ETV Bharat / state

ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಕ್ಕಿ.. ವೃದ್ಧೆ ಸ್ಥಳದಲ್ಲೇ ಸಾವು; ಮೊಮ್ಮಗನ ಸ್ಥಿತಿ ಗಂಭೀರ - ಪಿಡ್ಬ್ಲೂಡಿ ಅಧಿಕಾರಿಗಳು

ಬೆಂಗಳೂರಿನ ಇಂಡ್ಲವಾಡಿ ಕ್ರಾಸ್​ನಲ್ಲಿ ಬೈಕ್ ಮೇಲೆ ಟಿಪ್ಪರ್ ಲಾರಿ ಹರಿದು ಸ್ಥಳದಲ್ಲಿಯೇ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ.

ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಕ್ಕಿ
ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಕ್ಕಿ
author img

By

Published : May 11, 2023, 3:37 PM IST

ರೈತ ಮುಖಂಡ ಅಶೋಕ್ ರೆಡ್ಡಿ

ಬೆಂಗಳೂರು : ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದವರ ಮೇಲೆ ಟಿಪ್ಪರ್ ಹರಿದು ಸ್ಥಳದಲ್ಲಿಯೇ ಮಹಿಳೆ‌ ಸಾವನ್ನಪ್ಪಿದ್ದು, ಅವರ ಮೊಮ್ಮಗನ ಸ್ಥಿತಿ ಗಂಭೀರವಾಗಿರುವ ಘಟನೆ ಇಂಡ್ಲವಾಡಿ ಕ್ರಾಸ್​ನಲ್ಲಿ ಇಂದು ನಡೆದಿದೆ. ಇಂಡ್ಲವಾಡಿ ವಾಸಿ ನಿಂಗಮ್ಮ(70) ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ಸಂದೀಪ್ ಎಂಬಾತನ ಸೊಂಟ ಮುರಿದು ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಗ್ಗೆ 9ರ ಸುಮಾರಿಗೆ ಇಂಡ್ಲವಾಡಿ ನಿವಾಸಿ ನಿಂಗಮ್ಮ, ತನ್ನ ಮೊಮ್ಮಗ ಸಂದೀಪ್ ಹಾಗೂ ಮೊಮ್ಮಗಳೊಂದಿಗೆ ಪಲ್ಸರ್ ಬೈಕ್​ ಮೇಲೆ ಇಂಡ್ಲವಾಡಿ ಗ್ರಾಮದಿಂದ ಇಂಡ್ಲವಾಡಿ ಕ್ರಾಸ್ ಬಳಿ ಆನೇಕಲ್​ಗೆ ಬರುವ ಸಂದರ್ಭದಲ್ಲಿ ಹಿಂಬದಿಯಿಂದ ಜಿಗಣಿಯಿಂದ ವೇಗವಾಗಿ ಬಂದ ಟಿಪ್ಪರ್ ಲಾರಿ ಪಲ್ಸರ್​ಗೆ ಡಿಕ್ಕಿ ಹೊಡೆದು ಅನಂತರ ಬೈಕ್ ಮೇಲೆ ಹರಿದಿದೆ. ಪರಿಣಾಮ ನಿಂಗಮ್ಮಳ ಎಡಗೈ ತೋಳು ಹಾಗು ತಲೆಯ ಭಾಗ ನಜ್ಜುಗುಜ್ಜಾಗಿದೆ. ಅಲ್ಲದೇ, ಅವರ ಮೊಮ್ಮಗ ಸಂದೀಪ್​ಗೂ ಗಂಭೀರ ಗಾಯಗಳಾಗಿವೆ.

ಮೃತರ ಸಂಬಂಧಿಕರಿಂದ ಲಾರಿಗೆ ಕಲ್ಲು ತೂರಾಟ: ಕೂಡಲೇ ಜನ ಅಪಘಾತದ ಸ್ಥಳಕ್ಕೆ ಬರುವುದನ್ನು ನೋಡಿ ಟಿಪ್ಪರ್ ನಿಲ್ಲಿಸಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮೃತರ ಸಂಬಂಧಿಕರು ಲಾರಿಗೆ ಕಲ್ಲು ತೂರಾಟ ನಡೆಸುವ ವೇಳೆಗೆ ಸ್ಥಳಕ್ಕೆ ಬಂದ ಪೊಲೀಸರ ಮೇಲೆಯೂ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಪರಿಸ್ಥಿತಿ ಬಿಗಡಾಯಿಸಿತ್ತು.

