ETV Bharat / state

ನಾಳೆ ವಿಧಾನಸಭೆಯಲ್ಲಿ ವಿಶ್ವಾಸ ಮತ ಪ್ರಸ್ತಾಪ, ಚರ್ಚೆ ಅಷ್ಟೆ: ಮತದಾನ ಅನುಮಾನ!?

ವಿಧಾನಸಭೆ ವಿಶ್ವಾಸ ಮತ ಮಂಡನೆ ಹಾಗೂ ಚರ್ಚೆ ಮಾತ್ರ ನಾಳೆ ನಡೆಯಲಿದೆ. ಮತದಾನವಾಗುವ ಸಾಧ್ಯತೆ ಬಹಳ ಕಡಿಮೆ ಇದೆ. ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ಎದುರಿಸಿದ ಸವಾಲು, ಸರ್ಕಾರ ಉಳಿಸಲು ಕೈಗೊಂಡ ನಿರ್ಧಾರ, ಮಾಡಿದ ತ್ಯಾಗ, ಆರೋಗ್ಯ ಸಮಸ್ಯೆಯನ್ನೂ ಲೆಕ್ಕಿಸದೇ ತಾವು ಸರ್ಕಾರ ಮುನ್ನಡೆಸಿದ ರೀತಿ, ಪ್ರತಿಪಕ್ಷ ನೀಡಿದ ಗೋಳು, ಇತ್ಯಾದಿ ವಿಚಾರವನ್ನು ಸಿಎಂ ನಾಳೆ ಸದನದಲ್ಲಿ ಪ್ರಸ್ತಾಪಿಸಲಿದ್ದಾರೆ.

ಮತದಾನ ಅನುಮಾನ
author img

By

Published : Jul 17, 2019, 9:26 PM IST

ಬೆಂಗಳೂರು: ವಿಧಾನಸಭೆ ವಿಶ್ವಾಸ ಮತ ಮಂಡನೆ ಹಾಗೂ ಚರ್ಚೆ ಮಾತ್ರ ನಾಳೆ ನಡೆಯಲಿದೆ. ಮತದಾನವಾಗುವ ಸಾಧ್ಯತೆ ಬಹಳ ಕಡಿಮೆ ಇದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಾಳೆ ಸದನದಲ್ಲಿ ವಿಶ್ವಾಸಮತ ಯಾಚನೆಯ ಪ್ರಸ್ತಾಪ ಮಂಡಿಸಲಿದ್ದಾರೆ. ಚರ್ಚೆಗೆ ಸ್ಪೀಕರ್ ರಮೇಶ್ ಕುಮಾರ್ ಅವಕಾಶ ಮಾಡಿಕೊಡಲಿದ್ದಾರೆ.

ಪ್ರಸ್ತಾಪ ಮಂಡಿಸಿದ ಸಿಎಂ ಕುಮಾರಸ್ವಾಮಿ ಸುದೀರ್ಘವಾಗಿ ಭಾಷಣ ಮಾಡಲಿದ್ದಾರೆ ಎನ್ನಲಾಗುತ್ತಿದೆ. ರಾಜ್ಯ ಮೈತ್ರಿ ಸರ್ಕಾರ ರಚನೆಯಾದ ನಂತರ ಒಂದು ವರ್ಷದಲ್ಲಿ ಆಗಿರುವ ಸಾಧನೆ, ಪ್ರತಿಪಕ್ಷ ಬಿಜೆಪಿ ನೀಡಿದ ಸಮಸ್ಯೆ, ಆರನೇ ಸಾರಿ ನಡೆಸುತ್ತಿರುವ ಆಪರೇಷನ್ ಕಮಲ, ಸರ್ಕಾರ ಕೆಡವಲು, ಆತಂಕಕ್ಕೆ ಒಳಪಡಿಸಲು ನಡೆಸಿದ ಯತ್ನ, ಇದೆಲ್ಲ ಸಮಸ್ಯೆ ನಡುವೆಯೂ ಸಾಲಮನ್ನಾ, ಹಿಂದಿನ ಸರ್ಕಾರದ ಜನಪ್ರಿಯ ಯೋಜನೆ ಮುಂದುವರಿಸಿರುವುದು ಸೇರಿದಂತೆ ಹಲವು ಕಾರ್ಯಗಳ ಕುರಿತು ಸುದೀರ್ಘ ಭಾಷಣ ಮಾಡಲಿದ್ದಾರೆ.

