ETV Bharat / state

ದೇವರ ದರ್ಶನಕ್ಕೆ ಹೋಗುತ್ತಿದ್ದ ಭಕ್ತರೇ ಈಕೆಗೆ ಟಾರ್ಗೆಟ್: ಖತರ್ನಾಕ್ ಲೇಡಿಯ ಬಂಧನ, ಬಾಯ್ ಫ್ರೆಂಡ್ ಎಸ್ಕೇಪ್ - Latest Crime News

ಯಾತ್ರಾರ್ಥಿಗಳ ಬ್ಯಾಗ್​ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಲೇಡಿಯನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಕದ್ದ ಆಭರಣವನ್ನು ಅಡವಿಡಲು ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಸಹಚರನನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.

A Woman Arrested In Bag Theft Case At Bengaluru

author img

By

Published : Aug 31, 2021, 10:22 PM IST

ಬೆಂಗಳೂರು: ದೇವರ ದರ್ಶನಕ್ಕೆ ಹೋಗುತ್ತಿದ್ದ ಭಕ್ತರನ್ನು ಟಾರ್ಗೆಟ್ ಮಾಡುತ್ತಿದ್ದ ಕಳ್ಳ ಜೋಡಿಯಲ್ಲಿ ಒಬ್ಬಳನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ದಾಳಿ ವೇಳೆ ಆಕೆಯ ಬಾಯ್ ಫ್ರೆಂಡ್ ಕಂ ಸಹಚರ ಮಹದೇವ ಎಸ್ಕೇಪ್ ಆಗಿದ್ದು ಬಂಧಿತ ಆರೋಪಿಯಿಂದ 20 ಲಕ್ಷ ರೂ. ಮೌಲ್ಯದ 439 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

A Woman Arrested In Bag Theft Case At Bengaluru
ಬಂಧಿತ ಆರೋಪಿಯಿಂದ ವಶಪಡಿಸಿಕೊಂಡ ಚಿನ್ನಾಭರಣ

ಆಂಧ್ರ ಮೂಲದ ಮಮತಾ (28) ಬಂಧಿತ ಖತರ್ನಾಕ್ ಲೇಡಿ ಎಂದು ತಿಳಿದು ಬಂದಿದೆ. ಪ್ರಕರಣ ಯಶವಂತಪುರ ಠಾಣೆಯಲ್ಲಿ ದಾಖಲಾಗಿದ್ದು ನಗರದಿಂದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳ ಬ್ಯಾಗ್​ಗಳನ್ನೇ ಎಗರಿಸುತ್ತಿದ್ದ ಮಮತಾ ಮತ್ತು ಈಕೆಯ ಗೆಳೆಯ, ದೇವರ ದರ್ಶನ ಪಡೆದು ಪುನೀತರಾಗಬೇಕು ಎನ್ನುವವರ ಬೆಲೆಬಾಳುವ ಕಾಣಿಕೆಗಳನ್ನು ಎಗರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಯಾತ್ರೆಗೆ ತೆರಳುವ ಶ್ರೀಮಂತರನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ಜೋಡಿ ಚಿಕ್ಕ ಅಥವಾ ವ್ಯಾನಿಟಿ ಬ್ಯಾಗ್​ಗಳನ್ನು ಟವೆಲ್​ನಲ್ಲಿ ಸುತ್ತಿಕೊಂಡು ಎಸ್ಕೇಪ್ ಆಗುತ್ತಿದ್ದರು. ಲೇಡಿಯ ಗಂಡ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದು, ಗೆಳೆಯನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಡವಿಡಲು ಬಂದಾಗ ಅಂದರ್:

ಕುಕ್ಕೆಯಲ್ಲಿ ಕದ್ದಿದ್ದ ಚಿನ್ನಾಭರಣವನ್ನು ಚಿನ್ನದ ಅಂಗಡಿಯಲ್ಲಿ ಅಡವಿಡಲು ಬೆಂಗಳೂರಿಗೆ ಆಗಮಿಸಿದಾಗ ಕಳ್ಳ ಜೋಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದೆ. ಅನುಮಾನಾಸ್ಪದವಾಗಿ ಓಡಾಡುತ್ತಿದ್ದವರನ್ನು ಹಿಡಿದ ಯಶವಂತಪುರ ಪೊಲೀಸರು ವಿಚಾರಣೆ ನಡೆಸಿದಾಗ ಯಾತ್ರಾರ್ಥಿಗಳ ಚಿನ್ನಾಭರಣ ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ

ಕುಕ್ಕೆಯಲ್ಲಿ ಒಂದು ಪ್ರಕರಣ:

ಕುಕ್ಕೆ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಈಗಾಗಲೇ ಒಂದು ಪ್ರಕರಣ ದಾಖಲಾಗಿತ್ತು. ಇದೀಗ ಉತ್ತರ ವಿಭಾಗದ ಯಶವಂತಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡ್ಡಿದ್ದು, ಸಹಚರನನ್ನು ಬಂಧಿಸಲು ಬಲೆ ಬೀಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.