ಬೈಕ್‌ ಮೇಲೆ ಮೂವರು ಸವಾರಿ ಮಾಡಿದ್ದು, ಅಜಾಗರೂಕತೆಯಿಂದ ವೇಗವಾಗಿ ಬಂದ ಟಿಪ್ಪರ್ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ರಸ್ತೆಯಲ್ಲಿ ಒಂದು ಹಂಪ್​ ಅನ್ನು ಅಳವಡಿಸಿ ಜನರನ್ನು ವೇಗದ ವಾಹನಗಳಿಂದ ಕಾಪಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಸೋಮೇಶ್ವರ ರುದ್ರಪಾದೆಯಿಂದ ಸಮುದ್ರಕ್ಕೆ ಬಿದ್ದ ವಿದ್ಯಾರ್ಥಿನಿ ಸಾವು.. ಹುಟ್ಟುಹಬ್ಬದ ಮರುದಿನವೇ ದುರಂತ

ಈ ಬಗ್ಗೆ ರೈತ ಮುಖಂಡ ಅಶೋಕ್ ರೆಡ್ಡಿ ಎಂಬುವವರು ಪ್ರತಿಕ್ರಿಯಿಸಿದ್ದು, 'ಆನೇಕಲ್​ನಿಂದ ಬನ್ನೇರುಘಟ್ಟ ರೋಡ್ ಹಾಗೂ ಇಂಡ್ಲವಾಡಿ ಸರ್ಕಲ್ ಎಂದೇ ಹೆಸರುವಾಸಿ. ಪಿಡಬ್ಲ್ಯೂಡಿ ಗುತ್ತಿಗೆದಾರರು ಹಾಗೂ ಟೆಂಡರ್ ತೆಗೆದುಕೊಂಡಿರುವವರು ಕೆಲಸ ಮಾಡಿದ್ದಾರೆ. ಆದರೆ ಇಲ್ಲಿ ನೇಮ್ ಬೋರ್ಡ್​, ಟರ್ನಿಂಗ್ ಹಾಗೂ ಸಿಗ್ನಲ್​ಗಳಲ್ಲಿ ತುಂಬಾ ಪ್ರಾಬ್ಲಂ ಇದೆ. ಆ ಲಾರಿಯ ಚಾಲಕ ಯಮದೂತನಾಗಿ ಬಂದು ಮೊಮ್ಮಗ, ಮೊಮ್ಮಗಳು ಹಾಗೂ ಅಜ್ಜಿಗೆ ಗುದ್ದಿದ್ದಾನೆ. ಇದರಿಂದ ನಿಂಗಮ್ಮ ಎಂಬ ಅಜ್ಜಿ ದೇಹ ಪೂರ್ತಿ ಗುರುತು ಸಿಗದಂತಾಗಿದೆ. ಅಷ್ಟರ ಮಟ್ಟಿಗೆ ದೇಹ ನಜ್ಜುಗುಜ್ಜಾಗಿದೆ.

ಕೈ ತಲೆಯೆಲ್ಲಾ ಅಪ್ಪಚ್ಚಿಯಾಗಿದೆ. ಕರುಳೆಲ್ಲಾ ಈಚೆ ಬಂದಿದೆ. ಇದಕ್ಕೆ ಸಂಬಂದಪಟ್ಟಂತೆ ಪಿಡಬ್ಲ್ಯೂಡಿ ಅಧಿಕಾರಿಗಳು ಈಗಲೇ ಕೆಲಸ ಮಾಡಬೇಕು. ಏಕೆಂದರೆ ಮೃತರ ಸಂಬಂಧಿಕರ ಆಕ್ರಂದನ ನೋಡಿದ್ರೆ ಅವರ ನೋವು ಅರ್ಥವಾಗುತ್ತೆ. ಮೊದ್ಲು ಹಂಪ್ಸ್​​ ಹಾಕಿದ್ರು. ಈ ರೋಡ್​ ಆದಮೇಲೆ ಹಾಕಿರಲಿಲ್ಲ. ಒಂದು ಸ್ಲೋಪ್​ ಆಗಿ ಹಂಪ್ಸ್​ ಹಾಕಬೇಕು. ಕೊನೆಪಕ್ಷ ಇಲ್ಲಿ ಒಂದು ಜೀಬ್ರಾಪಟ್ಟಿಯನ್ನಾದ್ರೂ ಹಾಕಿದ್ರೆ, ಜನ ಇಲ್ಲಿ ಏನೋ ಪಟ್ಟಿ ಇದೆ ಎಂದು ನಿಧಾನವಾಗಿ ವಾಹನ ಚಲಾಯಿಸುತ್ತಾರೆ ಹೋಗುತ್ತಾರೆ' ಎಂದು ಹೇಳಿದ್ರು.

ಇದನ್ನೂ ಓದಿ : ನಿಂತಿದ್ದ ಕಾರಿಗೆ ಬೈಕ್​ ಡಿಕ್ಕಿ: ಇಬ್ಬರು ಸಾವು, ಓರ್ವನ ಸ್ಥಿತಿ ಗಂಭೀರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.