ಬೆಂಗಳೂರು: ಲಾಕ್ಡೌನ್ ಸಂದರ್ಭದಲ್ಲಿ ದೀರ್ಘಕಾಲದ ಅನಾರೋಗ್ಯ ಸಮಸ್ಯೆ, ಶಸ್ತ್ರಚಿಕಿತ್ಸೆಗಳನ್ನು ನಿಲ್ಲಿಸಲಾಗಿತ್ತು. ಅನ್ಲಾಕ್ ಬಳಿಕ ಮಾರ್ಚ್ನಲ್ಲಿ ನಿಲ್ಲಿಸಿದ್ದ ಅಂಗಾಂಶ ಕಸಿ ಶಸ್ತ್ರಚಿಕಿತ್ಸೆ ಆರಂಭವಾಗಿದ್ದು, ಹೆಚ್ಚುವರಿ ಮುಂಜಾಗ್ರತೆಯೊಂದಿಗೆ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗುತ್ತಿದೆ.
ಈ ಸಂಬಂಧ ಈಟಿವಿ ಭಾರತ್ ಜೊತೆಗೆ ವಿಕ್ರಂ ಆಸ್ಪತ್ರೆಯ ಲಿವರ್ ಟ್ರಾನ್ಸ್ ಪ್ಲಾಂಟ್ ಸರ್ಜನ್ ಡಾ.ವಿಕ್ರಂ ಬೆಳ್ಳಿಯಪ್ಪ ಅವರು ಮಾತಾನಾಡಿ, ಕೋವಿಡ್ನಿಂದ ಮೂತ್ರಪಿಂಡ ಕಸಿ ಸೇರಿದಂತೆ ಹಲವು ಶಸ್ತ್ರಚಿಕಿತ್ಸೆಗೆ ಪರಿಣಾಮ ಬೀರಿತ್ತು. ಶೇ.60ರಷ್ಟು ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ಕಡಿಮೆಯಾಗಿತ್ತು. ಇತ್ತ ದಾನಿಗಳ ಕೊರತೆಯೂ ಎದುರಾಯಿತು ಎಂದು ತಿಳಿಸಿದರು.