ETV Bharat / state

ಲಾಭ ಗಳಿಸಲು ಖಾಸಗಿ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬರುತ್ತಿಲ್ಲ: ಅಶ್ವತ್ಥ​ ನಾರಾಯಣ - Licensing to Private Universities

ಸರ್ಕಾರಿ ಸಂಸ್ಥೆಗಳಲ್ಲೂ ಖಾಸಗಿಯವರಿಗಿಂತ ಉತ್ತಮ ಗುಣಮಟ್ಟ ತರಲು ಯತ್ನಿಸುತ್ತಿದ್ದೇವೆ. ರಾಷ್ಟ್ರಕ್ಕೆ ಮಾದರಿಯಾಗುವಂತೆ ಖಾಸಗಿಯವರೂ ಇದುವರೆಗೂ ತರಲಾಗದ ತಂತ್ರಜ್ಞಾನ ಜಾರಿಗೆ ತಂದಿದ್ದೇವೆ ಎಂದು ಡಿಸಿಎಂ ಅಶ್ವತ್ಥ​ ನಾರಾಯಣ ಹೇಳಿದ್ದಾರೆ.

ashwath-narayan
ಡಾ.ಅಶ್ವತ್ಥ್​ ನಾರಾಯಣ್​
author img

By

Published : Feb 3, 2021, 8:37 PM IST

ಬೆಂಗಳೂರು: ಖಾಸಗಿ ವಿಶ್ವವಿದ್ಯಾಲಯಗಳಿಗೆ‌ ಪರವಾನಗಿ ನೀಡುವಾಗ ಯಾವುದೇ ಲೋಪವಾಗಲ್ಲ, ಸರ್ಕಾರದ ನಿಗಾ ಇರಲಿದೆ. ತಪ್ಪು ಮಾಡಲು ಅವಕಾಶ ನೀಡಲ್ಲ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಡಿಸಿಎಂ ಡಾ. ಅಶ್ವತ್ಥ​ ನಾರಾಯಣ​ ಹೇಳಿದ್ದಾರೆ.

ಐದು ಖಾಸಗಿ ವಿಶ್ವವಿದ್ಯಾಲಯ ಅನುಮೋದನೆ ವಿಚಾರವಾಗಿ ವಿಧಾನ ಪರಿಷತ್​ನಲ್ಲಿ ಸುದೀರ್ಘ ಚರ್ಚೆ ನಂತರ ಮಾತನಾಡಿದ ಅವರು, ಸಮಾಜಕ್ಕೆ ಉತ್ತಮ ಬದುಕು, ಬಾಳ್ವೆ ತರುವಂತಾಗಬೇಕು ಎಂದು ತಿದ್ದುಪಡಿ ತಂದಿದ್ದೇವೆ. ನನ್ನ ಕಾಲಾವಧಿಯಲ್ಲಿ ಸಾಕಷ್ಟು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮಾನವ ಸಂಪನ್ಮೂಲಕ್ಕೆ ಉತ್ತಮ ಶಿಕ್ಷಣ ನೀಡುವುದು ಅತ್ಯಗತ್ಯ. ಆದರೆ ಅಗತ್ಯ ಪ್ರಮಾಣದಲ್ಲಿ ಇದುವರೆಗೂ ನೀಡಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅದಕ್ಕಾಗಿ ಸಾಕಷ್ಟು ಸುಧಾರಣೆ ತರುವ ಯತ್ನ ಮಾಡಿದ್ದೇವೆ.

ನಾನು ಅರಿವು, ತಿಳುವಳಿಕೆಯಿಂದ ಕೆಲಸ ಮಾಡಿಲ್ಲ. ಬಲಿಪಶು ಕೂಡ ಆಗಿಲ್ಲ. ಇಲ್ಲಿ ಎತ್ತಿರುವ ಪ್ರಶ್ನೆ ಸಮಂಜಸವಾಗಿದೆ. ಈ ಎಲ್ಲಾ ಸಂಸ್ಥೆಗಳು ರಾಜ್ಯದ ಶಿಕ್ಷಣ ಸಂಸ್ಥೆಗಳಾಗಿವೆ. ಶೇ. 60ರಷ್ಟು ಭರ್ತಿ, ನಿಗದಿತ ಶುಲ್ಕ ನಿಗದಿಗಾಗಿ ನಿವೃತ್ತ ನ್ಯಾಯಮೂರ್ತಿಗಳನ್ನು ನೇಮಿಸುತ್ತೇವೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ನೇಮಕ ಮಾಡಿ ಹಿಂದೆ ಕೆಲ ಕಾನೂನು ತಿದ್ದುಪಡಿ ಸಂದರ್ಭ ಆಗಿರುವ ಸಣ್ಣಪುಟ್ಟ ಲೋಪವನ್ನು ಸರಿಪಡಿಸುವ ಕಾರ್ಯ ತಿದ್ದುಪಡಿಯಲ್ಲಿ ಆಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.