ಆಡಳಿತ ಪಕ್ಷದ ಪರ ಯಾರಾರು ಮಾತನಾಡಲಿದ್ದಾರೆ:

ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ಎದುರಿಸಿದ ಸವಾಲು, ಸರ್ಕಾರ ಉಳಿಸಲು ಕೈಗೊಂಡ ನಿರ್ಧಾರ, ಮಾಡಿದ ತ್ಯಾಗ, ಆರೋಗ್ಯ ಸಮಸ್ಯೆಯನ್ನೂ ಲೆಕ್ಕಿಸದೇ ತಾವು ಸರ್ಕಾರ ಮುನ್ನಡೆಸಿದ ರೀತಿ, ಪ್ರತಿಪಕ್ಷ ನೀಡಿದ ಗೋಳು, ಇತ್ಯಾದಿ ವಿಚಾರವನ್ನು ಸಿಎಂ ಪ್ರಸ್ತಾಪಿಸಲಿದ್ದಾರೆ. ಸುದೀರ್ಘ ಭಾಷಣವನ್ನು ವಿಶ್ವಾಸಮತ ಮಂಡಿಸಿ ತಮ್ಮ ಸಮ್ಮಿಶ್ರ ಸರ್ಕಾರದ ಪರ ಶಾಸಕರು ಮತ ನೀಡಬೇಕೆಂದು ಮನವಿ ಮಾಡಲಿದ್ದಾರೆ. ಉಳಿದವರ ಭಾಷಣ ಸಿಎಂ ಭಾಷಣ ಮಾಡಿದ ನಂತರ ಆಡಳಿತ ಪಕ್ಷದ ಪರವಾಗಿ ನಾಯಕರು ಮಾತನಾಡಲಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ಗೃಹ ಸಚಿವ ಎಂ.ಬಿ. ಪಾಟೀಲ್, ಕೆ.ಜೆ. ಜಾರ್ಜ್, ಡಿ.ಕೆ.ಶಿವಕುಮಾರ್, ಕೃಷ್ಣ ಬೈರೇಗೌಡ, ಆರ್.ವಿ. ದೇಶಪಾಂಡೆ, ಕೆಪಿಸಿಸಿ ಅಧ್ಯಕ್ಷ ಹಾಗೂ ಶಾಸಕ ದಿನೇಶ್ ಗಂಡೂರಾವ್, ಲಕ್ಷ್ಮಿ ಹೆಬ್ಬಾಳ್ಕರ್, ಸೌಮ್ಯ ರೆಡ್ಡಿ, ಜೆಡಿಎಸ್ ಪಕ್ಷದಿಂದ ಸಚಿವರಾದ ಎಚ್.ಡಿ. ರೇವಣ್ಣ, ಜಿ.ಟಿ. ದೇವೇಗೌಡ, ಬಂಡೆಪ್ಪ ಕಾಶೆಂಪೂರ್, ಕೆ. ಅನ್ನದಾನಿ ಮತ್ತಿತರ ನಾಯಕರು ಮಾತನಾಡಲಿದ್ದಾರೆ.

ಬಿಜೆಪಿಯಲ್ಲಿ ಈ ನಾಯಕರು ಭಾಷಣ ಮಾಡ್ತಾರೆ:

ಬಿಜೆಪಿ ಕಡೆಯಿಂದ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ, ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ಮಾಧುಸ್ವಾಮಿ, ಬಸವರಾಜ ಬೊಮ್ಮಾಯಿ, ಆರ್. ಅಶೋಕ್ ಮತ್ತಿತರರು ಮಾತನಾಡಲಿದ್ದಾರೆ. ಒಟ್ಟಿನಲ್ಲಿ ಸದನ ಕಲಾಪ ಗುರುವಾರ ದಿನವಿಡೀ ಅಲ್ಲದೇ ಶುಕ್ರವಾರವೂ ಕಲಾಪ ನಡೆಯುವ ಸಾಧ್ಯತೆಗಳೇ ಹೆಚ್ಚು ಎನ್ನಲಾಗುತ್ತಿದೆ.

