್ಯರ್ಥಿಯ ಹೆಸರು

* ತೇರದಾಳ - ಅರ್ಜುನ ಹಲಗಿಗೌಡರ
* ಬಾದಾಮಿ - ಶಿವರಾಯಪ್ಪ ಜೋಗಿನ
* ಬಾಗಲಕೋಟೆ - ರಮೇಶ ಬದ್ನೂರ
* ಅಥಣಿ - ಸಂಪತ್ ಕುಮಾರ ಶೆಟ್ಟಿ
* ಬೈಲಹೊಂಗಲ - ಬಿ.ಎಂ.ಚಿಕ್ಕನಗೌಡರ
* ರಾಮದುರ್ಗ - ಮಲ್ಲಿಕಜಾನ್‌ ನದಾಫ
* ಹುಬ್ಬಳ್ಳಿ-ದಾರವಾಡ ಪೂರ್ವ - ಬಸವರಾಜ ಎಸ್‌ ತೇರದಾಳ
* ಹುಬ್ಬಳ್ಳಿ-ಧಾರವಾಡ ಕೇಂದ್ರ - ವಿಕಾಸ ಸೊಪ್ಪಿನ
* ಕಲಘಟಗಿ - ಮಂಜುನಾಥ ಜಕ್ಕಣ್ಣವರ
* ರೋಣ - ಆನೇಕಲ್‌ ದೊಡ್ಡಯ್ಯ
* ಬ್ಯಾಡಗಿ - ಎಂ.ಎನ್.‌ ನಾಯಕ
* ರಾಣೆಬೆನ್ನೂರು - ಹನುಮಂತಪ್ಪ ಕಬ್ಬಾರ
* ಬಸವಕಲ್ಯಾಣ - ದೀಪಕ ಮಲಗಾರ
* ಹುಮನಾಬಾದ - ಬ್ಯಾಂಕ್‌ ರೆಡ್ಡಿ
* ಬೀದರ ದಕ್ಷಿಣ - ನಸೀಮುದ್ದಿನ್‌ ಪಟೇಲ
* ಭಾಲ್ಕಿ - ತುಕಾರಾಮ ನಾರಾಯಣರಾವ್ ಹಜಾರೆ
* ಔರಾದ - ಬಾಬುರಾವ್​ ಅಡ್ಕೆ
* ಗುಲ್ಬರ್ಗ ಗ್ರಾಮೀಣ - ಡಾ.ರಾಘವೇಂದ್ರ ಚಿಂಚನಸೂರ
* ಗುಲ್ಬರ್ಗ ದಕ್ಷಿಣ - ಸಿದ್ದರಾಮ ಅಪ್ಪಾರಾವ ಪಾಟೀಲ
* ಗುಲ್ಬರ್ಗ ಉತ್ತರ - ಸಯ್ಯದ್‌ ಸಜ್ಜಾದ್‌ ಅಲಿ
* ಇಂಡಿ - ಗೋಪಾಲ ಆರ್‌ ಪಾಟೀಲ
* ಗಂಗಾವತಿ - ಶರಣಪ್ಪ ಸಜ್ಜಿಹೊಲ
* ರಾಯಚೂರು ಗ್ರಾಮೀಣ - ಡಾ.ಸುಭಾಶಚಂದ್ರ ಸಾಂಭಾಜಿ
* ರಾಯಚೂರು - ಡಿ.ವೀರೇಶ ಕುಮಾರ ಯಾದವ
* ಮಾನ್ವಿ - ರಾಜಾ ಶಾಮಸುಂದರ ನಾಯಕ
* ಲಿಂಗಸುಗೂರು - ಶಿವಪುತ್ರ ಗಾಣದಾಳ
* ಸಿಂಧನೂರು - ಸಂಗ್ರಾಮ ನಾರಾಯಣ ಕಿಲ್ಲೇದ
* ವಿಜಯನಗರ - ಡಿ.ಶಂಕರದಾಸ
* ಕೂಡ್ಲಿಗಿ - ಶ್ರೀನಿವಾಸ ಎನ್
* ಹರಪನಹಳ್ಳಿ - ನಾಗರಾಜ.ಎಚ್‌
* ಚಿತ್ರಗುರ್ಗ - ಜಗದೀಶ ಬಿ.ಇ
* ಜಗಳೂರು - ಗೋವಿಂದರಾಜು
* ಹರಿಹರ - ಗಣೇಶಪ್ಪ ದುರ್ಗದ
* ದಾವಣಗೆರೆ ಉತ್ತರ - ಶ್ರೀಧರ ಪಾಟೀಲ
* ತುರುವೇಕೆರೆ - ಟೆನ್ನಿಸ್‌ ಕೃಷ್ಣ
* ಕುಣಿಗಲ್‌ - ಜಯರಾಮಯ್ಯ
* ಗುಬ್ಬಿ - ಪ್ರಭುಸ್ವಾಮಿ
* ಸಿರಾ - ಶಶಿಕುಮಾರ್
* ಪಾವಗಡ - ರಾಮಾಂಜನಪ್ಪ ಎನ್
* ಶೃಂಗೇರಿ - ರಾಜನ್‌ ಗೌಡ ಎಚ್.ಎಸ್‌
* ಹಾಸನ - ಅಗಿಲೆ ಯೋಗೀಶ್‌
* ಭದ್ರಾವತಿ - ಆನಂದ
