ಬೆಂಗಳೂರು: ಸಂಪಂಗಿರಾಮನಗರದ ಪ್ರಸನ್ನ ಗಣಪತಿ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ವೈಕುಂಠ ಏಕಾದಶಿ ನಡೆಯಿತು. ಪಾಂಡುರಂಗನ ಅಲಂಕಾರ ವಿಶೇಷವಾಗಿದ್ದು, ಎಲ್ಲರ ಕಣ್ಮನ ಸೆಳೆಯಿತು.
ಈ ವರ್ಷ ಕೋವಿಡ್ ಇರುವುದರಿಂದ ಮಾಸ್ಕ್, ಸಾಮಾಜಿಕ ಅಂತರ ಹಾಗೂ ಎಲ್ಲ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿತ್ತು. ಜಾಗ್ರತೆಯಿಂದ ದೇವರ ದರ್ಶನ ಪಡೆಯಲಾಗುತ್ತಿದೆ ಎಂದು ಭಕ್ತರು ತಿಳಿಸಿದರು.
ದೇವಸ್ಥಾನದ ಅರ್ಚಕರಾದ ರಾಜಾರಾಮ್ ಮೋಹನ್ ಮಾತನಾಡಿ, ಸಂಪಂಗಿರಾಮ ನಗರದಲ್ಲಿರುವ ದೇಗುಲ1977 ರಲ್ಲಿ ಸ್ಥಾಪನೆಗೊಂಡಾಗಿನಿಂದ ವೈಕುಂಠ ಏಕಾದಶಿ ನಡೆದುಕೊಂಡು ಬರುತ್ತಿದೆ. ಪ್ರತಿ ವರ್ಷ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ನಡೆಯುತ್ತದೆ. 30 ಸಾವಿರದಿಂದ 40 ಸಾವಿರ ಜನ ಸೇರುತ್ತಿದ್ದರು, ಈ ವರ್ಷ ಕೋವಿಡ್ನಿಂದಾಗಿ ಜನರು ಸ್ವಲ್ಪ ಕಮ್ಮಿ ಬಂದಿದ್ದಾರೆ ಎಂದರು.
ಓದಿ:ಎರಡೂ ಹಬ್ಬ ಆಚರಿಸಿ ಸರ್ವಧರ್ಮ ಸಮನ್ವಯತೆ ಮೆರೆದ ವಿಪಕ್ಷ ನಾಯಕ ಸಿದ್ದರಾಮಯ್ಯ
ಮಾಸ್ಕ್ ಬಳಸುವುದನ್ನು ಕಡ್ಡಾಯ ಮಾಡಿದ್ದೇವೆ. ಪ್ರಸಾದ ವ್ಯವಸ್ಥೆ ಇಲ್ಲ. ಭಕ್ತರಿಗೆ ದೇವರ ದರ್ಶನಕ್ಕೆ ಮಾತ್ರ ವ್ಯವಸ್ಥೆ ಮಾಡಿದ್ದೇವೆ. ಸಾಮಾಜಿಕ ಅಂತರ ಕಾಪಾಡುತ್ತಿದ್ದೇವೆ ಎಂದು ತಿಳಿಸಿದರು. ಮಾಜಿ ಸಚಿವರಾದ ಕಟ್ಟಾ ಸುಬ್ರಮಣ್ಯ ನಾಯ್ಡು, ಶಾಸಕರಾದ ರಿಜ್ವಾನ್ ಅರ್ಷದ್ ಕುಟುಂಬ ಸಮೇತರಾಗಿ ಬಂದು ದೇವರ ದರ್ಶನ ಪಡೆದರು.