ಯಾವುದೇ ಗಲಾಟೆ ಮಾಡದಿರಲು ಕಮಲ ಕಲಿಗಳ ನಿರ್ಧಾರ:

ಬಿಜೆಪಿ ಸದಸ್ಯರು ಯಾವುದೇ ಕಾರಣಕ್ಕೂ ಗಲಾಟೆ ನಡೆಸದಿರಲು, ಬಹಿಷ್ಕರಿಸದಿರಲು, ವಾದ ಮಂಡಿಸದಿರಲು ನಿರ್ಧರಿಸಿದ್ದಾರೆ. ಇದರಿಂದ ಶುಕ್ರವಾರ ಮಧ್ಯಾಹ್ನದವರೆಗೆ ಸದನ ಚರ್ಚೆಗೆ ಸೀಮಿತಗೊಳಿಸುವ ಉದ್ದೇಶ ಮೈತ್ರಿ ಸರ್ಕಾರದ್ದು. ಶುಕ್ರವಾರ ಮಧ್ಯಾಹ್ನದ ನಂತರದ ಅವಧಿ, ಶನಿವಾರ ಹಾಗೂ ಭಾನುವಾರ ಪೂರ್ಣ ದಿನ ಅವಕಾಶ ಸಿಗಲಿದೆ. ಅತೃಪ್ತರ ಮನವೊಲಿಕೆಗೆ ಇನ್ನಷ್ಟು ಯತ್ನ ನಡೆಸಲು ಮೈತ್ರಿ ಸರ್ಕಾರ ಚಿಂತನೆ ನಡೆಸಿದೆ.

ಬಹುಮತ ಸಾಬೀತು ಮನವರಿಕೆಯಾದರಷ್ಟೇ ಮತಕ್ಕೆ.... ಇಲ್ಲದಿದ್ದರೆ ರಾಜಭವನದತ್ತ

ಒಂದೊಮ್ಮೆ ಅತೃಪ್ತರ ಮನವೊಲಿಕೆ ಸಾಧ್ಯವಾಗದಿದ್ದರೆ ಸೋಮವಾರ ಬೆಳಗ್ಗೆ ಕುಮಾರಸ್ವಾಮಿ ಇನ್ನೊಮ್ಮೆ ಭಾಷಣ ನಡೆಸಿ, ಪ್ರತಿಪಕ್ಷ ಬಿಜೆಪಿ, ಕೇಂದ್ರ ಎನ್​​ಡಿಎ ಸರ್ಕಾರದ ವಿರುದ್ಧ ಸುದೀರ್ಘ ಭಾಷಣ ಮಾಡಿ, ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕದೇ ವಿದಾಯ ಭಾಷಣ ಮಾಡಿ ನೇರವಾಗಿ ರಾಜೀನಾಮೆ ನೀಡುವುದಾಗಿ ಘೋಷಿಸಿ ರಾಜ್ಯಪಾಲರ ಬಳಿ ಕೂಡ ತೆರಳಬಹುದು. ವಿಶ್ವಾಸಗಳಿಸುವ ಅವಕಾಶ ಇದ್ದರೆ ಮಾತ್ರ ಮತಕ್ಕೆ ಹಾಕುವ ಯತ್ನ ಮಾಡಲಿದ್ದಾರೆ ಎಂಬ ಮಾಹಿತಿ ಇದೆ.

Intro:NEWSBody:ನಾಳೆ ವಿಧಾನಸಭೆಯಲ್ಲಿ ವಿಶ‍್ವಾಸ ಮತ ಪ್ರಸ್ತಾಪ, ಚರ್ಚೆ ಅಷ್ಟೆ; ಮತದಾನ ಅನುಮಾನ