* ಶಿವಮೊಗ್ಗ - ನೇತ್ರಾವತಿ ಟಿ
* ಸಾಗರ - ಕೆ.ದಿವಾಕರ
* ಮೂಡಬಿದ್ರಿ - ವಿಜಯನಾಥ ವಿಠಲ ಶೆಟ್ಟಿ
* ಮಂಗಳೂರು ನಗರ ದಕ್ಷಿಣ - ಸಂತೋಷ್‌ ಕಾಮತ
* ಸುಳ್ಯ - ಸುಮನಾ
* ಕಾರ್ಕಳ - ಡ್ಯಾನಿಯಲ್
* ಶಿರಸಿ - ಹಿತೇಂದ್ರ ನಾಯಕ
* ಮಳವಳ್ಳಿ - ಬಿಸಿ ಮಹದೇವಸ್ವಾಮಿ
* ಮಂಡ್ಯ - ಬೊಮ್ಮಯ್ಯ
* ಪಿರಿಯಾಪಟ್ಟಣ - ರಾಜಶೇಖರ್‌ ದೊಡ್ಡಣ್ಣ
* ಚಾಮರಾಜ - ಮಾಲವಿಕಾ ಗುಬ್ಬಿವಾಣಿ
* ನರಹಿಂಹರಾಜ - ಧರ್ಮಶ್ರೀ
* ಟಿ. ನರಸಿಪುರ - ಸಿದ್ದರಾಜು
* ಮಾಗಡಿ - ರವಿಕಿರಣ್‌ ಎಂ.ಎನ್
* ರಾಮನಗರ - ನಂಜಪ್ಪ ಕಾಳೇಗೌಡ
* ಕನಕಪುರ - ಪುಟ್ಟರಾಜು ಗೌಡ
* ಚನ್ನಪಟ್ಟಣ - ಶರತ್ ಚಂದ್ರ
* ದೇವನಹಳ್ಳಿ - ಶಿವಪ್ಪ ಬಿ.ಕೆ
* ದೊಡ್ಡಬಳ್ಳಾಪುರ - ಪುರುಷೋತ್ತಮ
* ನೆಲಮಂಗಲ - ಗಂಗಬೈಲಪ್ಪ ಬಿ.ಎಂ
* ಬಾಗೇಪಲ್ಲಿ - ಮಧುಸೀತಪ್ಪ
* ಚಿಂತಾಮಣಿ - ಸಿ.ಬೈರೆಡ್ಡಿ
* ಕೊಲಾರ್‌ ಗೋಲ್ಡ್‌ ಫೀಲ್ಡ್‌ - ಆರ್.‌ಗಗನ ಸುಕನ್ಯ
* ಮಾಲೂರು - ರವಿಶಂಕರ್‌.ಎಂ
* ದಾಸರಹಳ್ಳಿ - ಕೀರ್ತನ್‌ ಕುಮಾರ
* ಮಹಾಲಕ್ಷ್ಮಿ ಬಡಾವಣೆ - ಶಾಂತಲಾ ದಾಮ್ಲೆ
* ಮಲ್ಲೇಶ್ವರ - ಸುಮನ್ ಪ್ರಶಾಂತ್‌
* ಹೆಬ್ಬಾಳ - ಮಂಜುನಾಥ ನಾಯ್ಡು
* ಪುಲಕೇಶಿನಗರ - ಸುರೇಶ್‌ ರಾಥೋಡ್‌
* ಸಿ.ವಿ. ರಾಮನ್‌ ನಗರ - ಮೋಹನ ದಾಸರಿ
* ಶಿವಾಜಿನಗರ - ಪ್ರಕಾಶ್‌ ನೆಡುಂಗಡಿ
* ಶಾಂತಿನಗರ - ಕೆ ಮಥಾಯ್
* ರಾಜಾಜಿನಗರ - ಬಿಟಿ ನಾಗಣ್ಣ
* ವಿಜಯನಗರ - ಡಾ.ರಮೇಶ್‌ ಬೆಲ್ಲಂಕೊಂಡ
* ಚಿಕ್ಕಪೇಟೆ - ಬ್ರಿಜೇಶ್‌ ಕಾಳಪ್ಪ
* ಪದ್ಮನಾಭನಗರ - ಅಜಯ್‌ ಗೌಡ
* ಬಿ.ಟಿ.ಎಂ ಬಡಾವಣೆ - ಶ್ರೀನಿವಾಸ್‌ ರೆಡ್ಡಿ
* ಬೊಮ್ಮನಹಳ್ಳಿ - ಸೀತಾರಾಮ್‌ ಗುಂಡಪ್ಪ

ಇದನ್ನೂ ಓದಿ: ಕಾಂಗ್ರೆಸ್​ನಿಂದ 4ನೇ ಗ್ಯಾರಂಟಿ ಘೋಷಣೆ: ಯುವಕ, ಯುವತಿಯರಿಗೆ ಪ್ರತಿ ತಿಂಗಳು 3 ಸಾವಿರ ರೂ. ನಿರುದ್ಯೋಗ ಭತ್ಯೆ

Last Updated : Mar 20, 2023, 6:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.