ಬೆಂಗಳೂರು: ಸಾಮಾನ್ಯವಾಗಿ ಕುಂಬಳಕಾಯಿ ಬಳ್ಳಿಯಾಗಿ ಬೆಳೆದು ಮರ ಮತ್ತು ಬೇಲಿಗೆ ಹಬ್ಬುತ್ತೆ. ಆದರೆ ಎಸ್ ಕ್ಯೂಜಿಎಲ್ 2-5 (ಸಿಹಿ ಕುಂಬಳಕಾಯಿ) ಪೊದೆಯಾಗಿ ಬೆಳೆಯುತ್ತದೆ. ಗಿಡದ ಬುಡದಲ್ಲಿ ಬೆಳೆಯುವ ಆರೆಂಜ್ ಬಣ್ಣದ ಕುಂಬಳಕಾಯಿಗಳು ಎಲ್ಲರ ಕಣ್ಮನ ಸೆಳೆಯುತ್ತವೆ.
ಭಾರತೀಯ ತೋಟಗಾರಿಕಾ ಸಂಶೋಧನನಾ ಸಂಸ್ಥೆ ಅಧಿಕ ಇಳುವರಿ ಮತ್ತು ಗುಣಮಟ್ಟದ ಕುಂಬಳಕಾಯಿ ತಳಿಗಳ ಸಂಶೋಧನೆಯಲ್ಲಿ ತೊಡಗಿದ್ದು, ಅರ್ಕಾ ಚಂದನ್, ಅರ್ಕಾ ಸೂರ್ಯಮುಗಿ ಮತ್ತು ಪ್ಯಾಟಿಪಾನ್ ತಳಿಗಳನ್ನು ಬಿಡುಗಡೆ ಮಾಡಿದೆ. ಈ ಬಾರಿಯ ತೋಟಗಾರಿಕಾ ಮೇಳದಲ್ಲಿ ಪ್ರದರ್ಶನಕ್ಕೆ ಕೂಡ ಇಡಲಾಗಿದೆ.
ಕುಂಬಳಕಾಯಿ ಬಳ್ಳಿಯಾಗಿ ಬೆಳೆಯುತ್ತದೆ. ಆದರೆ ಪ್ಯಾಟಿಪಾನ್ ತಳಿ ಬಳ್ಳಿಯ ಬದಲಿಗೆ ಪೊದೆಯಾಗಿ ಬೆಳೆಯುತ್ತೆ. ಇದರ ಕಾಯಿಗಳು ಹಾರುವ ತಟ್ಟೆಯಾಕರದಲ್ಲಿದಲ್ಲಿವೆ. ಭಾರತೀಯರು ಹಾರುವ ತಟ್ಟೆಯಾಕಾರದ ಪ್ಯಾಟಿಪಾನ್ ( ವಿದೇಶಿ ಕುಂಬಳ) ಬಗ್ಗೆ ಆಸಕ್ತಿ ತೋರಲಿಲ್ಲ. ಇದರ ಬದಲಿಗೆ ಪ್ಯಾಟಿಪಾನ್ನಂತೆಯೇ ಪೊದೆಯಾಗಿ ಬೆಳೆಯುವ ಗುಂಡಾಕಾರದ ಆರೆಂಜ್ ಬಣ್ಣದ ಕಾಯಿಗಳನ್ನು ಬಿಡುವ ಎಸ್ ಕ್ಯೂ ಜಿಎಲ್ 2-5 ( ಸಿಹಿ ಕುಂಬಳಕಾಯಿ) ತಳಿಯನ್ನು ಬಿಡುಗಡೆ ಮಾಡಲಾಗಿದೆ.
ಓದಿ : ಚಿಕ್ಕಮಗಳೂರಿನಲ್ಲಿ ವಲಸೆ ಹಕ್ಕಿಗಳ ಕಲರವ ಕ್ಷೀಣ: ಕಾಫಿನಾಡಿನತ್ತ ಮುಖ ಮಾಡದ ವಿದೇಶಿ ಅತಿಥಿಗಳು..!
ಈ ಸಿಹಿ ಕುಂಬಳಕಾಯಿ ಗಿಡದಲ್ಲಿ 40 ದಿನದಲ್ಲಿ ಫಸಲು ಬರುತ್ತದೆ. 90 ದಿನಗಳವರೆಗೂ ಕಾಯಿ ಸಿಗುತ್ತದೆ. ಒಂದು ಗಿಡ 10ರಿಂದ 15 ಕಾಯಿ ಬಿಡುತ್ತದೆ. ಪ್ರತಿಯೊಂದು ಕಾಯಿ 400ರಿಂದ 500 ಗ್ರಾಂ ತೂಕವಿರುತ್ತದೆ. ಒಂದು ಹೆಕ್ಟೇರ್ಗೆ 16 ಟನ್ ಇಳುವರಿ ಸಿಗುತ್ತದೆ. ಸಿಪ್ಪೆ ಮತ್ತು ತಿರುಳಿನಲ್ಲಿ ಕಾರ್ಬೊಹೈಡ್ರೈಡ್ ಅಂಶ ಹೆಚ್ಚಿದ್ದು, ಸಕ್ಕರೆಯ ಅಂಶ ಕಡಿಮೆ ಇದೆ. ಮಧುಮೇಹಿಗಳು ಕೂಡ ಇದನ್ನು ತಿನ್ನಬಹುದು. ಪೊದೆಯಾಗಿ ಬೆಳೆಯುವುದರಿಂದ ಸಿಹಿ ಕುಂಬಳವನ್ನು ಮನೆಯ ಟೆರೆಸ್ ಮೇಲೆ ಬೆಳೆಯಬಹುದು.