ಬೆಂಗಳೂರು: ವಿಧಾನಸಭೆ ವಿಶ್ವಾಸ ಮತ ಮಂಡನೆ ಹಾಗೂ ಚರ್ಚೆ ಮಾತ್ರ ನಾಳೆ ನಡೆಯಲಿದೆ. ಮತದಾನವಾಗುವ ಸಾಧ್ಯತೆ ಬಹಳ ಕಡಿಮೆ ಇದೆ.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಾಳೆ ಸದನದಲ್ಲಿ ವಿಶ್ವಾಸ ಮತ ಯಾಚನೆಯ ಪ್ರಸ್ತಾಪ ಮಂಡಿಸಲಿದ್ದಾರೆ. ಚರ್ಚೆಗೆ ಸ್ಪೀಕರ್ ರಮೇಶ್ ಕುಮಾರ್ ಅವಕಾಶ ಮಾಡಿಕೊಡಲಿದ್ದಾರೆ. ಪ್ರಸ್ತಾಪ ಮಂಡಿಸಿದ ಸಿಎಂ ಕುಮಾರಸ್ವಾಮಿ ಸುದೀರ್ಘವಾಗಿ ಭಾಷಣ ಮಾಡಲಿದ್ದಾರೆ.
ರಾಜ್ಯ ಮೈತ್ರಿ ಸರ್ಕಾರ ರಚನೆಯಾದ ನಂತರ ಒಂದು ವರ್ಷದಲ್ಲಿ ಆಗಿರುವ ಸಾಧನೆ, ಪ್ರತಿಪಕ್ಷ ಬಿಜೆಪಿ ನೀಡಿದ ಸಮಸ್ಯೆ, ಆರನೇ ಸಾರಿ ನಡೆಸುತ್ತಿರುವ ಆಪರೇಷನ್ ಕಮಲ, ಸರ್ಕಾರ ಕೆಡವಲು, ಆತಂಕಕ್ಕೆ ಒಳಪಡಿಸಲು ನಡೆಸಿದ ಯತ್ನ, ಇದೆಲ್ಲಾ ಸಮಸ್ಯೆ ನಡುವೆಯೂ ಸಾಲಮನ್ನಾ, ಹಿಂದಿನ ಸರ್ಕಾರದ ಜನಪ್ರಿಯ ಯೋಜನೆಯನ್ನು ಮುಂದುವರಿಸಿರುವುದು ಸೇರಿದಂತೆ ಹಲವು ಕಾರ್ಯಗಳ ಕುರಿತು ಸುದೀರ್ಘ ಭಾಷಣ ಮಾಡಲಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಎದುರಿಸಿದ ಸವಾಲು, ಸರ್ಕಾರ ಉಳಿಸಲು ಕೈಗೊಂಡ ನಿರ್ಧಾರ, ಮಾಡಿದ ತ್ಯಾಗ, ಆರೋಗ್ಯ ಸಮಸ್ಯೆಯನ್ನೂ ಲೆಕ್ಕಿಸದೇ ತಾವು ಸರ್ಕಾರ ಮುನ್ನಡೆಸಿದ ರೀತಿ, ಪ್ರತಿಪಕ್ಷ ನೀಡಿದ ಗೋಳು, ಇತ್ಯಾದಿ ವಿಚಾರವನ್ನು ಸಿಎಂ ಪ್ರಸ್ತಾಪಿಸಲಿದ್ದಾರೆ. ಸುದೀರ್ಘ ಭಾಷಣವನ್ನು ವಿಶ್ವಾಸಮತ ಮಂಡಿಸಿ ತಮ್ಮ ಸಮ್ಮಿಶ್ರ ಸರ್ಕಾರದ ಪರ ಶಾಸಕರು ಮತ ನೀಡಬೇಕೆಂದು ಮನವಿ ಮಾಡಲಿದ್ದಾರೆ.
ಉಳಿದವರ ಭಾಷಣ
ಸಿಎಂ ಭಾಷಣ ಮಾಡಿದ ನಂತರ ಆಡಳಿತ ಪಕ್ಷದ ಪರವಾಗಿ ನಾಯಕರು ಮಾತನಾಡಲಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ಗೃಹ ಸಚಿವ ಎಂ.ಬಿ. ಪಾಟೀಲ್, ಕೆ.ಜೆ. ಜಾರ್ಜ್, ಡಿ.ಕೆ.ಶಿವಕುಮಾರ್, ಕೃಷ್ಣ ಬೈರೇಗೌಡ, ಆರ್.