ಬೆಂಗಳೂರು: ನಿರ್ಮಲಾನಂದನಾಥ ಶ್ರೀಗಳ ಫೋನ್ ಕದ್ದಾಲಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿಎಮ್ ಅಶ್ವತ್ ನಾರಾಯಣ್, ಇದರ ಬಗ್ಗೆ ಮಾತನಾಡಿದ್ರೆ ದ್ವೇಷದ ರಾಜಕೀಯ ಅಂತಾರೆ. ಅವರವರು ಮಾಡಿರುವ ಕರ್ಮವನ್ನು ಅವರೇ ಅನುಭವಿಸಕೆಂದು ಉತ್ತರಿಸಿದರು.
ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನಡೆದ ವಿಶ್ವ ಹೃದಯದಿನ ಕಾರ್ಯಕ್ರವನ್ನು ಉದ್ಘಾಟಿಸಿದ ಡಿಸಿಎಂ ಸ್ವಾಮಿಗಳ ಪೋನ್ ಟ್ಯಾಪಿಂಗ್ ವಿಚಾರವಾಗಿ ಮಾತನಾಡಿ, ಶ್ರೀಗಳ ಫೋನ್‌ಅನ್ನೇ ಅವರ ಡ್ರೈವರ್, ಅಸಿಸ್ಟೆಂಟ್ಸ್ ಎಲ್ಲಾ ಕದ್ದಾಲಿಕೆ ಮಾಡಿದ್ದಾರೆಂದು ಮಾಧ್ಯಮಗಳಲ್ಲಿ ಬಂದಿದೆ. ಅದು ಅಧಿಕೃತವಾಗಿ ಬರಲಿ ಯಾಕೆಂದ್ರೆ ಈಗ ಮಾಧ್ಯಮಗಳ ವರದಿಯನ್ನು ತಳ್ಳಿ ಹಾಕುತ್ತಾರೆ. ಅವರು ಟ್ಯಾಪಿಂಗ್ ಮಾಡಿರುವುದು ನಿಜ ಎಂದರು.
ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ಏನಾಗಿತ್ತೆಂದು ಗೊತ್ತಿದೆ, ಇದು ಮತ್ತೆ ರಿಪೀಟ್ ಆಗ್ತಿದೆ. ಅವರು ಮಾಡಿರುವ ಕೃತ್ಯ ಎಲ್ಲರಿಗೂ ತಿಳಿಯುತ್ತಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಹುದ್ದೆಯನ್ನು ಸಂಪೂರ್ಣವಾಗಿ ದುರುಪಯೋಗ ಪಡಿಸಿಕೊಂಡಿದ್ದಾರೆ. ಫೋನ್ ಟ್ಯಾಪಿಂಗ್ ಒಂದು ಸ್ವಾರಸ್ಯಕರ ವಿಚಾರವಾಗಿದ್ದು, ಕೀಳುಮಟ್ಟದಲ್ಲಿ ಪೋನ್ ಕದ್ದಾಲಿಕೆ ಮಾಡೋದು ಕಲಿತಿದ್ದಾರೆ. ಅವರು ಮಾಡಿರೋ ಕಾರ್ಯಕ್ಕೆ ಶಿಕ್ಷೆಯನ್ನು ಅನುಭವಿಸಬೇಕಾಗುತ್ತೆ. ಮಹಾನ್ ವ್ಯಕ್ತಿಗಳು ನಡೆಸುತ್ತಿದ್ದ ಕಾರ್ಯಗಳು ಈಗ ಜನರಿಗೆ ಗೊತ್ತಾಗುತ್ತಿದೆಯೆಂದು ತಿಳಿಸಿದರು. ಇದು ಕಾನುನು ಬಾಹಿರ ವಿಷಯ ,ಇದಕ್ಕೆ ಉತ್ತರ ಕೊಡಬೇಕಾಗುತ್ತೆ ಅಲ್ಲದೆ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆಯೆಂದು ಪ್ರತಿಕ್ರಿಯಿಸಿದ್ದಾರೆ.