ವಿ. ದೇಶಪಾಂಡೆ, ಕೆಪಿಸಿಸಿ ಅಧ್ಯಕ್ಷ ಹಾಗೂ ಶಾಸಕ ದಿನೇಶ್ ಗಂಡೂರಾವ್, ಲಕ್ಷ್ಮಿ ಹೆಬ್ಬಾಳ್ಕರ್, ಸೌಮ್ಯ ರೆಡ್ಡಿ, ಜೆಡಿಎಸ್ ಪಕ್ಷದಿಂದ ಸಚಿವರಾದ ಎಚ್.ಡಿ. ರೇವಣ್ಣ, ಜಿ.ಟಿ. ದೇವೇಗೌಡ, ಬಂಡೆಪ್ಪ ಕಾಶೆಂಪೂರ್, ಕೆ. ಅನ್ನದಾನಿ ಮತ್ತಿತರ ನಾಯಕರು ಮಾತನಾಡಲಿದ್ದಾರೆ. ಬಿಜೆಪಿ ಕಡೆಯಿಂದ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ, ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ಮಾಧುಸ್ವಾಮಿ, ಬಸವರಾಜ ಬೊಮ್ಮಾಯಿ, ಆರ್. ಅಶೋಕ್ ಮತ್ತಿತರರು ಮಾತನಾಡಲಿದ್ದಾರೆ.
ಮುಂದೂಡುವ ಯತ್ನ
ಸದನ ಕಲಾಪ ಗುರುವಾರ ದಿನವಿಡೀ ನಡೆಯಲಿದೆ. ಶುಕ್ರವಾರ ಅರ್ಧ ದಿನ ನಡೆಯಲಿದೆ. ಬಿಜೆಪಿ ಸದಸ್ಯರು ಯಾವುದೇ ಕಾರಣಕ್ಕೂ ಗಲಾಟೆ ನಡೆಸದಿರಲು, ಬಹಿಷ್ಕರಿಸದಿರಲು, ವಾದ ಮಂಡಿಸದಿರಲು ನಿರ್ಧರಿಸಿದ್ದಾರೆ. ಇದರಿಂದ ಶುಕ್ರವಾರ ಮಧ್ಯಾಹ್ನದವರೆಗೆ ಸದನ ಚರ್ಚೆಗೆ ಸೀಮಿತಗೊಳಿಸುವ ಉದ್ದೇಶ ಮೈತ್ರಿ ಸರ್ಕಾರದ್ದು. ಶುಕ್ರವಾರ ಮಧ್ಯಾಹ್ನದ ನಂತರದ ಅವಧಿ, ಶನಿವಾರ ಹಾಗೂ ಭಾನುವಾರ ಪೂರ್ಣ ದಿನ ಅವಕಾಶ ಸಿಗಲಿದೆ. ಅತೃಪ್ತರ ಮನವೊಲಿಕೆಗೆ ಇನ್ನಷ್ಟು ಯತ್ನ ನಡೆಸಲು ಮೈತ್ರಿ ಸರ್ಕಾರ ಚಿಂತನೆ ನಡೆಸಿದೆ. ಒಂದೊಮ್ಮೆ ಅತೃಪ್ತರ ಮನವೊಲಿಕೆ ಸಾಧ್ಯವಾಗದಿದ್ದರೆ ಸೋಮವಾರ ಬೆಳಗ್ಗೆ ಕುಮಾರಸ್ವಾಮಿ ಇನ್ನೊಮ್ಮೆ ಭಾಷಣ ನಡೆಸಿ, ಪ್ರತಿಪಕ್ಷ ಬಿಜೆಪಿ, ಕೇಂದ್ರ ಎನ್ಡಿಎ ಸರ್ಕಾರದ ವಿರುದ್ಧ ಸುದೀರ್ಘ ಭಾಷಣ ಮಾಡಿ, ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕದೇ ವಿದಾಯ ಭಾಷಣ ಮಾಡಿ ನೇರವಾಗಿ ರಾಜೀನಾಮೆ ನೀಡುವುದಾಗಿ ಘೋಷಿಸಿ ರಾಜ್ಯಪಾಲರ ಬಳಿ ಕೂಡ ತೆರಳಬಹುದು. ವಿಶ್ವಾಸ ಗಳಿಸುವ ಅವಕಾಶ ಇದ್ದರೆ ಮಾತ್ರ ಮತಕ್ಕೆ ಹಾಕುವ ಯತ್ನ ಮಾಡಲಿದ್ದಾರೆ ಎಂಬ ಮಾಹಿತಿ ಇದೆ.

Conclusion:NEWS

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.